ಪ್ರಸಾರ ಭಾರತಿ ಆಕಾಶವಾಣಿಗಾಗಿ “ಹೆಸರಾಯಿತು ಕರ್ನಾಟಕ,ಉಸಿರಾಗಲಿ ಕನ್ನಡ ಜಾಗೃತಿ ಅಭಿಯಾನ”ದ ಡಾ.ನವೀನ್ ಮಸ್ಕಲ್…!!!

ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರ್ಣದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದ್ದ ಕರ್ನಾಟಕ ಹೈಕೋರ್ಟ ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀಯುತ ಕೃಷ್ಣ.ಎಸ್. ದೀಕ್ಷಿತ್ ರವರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ
ಪ್ರಸಾರ ಭಾರತಿ ಆಕಾಶವಾಣಿಗಾಗಿ “ಹೆಸರಾಯಿತು ಕರ್ನಾಟಕ,ಉಸಿರಾಗಲಿ ಕನ್ನಡ ಜಾಗೃತಿ ಅಭಿಯಾನ”ದ
ಡಾ.ನವೀನ್ ಮಸ್ಕಲ್ ರವರೊಂದಿಗಿನ ಸಂದರ್ಶನ.ಇದೆ ತಿಂಗಳ 21 ರ ಸೋಮವಾರ ಬೆಳಗ್ಗೆ 8:ಗಂಟೆ 30 ನಿಮಿಷಕ್ಕೆ ಆಕಾಶವಾಣಿ ಚಿತ್ರದುರ್ಗ ಎಫ್.ಎಂ. ನಲ್ಲಿ ಪ್ರಸಾರವಾಗಲಿದೆ. ಎಂದು ಕಾರ್ಯಕ್ರಮಪ್ರಸಾರ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ.ಶಿವಪ್ರಕಾಶ್.ಡಿ.ಆರ್. ತಿಳಿಸಿದರು.
ಚಿತ್ರದುರ್ಗ ಆಕಾಶವಾಣಿ ಕೇಂದ್ರಕ್ಕೆ ಮೇ 3 ಕ್ಕೆ 34ರ ವಸಂತ ಸಂಭ್ರಮಿಸುತ್ತಿರುವ ಹಿನ್ನೆಲೆಯಲ್ಲಿ ನಾವಿನ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ಮಾತನಾಡಿದ ನಿಲಯದ ಹೆಚ್ಚುವರಿ ನಿರ್ದೇಶಕರಾದ ಶ್ರೀಯುತ ಎಸ್.ಆರ್.ಭಟ್ ರವರು
ಸ್ಪರ್ಧಾತ್ಮಕವಾದ ಈ ಮಾಧ್ಯಮ ಜಗತ್ತಿನಲ್ಲಿ ಇಂದಿಗೂ ಮಾಹಿತಿ,ಶಿಕ್ಷಣ ಮನೋರಂಜನೆಯನ್ನು ಅತ್ಯಂತ ಗುಣಾತ್ಮಕವಾಗಿ ಮತ್ತು ವಸ್ತುನಿಷ್ಠವಾಗಿ ನೀಡುವ ಪ್ರಸಾರ ಭಾರತಿ ಆಕಾಶವಾಣಿಯ ಕಾರ್ಯಕ್ರಮಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮೊಬೈಲ್ ಪ್ಲೇ ಸ್ಟೋರ್ ಆಪ್ ನಲ್ಲಿ “ನ್ಯೂಸ್ ಆನ್ ಏರ್ “ಆಫ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ಕಾರ್ಯಕ್ರಮಗಳನ್ನು ಕೇಳಬಹುದು. ಚಿತ್ರದುರ್ಗ ಆಕಾಶವಾಣಿಯ ಕಾರ್ಯಕ್ರಮಗಳನ್ನು ಮತ್ತಷ್ಟು ಗುಣಾತ್ಮಕವಾಗಿ ರೂಪಿಸಲು
ಸಾರ್ವಜನಿಕರ,ಸರ್ಕಾರದ ಪ್ರತಿನಿಧಿಗಳ, ಹಾಗೂ ಅಧಿಕಾರಿಗಳ, ಸಂಘ ಸಂಸ್ಥೆಗಳ,ಸಹಕಾರ ಸಹಭಾಗಿತ್ವ ಹಾಗೂ ಪ್ರಾಯೋಜಕತ್ವದ ಮೂಲಕ ಆಕಾಶವಾಣಿಯನ್ನು ಬೆಂಬಲಿಸಿ ಎಂದು ಈ ಮೂಲಕ ನಾಗರಿಕರಿಗೆ ಕರೆ ನೀಡಿದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *