ಚಿತ್ರದುರ್ಗ ನಗರದ ಕೊಡುಗೈ ದಾನಿ ಜನ ಪರವಾಗಿ ಜೀವ ಪರವಾಗಿ ಹಾಗೂ ಮಾನವ ಪರವಾಗಿ ನಿತ್ಯ ನಿರಂತರವಾಗಿ ಜನಸಾಮಾನ್ಯರ ಕಷ್ಟಗಳಿಗೆ ಮರುಗುವ, ಸ್ಪಂದಿಸುವ ಮಾನವೀಯ ಅಂತಃಕರಣದ ವ್ಯಕ್ತಿ,
ಶ್ರೀಯುತ ಸುರೇಶ್ ಬಾಬು,(ಸೈಟ್ ಬಾಬಣ್ಣ) ಜಗತ್ತಿನ ಮಹಾಮಾರಿ ಕರೋನ ಸಂದರ್ಭದಲ್ಲಿ 20 ಲಕ್ಷಕ್ಕೂ ಹೆಚ್ಚು ದಿನಸಿ ಸಾಮಗ್ರಿಗಳನ್ನು ವಿತರಿಸಿದ್ದರು, ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ರೋಟರಿ ಡಯಾಲಿಸಿಸ್ ಸೆಂಟರ್ ಗೆ 10 ಲಕ್ಷ ರೂಪಾಯಿಗಳ ಸಹಾಯ ಮಾಡಿದವರು. ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ನೆರವಾಗುವ ಬಾಬಣ್ಣ ನವರು “ಆಪರೇಷನ್ ಸಿಂಧೂರ್ ” ವಿಜಯೋತ್ಸವದ ಸ್ಮರಣೆ ಯಲ್ಲಿ ಈ ದೇಶದ ಸೈನಿಕರ ತ್ಯಾಗ ಮತ್ತು ಬಲಿದಾನಗಳನ್ನ ಗೌರವಿಸುವ ಆದರ್ಶದ ಮೇಲ್ ಪಂತಿ ಮತ್ತು ಮಾದರಿಯಾಗಿ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿಗಳನ್ನು ಸೈನಿಕರ ಕಲ್ಯಾಣ ನಿಧಿಗೆ
ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಯುತ ಟಿ.ವೆಂಕಟೇಶ್ ಅವರಿಗೆ ಚೆಕ್ ನೀಡಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030