ಸಂಗನಕಲ್ಲು ಗ್ರಾಮದಲ್ಲಿ ಬೀದಿ ನಾಟಕ ಕಾರ್ಯಕ್ರಮ; ಗ್ಯಾರೆಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ
ಬಳ್ಳಾರಿ:ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರೆಂಟಿ ಯೋಜನೆಗಳಿಂದ ಬಡವರಿಗೆ ಕೂಲಿ ಕಾರ್ಮಿಕರಿಗೆ ಬಹಳ ಉಪಯೋಗವಾಗುತ್ತಿವೆ ಎಂದು ಸಂಗನಕಲ್ಲು ಗ್ರಾಮದ ಹಿರಿಯ ಮುಖಂಡ ಪಂಪನಗೌಡ ಅವರು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಆಶ್ರಯದಲ್ಲಿ ಚಿಗುರು ಕಲಾತಂಡದಿoದ ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಅತ್ಯಂತ ಮೆಚ್ಚುಗೆಯಾದ ಶಕ್ತಿ ಯೋಜನೆಯಡಿ ಬಸ್ ಪ್ರಯಾಣ, ಪ್ರತಿ ತಿಂಗಳು ಗೃಹ ಒಡತಿಯರಿಗೆ 2 ಸಾವಿರ ರೂ., ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಅನ್ನಭಾಗ್ಯ, ಯುವ ನಿಧಿ ಯೋಜನೆಗಳಿಂದ ಅನುಕೂಲವಾಗುತ್ತಿದೆ ಎಂದರು.
ಗ್ರಾಪo ಹಂತದಲ್ಲಿ ಸರ್ಕಾರದ ಯೋಜನೆಗಳನ್ನು ಬೀದಿ ನಾಟಕ ಮೂಲಕ ತಿಳಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂಬ ಅರಿವು ಮೂಡುತ್ತದೆ. ಇದರಿಂದ ಸರ್ಕಾರದ ಯೋಜನೆಗಳು ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗನಕಲ್ಲು ಗ್ರಾಮ ಪಂಚಾಯತಿ ಕಾರ್ಯದರ್ಶಿ ತಿಮ್ಮಪ್ಪ, ಬಿಲ್ ಕಲೆಕ್ಟರ್ ಹುಲುಗಪ್ಪ, ಗ್ರಾಮದ ಹಿರಿಯರಾದ ಕೆ.ಶಂಕ್ರಪ್ಪ, ಮಲ್ಲಿಕಾರ್ಜುನ, ಈಶ್ವರ್ ಗೌಡ ಮತ್ತು ಕಲಾವಿದರಾದ ಹುಲುಗಪ್ಪ ಎಸ್.ಎಂ, ಎಚ್.ರಮೇಶ್, ಬಿ.ಆನಂದ, ಹೆಚ್.ರ‍್ರಿಸ್ವಾಮಿ, ಡಿ.ಹೇಮಂತ, ವೈ.ತಾಯಪ್ಪ, ಎಚ್.ಗಂಗಮ್ಮ, ರುತ್ತಮ್ಮ ಹಾಗೂ ಇತರರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030