ಜಿಲ್ಲಾ ಗೃಹರಕ್ಷಕ ದಳ,ಡಾ. ಸತೀಶ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಪದಕ
ಧಾರವಾಡ: ಜಿಲ್ಲೆಯ ಗೃಹರಕ್ಷಕ ದಳದ ಸತೀಶ ಇರಕಲ್ ಅವರು ಧಾರವಾಡ ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಸಲ್ಲಿಸಿದ ಉತ್ತಮ ಸೇವೆಗೆ 2024 ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ಲಭಿಸಿದೆ. ಮತ್ತು ಧಾರವಾಡ ಗೃಹರಕ್ಷಕಿ ದಳದ ಜಯಶ್ರೀ.ಬಿ.ಪಾಟಿಲ್ ಅವರು ಆಗಸ್ಟ್ 1 ರಿಂದ 13 ರವರೆಗೆ ಬಳ್ಳಾರಿ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ನಡೆದ ಪುನರ್ ಮನನ ತರಬೇತಿಯಲ್ಲಿ ಭಾಗವಹಿಸಿ, ಚಿನ್ನದ ಪದಕವನ್ನು ಪಡೆಕೊಂಡಿದ್ದಾರೆ.
ಇವರನ್ನು ಧಾರವಾಡ ಜಿಲ್ಲೆಗೆ ಮತ್ತು ಗೃಹರಕ್ಷಕ ದಳದ ಇಲಾಖೆಗೆ ಕೀರ್ತಿಯನ್ನು ತಂದಿದ್ದಾರೆ. ಆದ್ದರಿಂದ ಧಾರವಾಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಸುನೀಲ್ ಸರೂರ ಮತ್ತು ಕಛೇರಿ ಸಿಬ್ಬಂದಿ ವರ್ಗದವರು ಹಾಗೂ ಧಾರವಾಡ ಘಟಕದ ಘಟಕಾಧಿಕಾರಿಗಳು, ಗೃಹರಕ್ಷಕ ಅಧಿಕಾರಿಗಳು, ಗೃಹರಕ್ಷಕರು ಹಾಗೂ ಗೃಹರಕ್ಷಕಿಯರು ಅಭಿನಂದಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030