ದಲಿತ ಕಾಲೋನಿಗೆ ಆಗಮಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ..ಕೆ. ಅಬ್ಬಾಸ್…!!!

ದಲಿತ ಕಾಲೋನಿಗೆ ಆಗಮಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ..ಕೆ. ಅಬ್ಬಾಸ್
ಹಗರಿಬೊಮ್ಮನಹಳ್ಳಿ ತಾಲೂಕಿನ ಇಟಗಿ ಪೊಲೀಸ್ ಠಾಣೆಗೆ ಒಳಗೊಂಡ ಸೊನ್ನ ಗ್ರಾಮಕ್ಕೆ ಆಗಮಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ. ಕೆ ಅಬ್ಬಾಸ್ ಸರ್ ದಲಿತ ಕಾಲೋನಿ ಗೆ ಆಗಮಿಸಿ ಅಂಬೇಡ್ಕರ್ ಸಂಘದ ಅಧ್ಯಕ್ಷರು ಸದಸ್ಯರು ಹಾಗೂ ಕಾಲೋನಿಯ ಮುಖಂಡರು ಯುವಕರು ರೊಂದಿಗೆ ಮಾತನಾಡಿ ನಾನು ಇಟಗಿ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ್ದೇನೆ ಪ್ರತಿಯೊಂದು ಗ್ರಾಮಕ್ಕೆ ಭೇಟಿಕೊಟ್ಟು ಸ್ವತಹ ಇಲ್ಲಿರುವ ಸಮಸ್ಯೆಗಳ ಬಗ್ಗೆ ಹಾಗೂ ನಮ್ಮ ಜವಾಬ್ದಾರಿಗಳು ನಿಮಗೆ ತಿಳಿಸಿ ಮತ್ತು ನಿಮ್ಮ ಜವಾಬ್ದಾರಿಗಳನ್ನು ತಿಳಿಸಲು ಬಂದಿದ್ದೇನೆ.
ಪೊಲೀಸ್ ಠಾಣೆ ಎನ್ನುವುದು ನಿಮ್ಮ ರಕ್ಷಣೆಗಾಗಿ ಇರುವ ಸ್ಥಳ ಪೊಲೀಸ್ ಠಾಣೆ ಮತ್ತು ಆಸ್ಪತ್ರೆ ನಿಮ್ಮ ಸೇವೆಗಾಗಿ 24 ತಾಸು ತೆರೆದಿರುತ್ತದೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ನಮಗೆ ಕೂಡಲೇ ತಿಳಿಸಿದರೆ ನಿಮ್ಮ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ ಈ ಕಾನೂನು ನಿಮಗಾಗಿ ಇದೆ ಮಕ್ಕಳು ಉತ್ತಮ ಶಿಕ್ಷಣದ ಕಡೆಗೆ ಗಮನ ಕೊಡಬೇಕು, ಪೋಷಕರು ಕೂಡ ಮಕ್ಕಳನ್ನು ಉತ್ತಮ ಶಿಕ್ಷಣಕ್ಕೆ ಪ್ರೇರಣೆ ನೀಡಬೇಕು ನಿಮಗಾಗಿ ಸರ್ಕಾರದಿಂದ ಅನೇಕ ಸೌಲಭ್ಯಗಳು ಇದ್ದಾವೆ ಅವುಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು.
ಡಾ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರು ಈ ಗುಡದೀಶ ಮಾತನಾಡಿ ಸುಮಾರು 10 ರಿಂದ 15 ವರ್ಷ ಆಯಿತು. ನಮ್ಮ ದಲಿತ ಕಾಲೋನಿಗೆ ಸಬ್ ಇನ್ಸ್ಪೆಕ್ಟರ್ ಅಧಿಕಾರಿಗಳು ಭೇಟಿ ನೀಡಿ ಸಭೆ ಮಾಡಿ ಕಾನೂನು ಅರಿವು ಮೂಡಿಸು ದಲಿತ ಕಾಲೋನಿಗೆ ಬಂದಿರುವುದಿಲ್ಲ. ಇಂತಹ ದಕ್ಷ ಅಧಿಕಾರಿಗಳು ನಮಗೆ ಸಿಕ್ಕರುವುದು ಸೌಭಾಗ್ಯ ಇವರಿಗೆ ನಾವು ಚಿರಋಣಿಯಾಗಿ ಇರುತ್ತೇವೆ ನಮ್ಮ ಮಕ್ಕಳ ಶಿಕ್ಷಣ ಬಗ್ಗೆ, ನಮ್ಮ ಸಮಾಜದ ಕಾಳಜಿ ಬಗ್ಗೆ ಇರುವುದನ್ನು ನೋಡಿ ತುಂಬಾ ಸಂತೋಷ ವಾಗುತ್ತದೆ. ನಮ್ಮ. ನಮ್ಮ ಸಮಾಜದಿಂದ ಮತ್ತು ಡಾಕ್ಟರ್ ಬಿಆರ್ ಅಂಬೇಡ್ಕರ್ ಸಂಘದ ವತಿಯಿಂದ ಸನ್ಮಾನಿಸಿದರು…


ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ

Leave a Reply

Your email address will not be published. Required fields are marked *