ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕಸೇವಾ ವೃದ್ದಾಶ್ರಮಕ್ಕೆ
ಜಿಲ್ಲಾವಿಕಲಚೇತನರ ಕಲ್ಯಾಣಧಿಕಾರಿಗಳಾದ ವೈಶಾಲಿ ಭೇಟಿ
ಹಿರಿಯೂರು :
ತಾಲ್ಲೂಕಿನ ಭೀಮನಬಂಡೆ ಬಳಿ ಇರುವ ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮಕ್ಕೆ ಚಿತ್ರದುರ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಇಲಾಖೆ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿಗಳು ವೈಶಾಲಿಯವರು ಭೇಟಿ ನೀಡಿ ಹಿರಿಯನಾಗರೀಕರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ ವೈಶಾಲಿಯವರು ಆಶ್ರಮದ ವೃದ್ಧರಿಗೆ ಯಾವುದೇ ಸಮಸ್ಯೆಗಳಿಲ್ಲದಂತೆ ಊಟ, ಬಟ್ಟೆ, ವಸತಿ ಸೌಕರ್ಯ ಕಲ್ಪಿಸುವ ಜೊತೆಗೆ ಅವರ ಆರೋಗ್ಯ ರಕ್ಷಣೆಯ ಬಗ್ಗೆಯೂ ಸಹ ಗಮನವನ್ನು ಕೊಡಬೇಕು ಎಂದರಲ್ಲದೆ,
ಆಶ್ರಮದಲ್ಲಿ ವಾಸಿಸುವ ವೃದ್ಧರ ಆರೋಗ್ಯ ಸುರಕ್ಷತೆಗಾಗಿ ಆಶ್ರಮದ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಅವರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡಬೇಕಲ್ಲದೆ ಆಗಾಗ ಆಶ್ರಮ ನಿವಾಸಿಗಳ ಆರೋಗ್ಯ ತಪಾಸಣೆ ಮಾಡಿಸಬೇಕು ಎಂಬುದಾಗಿ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವೃದ್ದಾಶ್ರಮದ ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ, ಮಹಾಂತೇಶ್, ವ್ಯವಸ್ಥಾಪಕರಾದ ತೇಜುಮೂರ್ತಿ, ಎಂ.ಆರ್.ಡಬ್ಲೂ ಕೆ.ಬಸವರಾಜ್, ವಿ.ಆರ್.ಡಬ್ಲೂ. ಅನಿಲ್ ಕುಮಾರ್ ಮತ್ತು ಹಿರಿಯನಾಗರೀಕರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030