ಕೃಷಿ ಇಲಾಖೆ; ಸಮಗ್ರ ಬೆಳೆ ನಿರ್ವಹಣೆ ಗುಚ್ಚ ಪ್ರಾತ್ಯಕ್ಷಿಕೆರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ಡಾ.ಸೋಮಸುಂದರ್…!!!

Listen to this article

ಕೃಷಿ ಇಲಾಖೆ; ಸಮಗ್ರ ಬೆಳೆ ನಿರ್ವಹಣೆ ಗುಚ್ಚ ಪ್ರಾತ್ಯಕ್ಷಿಕೆರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ಡಾ.ಸೋಮಸುಂದರ್

ಬಳ್ಳಾರಿ,:ರೈತರ ಜೀವನ ಸುಗಮಗೊಳ್ಳಲು ಸರ್ಕಾರದ ವಿವಿಧ ಕೃಷಿ ಯೋಜನೆಗಳನ್ನು ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಸೋಮಸುಂದರ್ ಕೆ.ಎಂ ಅವರು ತಿಳಿಸಿದರು.
ಕೃಷಿ ಇಲಾಖೆ ವತಿಯಿಂದ ರಾಷ್ಟಿಯ ಆಹಾರ ಭದ್ರತೆ ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಹಲಕುಂದಿ, ಸಂಜೀವರಾಯನಕೋಟೆ, ಕುರುಗೋಡು ತಾಲ್ಲೂಕಿನ ಸಿಂಧಿಗೇರಿ ಗ್ರಾಮಗಳಲ್ಲಿ ಎಫ್‌ಎನ್‌ಎಸ್ ಯೋಜನೆಯ ತೊಗರಿ ಸಜ್ಜೆ ಕ್ಷೇತ್ರಗಳ ಸಮಗ್ರ ಬೆಳೆ ನಿರ್ವಹಣೆ ಗುಚ್ಚ ಪ್ರಾತ್ಯಕ್ಷಿಕೆೆ ತೋರ್ಪಡಿಸಿ ಅವರು ಮಾತನಾಡಿದರು.
ರೈತರು ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ ವಂಚಿತರಾಗದೇ, ಪ್ರತಿಯೊಬ್ಬ ಅರ್ಹ ರೈತರು ಯೋಜನೆಗಳ ಸಂಪೂರ್ಣ ಮಾಹಿತಿ ಪಡೆದುಕೊಂಡು, ಫಲಾನುಭವಿಗಳಾಗಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಅದೇರೀತಿಯಾಗಿ ರೈತಾಪಿ ವರ್ಗದವರು ತಪ್ಪದೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದರು.
ರಾಷ್ಟಿಯ ಆಹಾರ ಭದ್ರತೆಯ ಸಂಯೋಜಕರಾದ ಡಾ.ಪಿ.ಕೆ ಸಾಹಾ ಅವರು ಮಾತನಾಡಿ, ತೊಗರಿಯ ಹೆಚ್ಚ್ಚಿನ ಇಳುವರಿ ಪಡೆಯಲು ಆಧುನಿಕ ತಂತ್ರಜ್ಞಾನ ಮತ್ತು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಸಿರಿಧಾನ್ಯ ಬೆಳೆಗಳ ಮಹತ್ವ ಪ್ರತಿಯೊಬ್ಬ ರೈತರು ಅರಿಯಬೇಕು ಎಂದು ಹೇಳಿದರು.
ಪ್ರಸ್ತುತ ಕೃಷಿಯಲ್ಲಿರುವ ಕೂಲಿಕಾರರ ಸಮಸ್ಯೆಯನ್ನು ನಿಭಾಯಿಸಲು ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಔಷಧಿ ಸಿಂಪರಣೆ ಮಾಡಲು ಡ್ರೋನ್ ಬಳಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಿಂಧಿಗೇರಿ ಗ್ರಾಮದಲ್ಲಿ ತೊಗರಿ ಮತ್ತು ನವಣೆ ಮಿಶ್ರ ಬೆಳೆಯ ಕ್ಷೇತ್ರದಲ್ಲಿ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಸಿಂಪರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಎನ್.ಕೆಂಗೇಗೌಡ, ಸಹಾಯಕ ಕೃಷಿ ನಿರ್ದೇಶಕ ದಯಾನಂದ್.ಎ.ಬಳ್ಳಾರಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ್ ಸಿಂಧಿಗೆರಿ, ಕೋಳೂರಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಯೇಸು ಬಾಬು.ಕೆ., ಸೇರಿದಂತೆ ಸಿಬ್ಬಂದಿಗಳಾದ ವಾಣಿ, ರೇಣುಕಾರಾಧ್ಯ ಮತ್ತು ರೈತರು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend