ಬಳ್ಳಾರಿ: ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ…!!!

Listen to this article

ಬಳ್ಳಾರಿ: ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ

ಮನುಷ್ಯನ ಮುಪ್ಪು ತಡೆಗಟ್ಟುವಿಕೆಗೆ ‘ಕುಟಿ ಪ್ರಾವೇಶಿಕ ರಸಾಯನ ಚಿಕಿತ್ಸೆ’-ಡಾ.ಅದ್ರಿಜಾ

ಬಳ್ಳಾರಿ:‘ಕುಟಿ ಪ್ರಾವೇಶಿಕ ರಸಾಯನ ಚಿಕಿತ್ಸೆ’ಯು ಮನುಷ್ಯನ ವಯೋಸಹಜ ಮುಪ್ಪು ಮತ್ತು ಅಕಾಲ ಮುಪ್ಪಾಗುವುದನ್ನು ತಡೆಗಟ್ಟುತ್ತದೆ. ವೃದ್ಧ ವ್ಯಕ್ತಿಯು ರಸಾಯನ ಚಿಕಿತ್ಸೆ ಪಡೆದು, ವಯಸ್ಸಿನ ಅನಿಯಮಿತ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಕೇರಳ ರಾಜ್ಯದ ಪಾಲಕ್ಕಾಡ್‌ನ ಪರಿಣಿತ ವೈದ್ಯರಾದ ಡಾ.ಅದ್ರಿಜಾ ಅವರು ಹೇಳಿದರು.
ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಒಂದು ದಿನದ ವೈಜ್ಞಾನಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕಲ್ಪ ಚಿಕಿತ್ಸೆಯಿಂದ ಯೌವ್ವನ ಪಡೆಯಬಹುದು. ದೇಶ ವಿದೇಶಗಳಿಂದ ಈ ಚಿಕಿತ್ಸೆ ಪಡೆಯಲು ಕೇರಳಕ್ಕೆ ಜನರು ಬರುತ್ತಿದ್ದಾರೆ. ಈ ಕುರಿತು ಅನೇಕ ವೈಜ್ಞಾನಿಕ ದಾಖಲೆಗಳನ್ನು ಪ್ರಸ್ತುತ ಪಡಿಸಿದರು.
ಇದೇ ಸಂದರ್ಭದಲ್ಲಿ ತಂತ್ರಶಾಸ್ತç, ಆಗಮ ಶಾಸ್ತç, ವಾಸ್ತು ಮತ್ತು ಆಯುರ್ವೇದದ ಪ್ರಕಾರ ಚಿಕಿತ್ಸೆಗಾಗಿ “ವಿಶೇಷ ತ್ರಿಗರ್ಭಾ ಕುಟಿ” ನಿರ್ಮಾಣದ ಮಹತ್ವ ತಿಳಿಸಿದರು.
ಕಾರ್ಯಾಗಾರದಲ್ಲಿ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಮಾಧವ ದಿಗ್ಗಾವಿ, ಬೆಂಗಳೂರು ಆಯುಷ್ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಎನ್.ಎ.ಮೂರ್ತಿ, ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಜಿ.ಆರ್.ವಸ್ತçದ, ಖ್ಯಾತ ರಸ ಚಿಕಿತ್ಸಕ ಡಾ.ಎಲ್.ನಾಗಿರೆಡ್ಡಿ, ಕಟ್ಟಡ ನಿರ್ಮಾಣ ಅಭಿಯಂತರ ಸಂಜೀವ ಪ್ರಸಾದ್ ಸೇರಿದಂತೆ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ, ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend