ತಂಬಾಕಿನ ದುಷ್ಪರಿಣಾಮದ ಅರಿವು ಮೂಡಿಸಲು ಹೆಚ್ಚಿನ ಗಮನ ವಹಿಸಬೇಕು ನ್ಯಾ.ಮಹಾವೀರ್ ಮ. ಕರೆಣ್ಣವರ
ದಾವಣಗೆರೆನ; ತಂಬಾಕು ಸೇವನೆ ಮಾನವನ ಜೀವನಕ್ಕೆ ಅಪಾಯವೆಂದು ತಿಳಿದಿದ್ದರೂ, ಅದರ ಚಟಕ್ಕೆ ಬಿದ್ದು ಯುವಜನತೆ ಹಾಳಾಗುತ್ತಿರುವುದು ಬೇಸರ ಸಂಗತಿ. ಪ್ರತಿಯೊಬ್ಬರು ತಂಬಾಕಿನಿಂದ ದೂರವಿರಲು ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮಾ.ಕರೆಣ್ಣವರ್ ತಿಳಿಸಿದರು.
ಅವರು ಜಿಲ್ಲಾಡಳಿತ,ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇಲಾಖೆ ಸಹಯೋಗದಲ್ಲಿ ಅಪರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ. ತೃತೀಯ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಮಟ್ಟದ ಸಭೆಗೆ ಸಂಬಂಧ ಪಟ್ಟ ಅಧಿಕಾರಿಗಳು ಅಂಕಿ ಅಂಶಗಳೊಂದಿಗೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಎಚ್ಚರಿಕೆ ನೀಡಲಾಯಿತು. ರೈಲ್ವೆ ಇಲಾಖೆ ಪೊಲೀಸ್ ಇಲಾಖೆ ಉತ್ತಮವಾದ ಕೆಲಸ ನಿರ್ವಹಿಸುತ್ತಿದೆ. ಅದೇ ರೀತಿ ಇನ್ನಿತರೆ ಇಲಾಖೆಗಳು ಹೆಚ್ಚಿನ ಮಟ್ಟದಲ್ಲಿ ಗಮನವಿಟ್ಟು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
6 ತಾಲ್ಲೂಕುಗಳ ಬಿ.ಇ.ಓ ಗಳು ಸಭೆಗೆ ಗೈರು ಆಗಿರುವುದರಿಂದ ಅವರುಗಳಿಗೆ ನೋಟೀಸ್ ಜಾರಿ ಮಾಡಲು ತಿಳಿಸಿದರು.
ತಂಬಾಕು, ಬಾಲ್ಯ ವಿವಾಹ, ಪೋಕ್ಸೊ ಬಗ್ಗೆ ಮಾಹಿತಿ ನೀಡಲು ಪ್ರತಿಯೊಂದು ಶಾಲೆಯಲ್ಲಿ ಸಮಿತಿಯಾಗಬೇಕು ಎಂದು ತಿಳಿಸಿದರು. ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ತಂಬಾಕು ಸೇವನೆ, ಪೋಕ್ಸೊ ಕಾಯ್ದೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ರಾಘವನ್ ಜಿ.ಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 235 ಐ.ಈ.ಸಿ ಅರಿವು ಕಾರ್ಯಕ್ರಮವನ್ನು ಇಲ್ಲಿಯವರೆಗೆ ಅನುಷ್ಟಾನ ಮಾಡಲಾಗಿದೆ. ಹಾಗೂ ದಾವಣಗೆರೆ 7, ಹೊನ್ನಾಳಿ 5, ಜಗಳೂರು 4, ಚನ್ನಗಿರಿ 4 , ಹರಿಹರ 1 ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯಿಂದ 64 , ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 16 ತಂಬಾಕು ಮುಕ್ತ ಸಂಸ್ಥೆ ಎಂದು ಘೋಷಿಸಲಾಗಿದೆ. ವಿಭಾಗವಾರು ಸೆಕ್ಷನ್ 4, 6ಎ, 6ಬಿನಿಂದ 633 ಪ್ರಕರಣಗಳಿಂದ 91900 ರೂ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ. ಹಾಗೂ ಪೊಲೀಸ್ ಇಲಾಖೆಯಿಂದ 3744 ಪ್ರಕರಣಗಳಿಂದ 365900 ರೂ ದಂಡ ವಸೂಲಿ ಮಾಡಲಾಗಿದೆ. ಸಿಟಿ ಕಾರ್ಪೋರೇಷನ್‌ನಿಂದ 150 ಪ್ರಕರಣಗಳಿಂದ 39000 ರೂ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಂಬಾಕು ಮುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ಮುಕ್ತ ಜಿಲ್ಲಾ ಪಂಚಾಯತ್, ತಂಬಾಕು ಮುಕ್ತ ಜಿಲ್ಲಾಡಳಿತ ಭವನ, ತಂಬಾಕು ಮುಕ್ತ ಪೊಲೀಸ್ ಇಲಾಖೆ ಎಂಬ ಪೋಸ್ಟರ್ ಬಿಡುಗಡೆ ಮಾಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ್ ಕುಮಾರ್ ಎಂ.ಸಂತೋಷ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ,ಡಿ.ಎಚ್.ಓ.ಷಣ್ಮಖಪ್ಪ, ಡಿ.ಡಿ.ಪಿ.ಐ.ಕೊಟ್ರೇಶ್.ಜಿಜಿಲ್ಲಾ ಸರ್ವೆಕ್ಷಣಾಧಿಕಾರಿ ರಾಘವನ್ ಜಿ.ಡಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030