ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಆಗ್ರಹ…!!!

Listen to this article

ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಆಗ್ರಹ
ಗುಳೇದಗುಡ್ಡ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಳೆದ 15-20 ವರ್ಷಗಳಿಂದ ಕೆಲಸ ಮಾಡುತ್ತಿರುವರನ್ನು ಖಾಯಂ ಮಾಡುವಂತೆ ಆಗ್ರಹಿಸಿ, 2008ರಿಂದಲೇ ಹೋರಾಟ ಮಾಡುತ್ತಬಂದಿದೇವು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ 40 ದಿನ ನಿರಂತರವಾಗಿ ಹೋರಾಟ ಮಾಡಿದ್ದೇವು. ಆಗ ನಮ್ಮ ಬೇಡಿಕೆ ಈಡೇರಿಸಲಿಲ್ಲ. ಆಗ ನಮ್ಮ ಹೋರಾಟದ ವೇದಿಕೆ ಬಂದಿದ್ದ ಈಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಮ್ಮನ್ನು ಖಾಯಂಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅವರ ಸರಕಾರ ಬಂದು ವರ್ಷಮೇಲಾಗಿದ್ದು, ಹಲವಾರು ಬಾರಿ ಅವರಿಗೆ ಮನವಿ ಮಾಡಿದರೂ ನಮ್ಮ ಬೇಡಿಕೆ ಬಗ್ಗೆ ಗಮನ ನೀಡುತ್ತಿಲ್ಲ. ಈ ಸರಕಾರಕ್ಕೆ ಆಗಷ್ಟ 15ರೊಳಗೆ ಗುತ್ತಿಗೆ ಆಧಾರದ ನೌಕರರನ್ನು ಖಾಯಂ ಮಾಡಬೇಕು ಎಂದು ಗಡುವು ನೀಡಿದ್ದೇವು. ಆದರೂ ನಮ್ಮ ಬೇಡಿಕೆ ಈಡೇರಿಸಲಿಲ್ಲಿ ಹೀಗಾಗಿ ಶುಕ್ರವಾರದಿಂದ ಕಪ್ಪುಬಟ್ಟೆ ಧರಿಸಿ, ಸಾಂಕೇತಿಕವಾಗಿ ರಾಜ್ಯಾಧ್ಯಂತ ಹೋರಾಟ ಮಾಡುತ್ತಿದ್ದೇವೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕಾರಣಿಯ ಜಿಲ್ಲಾಧ್ಯಕ್ಷ ಡಾ. ಕಲ್ಲೋಳೆಪ್ಪ ಗಾಜಿ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ.21ರ ವರಗೆ ಇದೇ ರೀತಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ಮಾಡುತ್ತೇವೆ. ಆ.21ರೊಳಗೆ ನಮ್ಮನ್ನು ಖಾಯಂ ಮಾಡಬೇಕು. ಇಲ್ಲವಾದಲ್ಲಿ ಆ. 22ರಿಂದ ಮೂರುದಿನಗಳವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಇದಕ್ಕೂ ನಮ್ಮ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಉಗ್ರಪ್ರತಿಭಟನೆ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಯೂಷ್ಯ ವೈದ್ಯಾಧಿಕಾರಿ ಕವಿತಾ ಸಂಕ, ಆಪ್ತಸಮಾಲೋಚಕಿ ಜಯಶ್ರೀ ಕಳಸಾ, ಹನಮಂತಪ್ಪ ಅಪ್ಪಣ್ಣವರ, ಗಂಗಾಧರ ಹಣಗಿ, ತಬಿತಾ ಬಿರನೂರ, ಸವಿತಾ ಗಡೇದ, ಮಂಜುಳಾ ಚೌಡಾಪೂರ, ಲಕ್ಷ್ಮೀ ಹೆಬ್ಬಳ್ಳಿ, ಶಂಕ್ರಪ್ಪ ಕತ್ತಿಕೈ, ರಾಚಣ್ಣ ಪಟ್ಟಣದ, ಮಂಜುನಾಥ ಪದರಾ, ಶಕುಂತಲಾ ಹೊಸಮನಿ ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend