ಲಿಂಗೈಕ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ ಅವರ 32ನೇ ಸ್ಮರಣೋತ್ಸವದ ಪೂರ್ವ ಸಿದ್ಧತೆ ಸಭೆ
ಚಿತ್ರದುರ್ಗ: ಹೊಳಲ್ಕೆರೆಯ ಒಂಟಿ ಕಂಬದ ಮುರುಗಮಠದಲ್ಲಿ ಲಿಂಗೈಕ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ ಅವರ 32ನೇ ಸ್ಮರಣೋತ್ಸವದ ಪೂರ್ವ ಸಿದ್ಧತೆ ಸಭೆ ನಡೆಯಿತು .
ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳು ಎಷ್ಟೇ ದೊಡ್ಡ ಕೆಲಸ ಮಾಡಿದರೂ ಸಹ ಅದನ್ನು ತಾನು ಮಾಡಿದ್ದು ಎಂದು ಗುರುತಿಸಿಕೊಳ್ಳಲಿಲ್ಲ. ಸುಮ್ಮನೇ ಸಮಾಜ ಕಾರ್ಯವನ್ನು ಮಾಡುತ್ತ ಸಾಗಿದರು. ಹಾಗಾಗಿ ಅಂತಹ ಮಹಾನುಭಾವರ ಜೀವನ ಸಾಧನೆಗಳನ್ನು, ಅವರು ಮಾಡಿದಂತಹ ಸತ್ಕಾರ್ಯಗಳನ್ನು ಸದಾ ಸ್ಮರಿಸಬೇಕಾಗುತ್ತದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ತಿಳಿಸಿದರು.
ದಾವಣಗೆರೆಯ ವಿರಕ್ತಮಠದ ಡಾ. ಬಸವ ಪ್ರಭು ಸ್ವಾಮಿಗಳು ಮಾತನಾಡುತ್ತಾ ಮಲ್ಲಿಕಾರ್ಜುನ ಶ್ರೀಗಳವರು ಜ್ಞಾನದ ವಾಣಿಯನ್ನ ಇಡೀ ಸಮಾಜಕ್ಕೆ ಹಂಚುವಂತಹ ಕಾರ್ಯಗಳನ್ನು ಮಾಡಿದರು ಅದರಲ್ಲಿ ಅನೇಕ ಶಾಲಾ-ಕಾಲೇಜುಗಳನ್ನು ತಾಂತ್ರಿಕ ವಿಶ್ವವಿದ್ಯಾಲಯ ತೆರೆಯುವ ಮುಖಾಂತರ ಜ್ಞಾನದ ಗಂಗೆಯನ್ನು ಹರಿಸಿದರು ಎಂದು ಅಭಿಪ್ರಾಯಪಟ್ಟರು ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರೆ ಮುತ್ತಿನಂತೆ ಮಾತನಾಡಬೇಕು ಎಂಬ ಅಲ್ಲಮಪ್ರಭುಗಳ ವಾಣಿಗೆ ಸಾಕ್ಷಿಯಾಗಿದ್ದವರು ಮಲ್ಲಿಕಾರ್ಜುನ ಸ್ವಾಮಿಗಳು ಇಂತಹ ಮಹನೀಯರ ಸ್ಮರಣೋತ್ಸವವನ್ನು ಪ್ರತಿ ವರ್ಷವೂ ಆಗಸ್ಟ್ 8ನೇ ತಾರೀಕು ಆಯೋಜಿಸಲಾಯಿತು ಈ ವರ್ಷವೂ ಕೂಡ ಆಗಸ್ಟ್ ಎಂಟಕ್ಕೆ ಆಚರಿಸಲು ಶ್ರೀ ಮಠ ತೀರ್ಮಾನಿಸಿದೆ.
ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಮಾಡಿರುವ ಸಾಧನೆಗಳು, ಸಂಸ್ಥಾನವನ್ನು ಕಟ್ಟಿ ಬೆಳೆಸಿ, ಶಾಲಾಕಾಲೇಜುಗಳ ಸ್ಥಾಪಿಸುವುದರ ಮೂಲಕ ನಾಡಿನಲ್ಲಿ ಶೈಕ್ಷಣಕ ಕ್ರಾಂತಿಯನ್ನೇ ಮಾಡಿದ್ದಾರೆ. ಅಪರಿಮಿತವಾದ ಹೆಸರು ಮಾಡಿದವರು. ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ಅವರ ಘನತೆ, ಗಾಂಭಿರ್ಯ ಮತ್ತು ಪ್ರೌಢಿಮೆಯಿಂದ ಮೇರುವ್ಯಕ್ತಿತ್ವವುಳ್ಳರಾಗಿದ್ದರು. ಅಂಥ ಪೂಜ್ಯರನ್ನು ಸದಾ ಸ್ಮರಿಸಿಕೊಳ್ಳುತ್ತ ಗೌರವ ಸಲ್ಲಿಸುವಂತಾಗಬೇಕು ಎನ್ನುವುದು ಇಡೀ ಸಮಾಜಕ್ಕೆ ಒಪ್ಪಿಗೆಯಾಗಿರುವ ಮಾತಾಗಿದೆ. ಈ ಬಾರಿಯ ಸ್ಮರಣೋತ್ಸವಕ್ಕೆ ಹೊಳಲ್ಕೆರೆ ಭಾಗದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನಿಪ್ಪಾಣಿ, ಶ್ರೀ ಮುರುಘೇಂದ್ರ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಗಿರೀಶ್, ಕೆಇಬಿ ಷಣ್ಮುಖಪ್ಪ, ರೈತಸಂಘದ ಮುಖಂಡರುಗಳು, ಎಸ್.ಜೆ.ಎಂ. ವಿದ್ಯಾಪೀಠದ ಸಂಸ್ಥೆಗಳ ಸಿಬ್ಬಂದಿ, ನೂರಾರು ಸಂಖ್ಯೆಯಲ್ಲಿ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಸೇರಿದಂತೆ ಸುತ್ತಮುತ್ತಲ ತಾಲ್ಲೂಕುಗಳಿಂದ ಭಕ್ತರು ಭಾಗವಹಿಸಿದ್ದರು…
ವಿನಾಯಕ ಆರ್ ಜಿ
ಗ್ರಾಮಾಂತರ ವರದಿಗಾರರು
ಚಿತ್ರದುರ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030