ಅಚಲವಾದ ಆತ್ಮವಿಶ್ವಾಸವನ್ನು ಹೊಂದಿದ್ದರೆ, ಉತ್ತಮ ಸಾಧನೆಯನ್ನು ಸಾಧಿಸಬಹುದು…!!!

Listen to this article

ಅಚಲವಾದ ಆತ್ಮವಿಶ್ವಾಸವನ್ನು ಹೊಂದಿದ್ದರೆ, ಉತ್ತಮ ಸಾಧನೆಯನ್ನು ಸಾಧಿಸಬಹುದು: ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ.

ಧಾರವಾಡ: ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲ. ಅಚಲವಾದ ಆತ್ಮ ವಿಶ್ವಾಸವನ್ನು ಹೊಂದಿದ್ದರೆ, ಉತ್ತಮ ಸಾಧನೆಯನ್ನು ಸಾಧಿಸಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು.

ಅವರು ಇಂದು ಮಧ್ಯಾಹ್ನ ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ನೇಚರ್ ಫಸ್ಟ್ ಇಕೋ ವಿಲ್ಹೇಜ್‍ನಲ್ಲಿ ಆಯೋಜಿಸಲಾಗಿದ್ದ ಬಾಲಮಂದಿರಗಳ ಮಕ್ಕಳಿಗೆ ರಾಜ್ಯ ಮಟ್ಟದ ಮಕ್ಕಳ ಕಥಾ ಕಮ್ಮಟದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಜಿಲ್ಲೆಯ ವಿವಿಧ ಸಾಧಕರಿಂದ ಮಕ್ಕಳ ಜೊತೆ ಸಂವಾದ ಕಾರ್ಯಕ್ರಮವನ್ನು ಮಾಡಲಾಗಿದ್ದು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೋಲೀಸ್ ಆಯುಕ್ತ ಎನ್.ಶಶಿಕುಮಾರ ಸೇರಿದಂತೆ ಅನೇಕ ಸಾಧಕರ ಜೊತೆ ಮಕ್ಕಳು ಸಂವಾದ ಮಾಡಿದ್ದಾರೆ. ಬಾಲಮಂದಿರದ ಮಕ್ಕಳು ನೋವು ನುಂಗಿ, ಹೊಸ ಕನಸ್ಸು ಮತ್ತು ಭರವಸೆಯಿಂದ ಮುಂದೆಸಾಗಿ ಉತ್ತಮ ಸಾಧನೆ ಮಾಡಿ, ಅವಮಾನ ಮಾಡಿದವರಿಂದ ಸನ್ಮಾನ ಮಾಡಿಸಿಕೊಳ್ಳುವಂತೆ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಬಾಲಮಂದಿರಗಳಿಗೆ ಪ್ರವಾಸ ಕೈಗೊಂಡು, ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು. ಮತ್ತು ಉತ್ತಮ ಸ್ಪಂದನೆ ನೀಡುವಂತಹ ಬಾಲಮಂದಿರಗಳಿಗೆ ಅಕಾಡೆಮಿಯಿಂದ ಅಭಿನಂದನಾ ಪತ್ರ ನೀಡಲಾಗುವುದು ಎಂದು ಅವರು ತಿಳಿಸಿದರು.

ಸೆಪ್ಟೆಂಬರ್ 17 ರಿಂದ 21, 2024 ರವರೆಗೆ ಆಯೋಜಿಸಿದ್ದ ಮೊದಲನೇ ತಂಡದ ಮಕ್ಕಳ ಕಥಾ ಕಮ್ಮಟದಲ್ಲಿ 9 ಜಿಲ್ಲೆಯ (ಧಾರವಾಡ, ಬೆಳಗಾವಿ, ವಿಜಯಪುರ, ಶಿವಮೊಗ್ಗ, ದಾವಣಗೆರೆ, ಯಾದಗಿರಿ, ಕಲಬುರ್ಗಿ, ಮೈಸೂರು ಹಾಗೂ ಮಂಡ್ಯ) 44 ಮಕ್ಕಳು ಮತ್ತು 9 ಜನ ಕೇರ್ ಟೆಕರ್ಸ್ ಪಾಲ್ಗೊಂಡಿದ್ದರು. ಅಕ್ಟೋಬರ್ 1 ರಿಂದ 5, 2024 ರವರೆಗೆ ಆಯೋಜಿಸಿದ್ದ ಎರಡನೇ ತಂಡದ ಮಕ್ಕಳ ಕಥಾ ಕಮ್ಮಟದಲ್ಲಿ 9 ಜಿಲ್ಲೆಯ (ಬೀದರ್, ಚಿತ್ರದುರ್ಗ, ಹಾವೇರಿ, ಚಾಮರಾಜನಗರ, ಚಿಕ್ಕಮಂಗಳೂರು, ಉತ್ತರ ಕನ್ನಡ, ಹಾಸನ, ತುಮಕೂರು ಹಾಗೂ ರಾಯಚೂರು) 45 ಮಕ್ಕಳು ಮತ್ತು 9 ಜನ ಕೇರ್ ಟೆಕರ್ಸ್ ಪಾಲ್ಗೊಂಡಿದ್ದರು. ಮೂರನೇ ತಂಡದ ಮಕ್ಕಳ ಕಥಾ ಕಮ್ಮಟದಲ್ಲಿ 10 ಜಿಲ್ಲೆಯ (ಗದಗ, ಕೊಡಗು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಕೊಪ್ಪಳ, ಬಾಗಲಕೋಟ, ಉಡುಪಿ ಹಾಗೂ ಬಳ್ಳಾರಿ) 47 ಮಕ್ಕಳು ಮತ್ತು 10 ಜನ ಕೇರ್ ಟೆಕರ್ಸ್ ಪಾಲ್ಗೊಂಡಿದ್ದರು.

ಒಟ್ಟಾರೆಯಾಗಿ 28 ಜಿಲ್ಲೆಯಿಂದ 136 ಮಕ್ಕಳು, 28 ಜನ ಕೇರ್ ಟೆಕರ್ಸ್ ಮಕ್ಕಳ ಕಥಾ ಕಮ್ಮಟದಲ್ಲಿ ಭಾಗಿಯಾಗಿದ್ದರು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಥಾ ಕಮ್ಮಟಕ್ಕೆ ಬಂದಿರುವ ಮಕ್ಕಳ ಕನಸು ಮತ್ತು ನೋವುಗಳನ್ನು ಒಳಗೊಂಡ ಮಕ್ಕಳು ಬರೆದಿರುವ 400 ಪುಟಗಳ ಕಥಾ ಕಮ್ಮಟ ಪುಸ್ತಕವನ್ನು ಬಿಡುಗಡೆ ಮಾಡಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಮೃತ ಸಾಣಿಕೊಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುವರ್ಣಲತಾ ಮಠದ ವಂದಿಸಿದರು.

ಖ್ಯಾತ ಮನೋತಜ್ಞ ವೈದ್ಯ ಡಾ. ಆನಂದ ಪಾಂಡುರಂಗಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಯೋಜನಾಧಿಕಾರಿ ಭಾರತಿ ಶೆಟ್ಟರ, ಕಮ್ಮಟ ನಿರ್ದೇಶಕ ನಿಲಕಾಂತಗೌಡ ಹಾಲಪ್ಪಗೌಡರ್ ಸೇರಿದಂತೆ ಕೆರ್ ಟೆಕರ್ಸ್ ಹಾಗೂ ಬಾಲಮಂದಿರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರಾಮನಗರ ಜಿಲ್ಲೆಯ ಬಾಲಮಂದಿರದ ವಿದ್ಯಾರ್ಥಿನಿ ವರಲಕ್ಷ್ಮೀ ಅನಿಸಿಕೆ: ಪರಿಸರದಲ್ಲಿ ಬೆಳೆಯುವಂತ ವಿವಿಧ ಔಷಧಿ ಗಿಡಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಹೇಗೆ ಕಥೆ ಬರೆಯಬೇಕು ಬೆಂಬುವುದನ್ನು ತಿಳಿದುಕೊಂಡಿದ್ದೇನೆ ಎಂದು ತಿಳಿದು ಜಿಲ್ಲೆಯ ಬಾಲಮಂದಿರದ ವಿದ್ಯಾರ್ಥಿನಿ ಮೇಘನಾ ಅನಿಸಿಕೆ: ವಿವಿಧ ಗಿಡ ಮೂಲಿಕೆ, ಉತ್ತಮ ಹಣ್ಣಿನ ಗಿಡ ಮರಗಳ ಮತ್ತು ವಿವಿಧ ಕತೆಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದಳು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend