ಹೆಣ್ಣುಮಕ್ಕಳ ಬಂಜೆತನ ನಿವಾರಣೆಗಾಗಿ ಉಚಿತ ಆರೋಗ್ಯ
ತಪಾಸಣೆ ಶಿಬಿರ ನಡೆಸುತ್ತಿರುವುದು ಅರ್ಥಪೂರ್ಣ ಕಾರ್ಯ
ಬಂಜೆತನನಿವಾರಣೆತಜ್ಞವೈದ್ಯ ಶ್ರೀಮತಿ ಡಾ.ರಶ್ಮಿಸ್ವರೂಪ್
ಹಿರಿಯೂರು:
ನಗರದಲ್ಲಿ ಜನರ ಆರೋಗ್ಯ ಸುರಕ್ಷತೆಗಾಗಿ ಆರೋಗ್ಯ ತಪಾಸಣೆ ಶಿಬಿರಗಳು ನಡೆಸುತ್ತಲೇ ಇರುವುದು ಅತ್ಯಂತ ಸಂತಸದ ವಿಚಾರವಾಗಿದ್ದು, ಇದೀಗ ಹೆಣ್ಣುಮಕ್ಕಳ ಬಂಜೆತನ ನಿವಾರಣೆಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸುತ್ತಿರುವುದು ಅರ್ಥಪೂರ್ಣ ಕಾರ್ಯವಾಗಿದೆ ಎಂಬುದಾಗಿ ಬಂಜೆತನ ನಿವಾರಣೆ ತಜ್ಞವೈದ್ಯರಾದ ಶ್ರೀಮತಿ ಡಾ.ರಶ್ಮಿಸ್ವರೂಪ್ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಂಸ್ಥೆ ಹಾಗೂ ಹೋಪ್ ಫರ್ಟಿಲಿಟಿ ಕೇಂದ್ರ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಬಂಜೆತನ ನಿವಾರಣೆ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮದುವೆಯಾದ ಹೆಣ್ಣಿಗೆ ಮಕ್ಕಳಾಗದಿದ್ದರೆ ಆ ಹೆಣ್ಣನ್ನು ದೂಷಿಸಬಾರದು.ಗಂಡು-ಹೆಣ್ಣುಗಳ ಸಮಾಲೋಚನೆ ನಡೆಸಿ ತಿಳುವಳಿಕೆ ನೀಡಿ ಸಮಸ್ಯೆಗೆ ಪರಿಹಾರ ಹುಡುಕಬೇಕು. ಹೆಣ್ಣಿನ ಬಂಜೆತನ ನೀವಾರಣೆ ಮಾಡುವಂತ ಇಂತಹ ಶಿಬಿರವನ್ನು ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಹಮ್ಮಿಕೊಂಡಿರುವುದು ನಿಜಕ್ಕೂ ಹಲವಾರು ಮಹಿಳೆಯರಿಗೆ ಸಹಾಯಕವಾಗಲಿದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಹೆಚ್.ಜಿ.ಕಿರಣ್, ರಾಘವೇಂದ್ರಾಚಾರ್, ಜೋಗಪ್ಪ, ಟಿ.ಮಲ್ಲೇಶಪ್ಪ, ಎಲ್.ಆನಂದಶೆಟ್ಟಿ, ರೋಟರಿ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್, ಕಾರ್ಯದರ್ಶಿ ಎಂ.ಎಸ್. ರಾಘವೇಂದ್ರ, ಸಣ್ಣಭೀಮಣ್ಣ, ಪಿ.ಆರ್.ಸತೀಶ್ ಬಾಬು, ಪರಮೇಶ್ವರಭಟ್, ಹೋಪ್ ಫರ್ಟಿಲಿಟಿ ಕೇಂದ್ರದ ಡಾ.ತನ್ಮಯ್, ಅಭಿರಾಮ್, ಭಾನುಮತಿ, ಕೋ-ಆರ್ಡಿನೇಟರ್ ಗಿರೀಶ್ ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030