ಗುರುಸಿದ್ದೇಶ್ವರ ಬೃಹನ್ಮಠ ನಾಡಿನಲ್ಲಿ ದೊಡ್ಡ ಹೆಸರು ಮಾಡಿದೆ : ಚಿಮ್ಮನಕಟ್ಟಿ…!!!

Listen to this article

ಗುರುಸಿದ್ದೇಶ್ವರ ಬೃಹನ್ಮಠ ನಾಡಿನಲ್ಲಿ ದೊಡ್ಡ ಹೆಸರು ಮಾಡಿದೆ : ಚಿಮ್ಮನಕಟ್ಟಿ

ಗುಳೇದಗುಡ್ಡ: ಪಟ್ಟಣದ ಶ್ರೀ ಜ. ಗುರುಸಿದ್ದೇಶ್ವರ ಬೃಹನ್ಮಠ ನಾಡಿನಲ್ಲಿ ದೊಡ್ಡ ಹೆಸರು ಮಾಡಿದೆ. ಈಗ ಮಠಕ್ಕೆ ಮೂರನೇ ತಲೆಮಾರಿನ ಪಟ್ಟಾಧಿಕಾರ ಮಹೋತ್ಸವ ಜರುಗುತ್ತಿದ್ದು, ಈ ಭಾಗದ ಶಾಸಕನಾದ ನನಗೆ ಶ್ರೀಗಳ ಪಟ್ಟಾಭಿಷೇಕ ಸಮಾರಂಭದಲ್ಲಿ ಸಮಿತಿ ನನಗೆ ನೀಡಿದ ಯಾವುದೇ ಕೆಲಸವನ್ನು ಅಭಿಮಾನ ಹಾಗೂ ಗೌರವದಿಂದ ಮಾಡುತ್ತೇನೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಶನಿವಾರ ಪಟ್ಟಣದ ಜ. ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಜರುಗಿದ ಪಟ್ಟಾಭಿಷೇಕ ನಿರ್ವಹಣಾ ಸಮಿತಿ ರಚನೆಗೆ ಕರೆದ ಮುಖಂಡರ ಸಭೆಯಲ್ಲಿ ಮಾತನಾಡಿ,. ಈ ಭಾಗದ ಶಾಸಕನಾದ ನನಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಪುಣ್ಯದ ಕೆಲಸವೇ ಸರಿ ಎಂದರು.
ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದ ಶ್ರೀಮಠ ಒಂದು ಜಾತಿಗೆ ಸೀಮಿತವಾದುದಲ್ಲ. ಪಟ್ಟಸಾಲಿ ನೇಕಾರ ಸಮಾಜದ ಮಠ ಎಂದು ಕರೆಯಿಸಿಕೊಂಡರೂ ಎಲ್ಲ ಧರ್ಮ, ಜಾತಿಯ ಭಕ್ತರನ್ನು ಒಳಗು ಮಾಡಿಕೊಂಡು 1937 ರಲ್ಲಿ ಸ್ಥಾಪಿತವಾದ ಮಠವಿದು. ಶ್ರೀಮಠದ ತೃತೀಯ ಪೀಠಾಧಿಕಾರಿ ಎಂದು ಶ್ರೀ ಗುರುಬಸವ ದೇವರನ್ನು ಘೋಷಿಸಿದ್ದೂ, ಅವರ ಪಟ್ಟಾಭೀಷೇಕ ಕಾರ್ಯಕ್ರಮ ಬರುವ ಡಿ.23 ರಂದು ಜರುಗಲಿದೆ. ಆ ಕಾರ್ಯಕ್ರಮದ ಪೂರ್ವಭಾವಿಯಾಗಿ ಕರೆದ ಈ ಸಭೆಯಲ್ಲಿ ಭಕ್ತಾಧಿಗಳು ಸಮಾರಂಭದ ರೂಪರೇಷೆಗಳ ನೀಲನಕ್ಷೆ ತಯಾರಿಸಿ ಸ್ವಾಗತ ಸಮಿತಿ ರಚಿಸಿ ಎಂದು ಕೇಳಿಕೊಂಡರು.
ಚಿತ್ತರಗಿ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮಿಗಳು, ಶಿರೂರಿನ ಮಹಾಂತತೀರ್ಥ ಶ್ರೀ ಬಸವಲಿಂಗ ಸ್ವಾಮಿಳು, ಹೊಳೆಹುಚ್ಚೇಶ್ವರ ಮಠದ ಶ್ರೀ ಹುಚ್ಚೇಶ್ವರ ಶ್ರೀಗಳು, ಶ್ರೀ ನೀಲಕಂಠ ಸ್ವಾಮಿಗಳು, ಜನವಾಡದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಅಭಿನವ ಒಪ್ಪತ್ತೇಶ್ವರ ಶ್ರೀಗಳು ಪಟ್ಟಾಭಿಷೇಕ ಕಾರ್ಯಕ್ರಮದ ಯಶಸ್ವಿಗೆ ನಾವೆಲ್ಲ ಪಾಲ್ಗೊಳ್ಳುವದಾಗಿ ಮಾತನಾಡಿದರು.
ಶ್ರೀ ಗುರುಬಸವ ದೇವರು, ಮಾಜಿ ಶಾಸಕ ರಾಜಶೇಖರ ಶೀಲವಂತ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್, ಚಂದ್ರಕಾಂತ ಶೇಖಾ, ಸಂಜಯ ಬರಗುಂಡಿ, ಅಶೋಕ ಬರಗುಂಡಿ, ಸಂಗನಬಸಪ್ಪ ಚಿಂದಿ, ರಾಜು ಜವಳಿ, ಮಲ್ಲೇಶಪ್ಪ ಬೆಣ್ಣಿ, ಶಶಿಧರ ದೇಸಾಯಿ, ಸಿ.ಎಂ.ಚಿಂದಿ, ಗೌರಮ್ಮ ಕಲಬುರ್ಗಿ, ಭಾಗ್ಯಾ ಉದ್ನೂರ, ಶಿವಾನಂದ ಎಣ್ಣಿ ಇತರರು ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend