ನಮ್ಮ ಪರಿಸರ ವೇದಿಕೆಯ ಉದ್ಘಾಟನೆ ಕಾರ್ಯಕ್ರಮ
ಚಿತ್ರದುರ್ಗ: ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ಸಮೀಪದಲ್ಲಿರುವ ಮಾಹಿ ಫಾರಂ ಹೌಸ್ ಪರಿಸರದಲ್ಲಿ ನಮ್ಮ ಪರಿಸರ ವೇದಿಕೆಯ ಉದ್ಘಾಟನೆ ಮಾಡಲಾಯಿತು ವೇದಿಕೆಯ ಕಾರ್ಯಕ್ರಮದಲ್ಲಿ
ಧಾರವಾಡದಿಂದ ಆಗಮಿಸಿದಂತಹ ನ್ಯಾಯವಾದಿ ಶ್ರೀಮತಿ ಸರಸ್ವತಿ ಪೂಜಾರ ರವರು ಪರಿಸರದ ಬಗ್ಗೆ ಮಾತನಾಡುತ್ತಾ ನಾವು ಹೇಗೆ ಪರಿಸರವನ್ನ ಇಟ್ಟುಕೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೆ ನಮ್ಮ ಪರಿಸರವನ್ನು ಉಳಿಸಿ ಕೊಟ್ಟಾಗ ಮಾತ್ರ ಪರಿಸರವು ನಮ್ಮನ್ನ ರಕ್ಷಣೆ ಮಾಡುತ್ತದೆ ಎನ್ನುವ ಮಾತುಗಳನ್ನು ಆಡಿದರು ನಿರ್ಮಲ ಹಿರೇಗೌಡರ್ ಅವರು ಪಾನಾಸಂ ರಾಜ್ಯ ಕಾರ್ಯದರ್ಶಿಗಳು ಇವರು ಮಾತುಗಳ ನಾಡುತ್ತಾ ಮನೆಯಿಂದಲೇ ನಾವು ಪರಿಸರದ ರಕ್ಷಣೆಯ ಜವಾಬ್ದಾರಿಯನ್ನ ಪ್ರತಿಯೊಬ್ಬರು ಮಾಡಬೇಕು ಎನ್ನುವ. ಮಾತುಗಳನ್ನ ತಿಳಿಸಿದರು ಉಷಾ ಗ್ರೀನ್ ಫೋರ್ಸ್ ಫೌಂಡೇಶನ್ ಉಷಾ ಕೆ . ಜಿ.ಆರ್. ಮಾತನಾಡಿ “ನಮ್ಮ ಫೌಂಡೇಶನ್ ವತಿಯಿಂದ ಹಳೆಯ ಹಾಗೂ ಒಡೆದ ದೇವರ ಫೋಟೋಗಳನ್ನು ಬೀದಿಬದಿಯಲ್ಲಿ ನೀರಿಗೆ ಇನ್ನಿತರ ಸ್ಥಳಗಳಲ್ಲಿ ಬಿಸಾಕುವುದನ್ನು ತಪ್ಪಿಸಲು ಅದನ್ನು ಮರುಬಳಕೆ ಮಾಡುವ ಮುಖಾಂತರ ದೇವರ ಭಕ್ತಿಗೆ ಶಕ್ತಿ ತುಂಬುತ್ತೇವೆ ಅದರಿಂದ ನೀವುಗಳು ಸಹ ದೇವರ ಫೋಟೋಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ ಎಂದು ಮನವಿ ಮಾಡಿದರು. ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿ ಪ್ಲಾಸ್ಟಿಕ್ ಇವತ್ತು ಅಡುಗೆಮನೆಯಲ್ಲಿ ಮಾರಣಾಂತಿಕ ಹಾವಳಿ ಮಾಡುತ್ತಿದೆ ಕ್ಯಾನ್ಸರ್ ನಂತಹ ವಾಸಿಯಾಗದ ಕಾಯಿಲೆಗಳಿಗೆ ಮೂಲವಾಗುತ್ತಿದೆ ಆದ್ದರಿಂದ ಆಹಾರ ಸರಪಳಿಯಲ್ಲಿ ಪ್ಲಾಸ್ಟಿಕ್ ಬರಬಾರದು ಎಂಬ ಉದ್ದೇಶಕ್ಕೆ ನಮ್ಮ ಸಂಸ್ಥೆಯಿಂದ ನೂರಾರು ಜಾಗೃತಿ ಅಭಿಯಾನಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ದಯಾ ಪುತ್ತೂರು ಕರ್ ಗೌ. ಅಧ್ಯಕ್ಷರು ಪನಾಸಂ ಚಿತ್ರದುರ್ಗ ಜಿಲ್ಲೆ. ಸಾಹಿತಿ ಮಂಜುನಾಥ್ ಕಳ್ಳಿಹಟ್ಟಿ, ಪ.ನಾ.ಸಂ. ರಾಜ್ಯ ಸಮಿತಿ ಎಂ.ಬಿ. ಜಯದೇವ್ ಮೂರ್ತಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಪಂಡ್ರಹಳ್ಳಿ ಶಿವರುದ್ರಪ್ಪ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಉಷಾ, ಡಾ. ಮಹೇಶ್ ಕಡ್ಲೇಗುದ್ದು ಪರಿಸರ ಗೀತೆ ಹಾಡಿದರು.ಬಾಲಕಿ ಲಕ್ಷ್ಮಿ ಪರಿಸರ ಗೀತೆ ಹಾಡಿದರು .ಚಿನ್ಮಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕರು ದಯಾವತಿ ಮತ್ತು ಸದಸ್ಯರುಗಳು ಭಾಗವಹಿಸಿದ್ದರು ರಾಮಚಂದ್ರ ಕಸವನಹಳ್ಳಿ, ಆಲೂರು ಅಜ್ಜಯ್ಯ,ಅಶೋಕ್, ಡಾ.ನವೀನ್ ಸಜ್ಜನ್, ವಿನಾಯಕ ಆರ್ ಜಿ, ಸುಮಾ, ಬಸವರಾಜ ಹರ್ತಿ, ಪ್ರವೀಣ, ಶಿವಾನಂದ, ಮುದ್ದುರಾಜ್, ನಿರ್ಮಲ್, ಸತ್ಯಪ್ರಭ, ಡಾ.ಗೌರಮ್ಮ.ಪ್ರಾಂಶುಪಾಲರು.ಎಸ್ ಜಿ. ಎಂ . ಡೆಂಟಲ್ ಕಾಲೇಜು..ನೂರಾರು ಮಹಿಳೆಯರು ಉಪಸ್ಥಿತರಿದ್ದರು..
ವಿನಾಯಕ ಆರ್ ಜಿ
ಗ್ರಾಮಂತರ ವರದಿಗಾರರು ಚಿತ್ರದುರ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030