ವಿಶ್ವಜಲ ದಿನಾಚರಣೆ ಅಂಗವಾಗಿ
“ ಜಲ ಮೂಲಗಳ ಅಳಿವು ಉಳಿವು”
ನೀರು ಯಾವುದೇ ಒಂದು ಚಟುವಟಿಕೆಯ ಅತ್ಯಗತ್ಯವಾದ ಸಂಪನ್ಮೂಲ, ನೀರು ಜೀವದ್ರವ್ಯ.ಸಕಲ ಜೀವರಾಶಿಗಳಿಗೂ ಜಲವೇ ಮೂಲ, ಈ ಜಲಕ್ಕೆ ಮಳೆಯೇ ಆಧಾರ.ಅದರೆ ಇಂದಿನ ಪರಿಸ್ಥಿತಿಯಲ್ಲಿ ಶುದ್ಧ ನೀರಿನ ಲಭ್ಯತೆಯ ಪ್ರಮಾಣವು ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಸುಧಾರಿತಜೀವನ ಶೈಲಿಯ ಪರಿಣಾಮವಾಗಿ, ಅಗತ್ಯ ಪ್ರಮಾಣದಲ್ಲಿ ಪಡೆಯುವುದು ಕಷ್ಟ ಸಾಧ್ಯವಾಗಿದೆ.
ಅಂತರ್ಜಲ ತಜ್ಞರ ಅಭಿಪ್ರಾಯದಂತೆ, ಇಂದಿನ ಜಲಕ್ಷಾಮಕ್ಕೆಅಂತರ್ಜಲದ ಪೂರೈಕೆ ಹಾಗೂ ಬೇಡಿಕೆಗೆ ಇರುವ ಅಗಾಧವಾದ ಅಸಮತೋಲನವೇ ಪ್ರಮುಖ ಕಾರಣ. ಆದ್ದರಿಂದ ಭೂಮಿಯ ಮೇಲೆ ಬೀಳುವ ಮಳೆಯ ನೀರು ವ್ಯರ್ಥವಾಗಿ ಹರಿದು ನದಿ, ಸಮುದ್ರಕ್ಕೆ ಸೇರುವ ಮೊದಲೇ ವಿವಿಧ ಸಾಧನಗಳಿಂದ ಮಳೆಯ ನೀರನ್ನು ಸಂಗ್ರಹಿಸಿ ಬಳಕೆ ಮಾಡುವುದರ ಬಗ್ಗೆ ಹಾಗೂ ಇನ್ನೂ ಹೆಚ್ಚಿನ ಮಳೆಯ ನೀರನ್ನು ಸಾಧ್ಯವಾದಷ್ಟು ನೆಲದಾಳಕ್ಕೆ ಇಂಗುವAತೆ ಮಾಡಲು ಸೂಕ್ತ ಕೃತಕಅಂತರ್ಜಲ ಮರು ಪೂರೈಕೆ ರಚನೆಗಳ ನಿರ್ಮಾಣ ಮಾಡುವುದರ ಬಗ್ಗೆ ಆಧ್ಯ ಗಮನ ಹರಿಸುವುದು ಪ್ರತಿಯೊಬ್ಬ ನಾಗರಿಕ ಪ್ರಜೆಯ ಕರ್ತವ್ಯವಾಗಿರುತ್ತದೆ. ಈ ಮೂಲಭೂತ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಳಂಬವಾದಲ್ಲಿ ನೆಲದಾಳದಲ್ಲಿರುವ ಜಲಸ್ತರಗಳು ಬತ್ತಿಹೋಗಿ ಸಕಲ ಜೀವರಾಶಿಗಳಿಗೆ ನೀರು ದೊರಕದೆ ಜಲಕ್ಷಾಮಉಂಟಾಗಿ, ಮುಂದಿನ ಶತಮಾನದಯುದ್ಧ ಬರೀ ನೀರಿಗಾಗಿ ಎಂದು ದಶಕದ ಹಿಂದೆ ೧೯೯೫ ರಲ್ಲೇ ವಿಶ್ವ ಬ್ಯಾಂಕ್ಅಧ್ಯಕ್ಷರಾಗಿದ್ದ ಸರ್ಇಸ್ಮಾಯಿಲ್ಜೆಲ್ಡಿನ್ರವರ ತಮ್ಮ ಭಾಷಣದಲ್ಲಿ ಹೇಳಿದ ಮಾತು ಇಂದಿಗೂ ಪ್ರಸ್ತುತವಾಗಿದ್ದು, ಎಚ್ಚರಿಕೆಯಕರೆಗಂಟೆಯಾಗಿದ್ದು, ಇಂದಿನ ಪರಿಸ್ಥಿತಿಗೆ ನಿಜವಾಣಿಯಂತೆಗೋಚರವಾಗುತ್ತಿದೆ. ಆದ್ದರಿಂದ ಈ ಜ್ವಲಂತ ಸಮಸ್ಯೆ ಬಗ್ಗೆ ಎಚ್ಚೆತ್ತುಕೊಂಡು ಅಂತರ್ಜಲದ ಸದ್ಬಳಕೆ ಹಾಗೂ ಸಂರಕ್ಷಣೆ ಬಗ್ಗೆ ಚಿಂತಿಸಬೇಕಾಗಿದೆ.
ಜೀವನಕ್ಕೆ ಅಗತ್ಯವಾದ ಗಾಳಿ, ನೀರುಎಲ್ಲರಿಗೂ, ಎಲ್ಲಾ ಕಾಲಕ್ಕೂ, ಸುಲಭವಾಗಿ ದೊರೆಯುವಂತಾಗಬೇಕು. ಗ್ರಾಮಾಂತರ ಜನರು ಮಾತ್ರವೇಅಲ್ಲ, ಕೈಗಾರಿಕೋದ್ಯಮಿಗಳು ನಗರ ಹಾಗೂ ಗ್ರಾಮಾಂತರ ಜನರ ಯೋಗಕ್ಷೇಮವನ್ನು ನೋಡಿ ಕೊಳ್ಳುವ ಅಧಿಕಾರಿಗಳು, ನೀರಾವರಿ ಆರೋಗ್ಯ ಸಿಬ್ಬಂದಿಯವರು, ಜನಪ್ರತಿನಿಧಿಗಳು ಹಾಗೂ ಪ್ರತಿಯೊಬ್ಬ ಪ್ರಜೆಯೂ ಸಹ ಭೂಮಿಯಲ್ಲಿದೊರೆಯುವ ನೀರಿನ (ಅಂತರ್ಜಲ) ವಿಷಯದ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಬೇಕು.
ಇದರ ಬಗ್ಗೆ ಅಸಡ್ಡೆಯನ್ನು ಮುಂದುವರೆಸಿದರೆ ನೆಮ್ಮದಿಯಜೀವನವನ್ನು ನಡೆಸುವುದು ಸಾಧ್ಯವಾಗದೇ ಹೋದೀತು ಹಾಗೂ ನೀರಿಗಾಗಿಜನರು ಪರಸ್ಪರಕಾದಾಡಬೇಕಾದ ಸಂದರ್ಭಏರ್ಪಾಡಾಗಬಹುದಾಗಿರುತ್ತದೆ.ಅoತರ್ಜಲವು ಕಷ್ಟಕಾಲದಲ್ಲಿ ನಮ್ಮ ನೆರವಿಗೆ ಬರುವಅತ್ಯಮೂಲ್ಯವಾದ ಸಂಪತ್ತುಎನ್ನುವುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
ಭೂಮಿಯ ಮೇಲೆ ಹರಿಯುವ ನೀರಿಗಾಗಿ ಭಾರೀ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವುದಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯ ಮಾಡಬೇಕಾಗಿರುತ್ತದೆ.ಇಂಜಿನೀಯರ್ಗಳ ಸಹಯೋಗದೊಂದಿಗೆ ಇಂತಹ ಯೋಜನೆಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲು ಹಲವಾರು ವರ್ಷಗಳು ಹಿಡಿಯುತ್ತದೆ.ಆದರೆ ಅಂತರ್ಜಲವನ್ನು ಪಡೆದುಅದನ್ನು ಬಳಸಲು ಮತ್ತು ಕಾಪಾಡಲು ಇಲ್ಲವೇ ವೃದ್ಧಿಗೊಳಿಸಲು ಪರಿಣಾಮಕಾರಿಯಾದ ವ್ಯವಸ್ಥಿತ ಪ್ರಯತ್ನವು ನಡೆಯುತ್ತಿಲ್ಲ. ಹೆಚ್ಚಿನರೈತರು ಮತ್ತು ಸಾರ್ವಜನಿಕರು ಸಲಹೆ ಪಡೆಯದೆ ತಮಗೆ ತೋರಿದಕಡೆ ತಮ್ಮದೇರೀತಿಯಲ್ಲಿ ಅವೈಜ್ಞಾನಿಕವಾಗಿ ಬಾವಿ ತೋಡಿಸಲುಇಲ್ಲವೇ ಕೊಳವೆಬಾವಿಯನ್ನು ಕೊರೆಸಲುತೊಡಗುತ್ತಾರೆ. ಭೂಮಿಯ ಒಳಗಡೆ ಯಾವರೀತಿ ಜಲ ಶೇಖರವಾಗುತ್ತದೆ?ಅದರ ಉಗಮ ಯಾವುದು?ಅದು ಎಷ್ಟು ಪ್ರಮಾಣದಲ್ಲಿದೊರೆಯುತ್ತದೆ?ಎಷ್ಟು ಆಳ ಕೊರೆಯಬೇಕು?ದೊರೆತ ನೀರಿನಿಂದ ಎಷ್ಟು ಎಕರೆ ಬೆಳೆ ಬೆಳೆಯಬಹುದು? ದೊರೆತಅಂತರ್ಜಲದ ಪ್ರಮಾಣವನ್ನು ಕಾಪಾಡಿಕೊಳ್ಳುವುದು ಇಲ್ಲವೇಅಭಿವೃದ್ಧಿ ಪಡಿಸುವುದು ಹೇಗೆ? ಆ ಬಗೆಯ ಆನೇಕ ಪ್ರಶ್ನೆಗಳಿಗೆ ಸಮಂಜಸವಾದಉತ್ತರವನ್ನು ನಾವು ಕಂಡುಕೊಳ್ಳಬೇಕಾಗಿದೆ.
ಅoತರ್ಜಲ ಸಂಪನ್ಮೂಲ
ಸಮಸ್ತ ಜೀವಕೋಟಿಗೆ ನೀರೇಆಧಾರ.ಜಲವಿಲ್ಲದೇಜಗವಿಲ್ಲ. ಸಸ್ಯಕುಲ, ಮಾನವ ಕುಲ ಹಾಗೂ ಪ್ರಾಣಿಗಳ ಭೂಮಂಡಲದಲ್ಲಿದೈನoದಿನ ಚಟುವಟಿಕೆಗಳಿಗೆ ನೀರುಅತ್ಯವಶ್ಯಕ. ಪ್ರಪಂಚದಲ್ಲಿ ಲಭ್ಯವಿರುವಒಟ್ಟು ನೀರಿನಲ್ಲಿ ಸಿಹಿ ನೀರು ಕೇವಲ ಶೇ.೨.೬೦ ರಷ್ಟು ಮಾತ್ರ.ಈ ಅಲ್ಪ ಪ್ರಮಾಣದ ನೀರನ್ನುಎಷ್ಟರ ಮಟ್ಟಿಗೆಜೋಪಾನ ಮಾಡಿ ಸಂರಕ್ಷಿಸಿಕೊಳ್ಳಬೇಕೆoಬುದನ್ನು ಅರಿಯುವ ಪ್ರತಿಯೊಬ್ಬರಆದ್ಯಕರ್ತವ್ಯ.
ನೀರಿನಿಂದಲೇ ಹಸಿರು, ಹಸಿರಿನಿಂದಲೇ ಉಸಿರು, ವ್ಯವಸಾಯೇ ನಮ್ಮದೇಶದ ಬೆನ್ನೆಲುಬು. ಇದಕ್ಕೆ ನೀರೇಆಧಾರ.ಮಳೆಯ ನೀರು ಹಳ್ಳಕೊಳ್ಳಗಳಲ್ಲಿ ಹರಿದುಕಡೆಗೆ ಸಮುದ್ರವನ್ನು ಸೇರುತ್ತದೆ.ಈ ರೀತಿ ಹರಿದುಹೋಗುವ ನೀರಿಗೆಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ ಕಾಲುವೆಗಳ ಮೂಲಕ ನೀರನ್ನು ಹರಿಸಿ ವ್ಯವಸಾಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ.ಆದರೆ ಈ ರೀತಿಯ ವ್ಯವಸ್ಥೆಎಲ್ಲಾಕಡೆ ಸಾಧ್ಯವಾಗುವುದಿಲ್ಲ. ಭೂಮಿಯ ಒಳಭಾಗದಲ್ಲಿ ದೊರಕುವ ನೀರನ್ನು ಬಾವಿಗಳ / ಕೊಳವೆಬಾವಿಗಳ ಮೂಲಕ ಹೊರತೆಗೆದು ಬಳಕೆ ಮಾಡಿಕೊಳ್ಳುವುದು ಈಗ ಸರ್ವೇ ಸಾಮಾನ್ಯ.ಇದೇಅಂತರ್ಜಲದ ಬಳಕೆ ಬಳಕೆಯಾಗುತ್ತಿರುವ ಅಂತರ್ಜಲವನ್ನು ಮರು ಪೂರೈಕೆ ಮಾಡುವುದು ಅಷ್ಟೇ ಪ್ರಮುಖ ಅಂಶ.
ಭೂವಿಜ್ಞಾನಿಗಳ ಅಂದಾಜಿನoತೆ ಭೂಮಿ ಹುಟ್ಟಿದ್ದು ೪೬೦ ಕೋಟಿ ವರ್ಷಗಳ ಹಿಂದೆ.ಆಗ ಅದೊಂದುಕುದಿಯುತ್ತಿದ್ದ ಲಾವಾರಸದಉಂಡೆ.ಇದರಿoದ ಹೊರಬಿದ್ದ ವಾಯುಗಳಲ್ಲಿ ಪ್ರಾಣವಾಯು ಮತ್ತುಜಲಜನಕ ನಮಗರಿಯದರೀತಿಯಲ್ಲಿ ಸಂಯೋಜನೆ ಹೊಂದಿ ನೀರಿನ ಅವಿಷ್ಕಾರವಾಯಿತು. ಹೀಗೆ ನೀರು ಭೂಮಿಯ ಮೇಲೆ ಗೋಚರಿಸಿದ್ದು ಸುಮಾರು ೩೦೦ ಕೋಟಿ ವರ್ಷಗಳ ಹಿಂದೆ.ಇದು ಪ್ರಕೃತಿ ನಮಗಿತ್ತ ವರ.
ಕುಡಿಯುವ ನೀರಿಗಾಗಿ ೧೦೦೦ ಅಡಿಯಿಂದ ೧೫೦೦ ಅಡಿ ವರೆಗೆ ಬೋರ್ ವೆಲ್ಗಳನ್ನು ಕೊರೆದುಜನರಿಗೆ ನೀರನ್ನು ಕೊಡುವ ಪ್ರಯತ್ನವನ್ನು ಸರ್ಕಾರ ಶಕ್ತಿ ಮೀರಿ ಶ್ರಮಿಸುತ್ತಿದೆ.ಆದರೆ ಈ ನೀರಿನ ಬಳಕೆಯಿಂದ ಮನುಷ್ಯರ ಆರೋಗ್ಯದ ಮೇಲಾಗುವ ಪರಿಣಾಮಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಅತ್ಯಂತ ಆಳದಲ್ಲಿರುವ ನೀರಿನಲ್ಲಿ ಫ್ಲೋರೈಡ್, ನೈಟ್ರೆöÊಡ್, ಸಲ್ಫೆಡ್, ಕಬ್ಬಿಣ, ರ್ಸೆನಿಕ್ ಮುಂತಾದ ಲವಣಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕರಗಿರುತ್ತವೆ. ಫ್ಲೋರೈಡ್ ಅಂಶ ಹೆಚ್ಚಿರುವುದರಿಂದ ಹಲ್ಲಿನತೊಂದರೆ, ಮೂಳೆ ಸವೆತ, ಕಣ್ಣಿನ ದೋಶಗಳು ಕಂಡು ಬಂದಿದ್ದು, ಈ ಪರಿಸ್ಥಿತಿಯಿಂದ ಪಾರಾಗಲುಅಂತರ್ಜಲ ವೃದ್ಧಿಸುವ ವಿಧಾನಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕಾಗಿದೆ. ಜೊತೆಗೆ ಬಿದ್ದ ಮಳೆ ನೀರು ನೇರವಾಗಿ ಹರಿದು ಸಮುದ್ರ ಸೇರುವುದನ್ನು ತಪ್ಪಿಸಿ ಅಯಾ ಭಾಗದಲ್ಲಿಯೇ ಭೂಮಿಯಲ್ಲಿ ಇಂಗಿಸುವ ಕಾರ್ಯಕ್ರಮಗಳನ್ನು ತಿವ್ರಗೊಳಿಸುವುದು ಅತ್ಯವಶ್ಯವಾಗಿದೆ.
ರಾಜ್ಯದ ಹಲವು ಕಡೆಗಳಲ್ಲಿ ಈ ರೀತಿಯ ಮಳೆನೀರಿನ ಮರುಬಳಕೆಯ ಪ್ರಯತ್ನಗಳನ್ನು ಆಗುತ್ತಲೇ ಇವೆ. ಅದಕ್ಕೆಂದೆ ಮಳೆನೀರು ಮಂಡಳಿಗಳು, ಮಳೆಕೊಯ್ಲು ಮಂಡಳಿಗಳು ಶ್ರಮಿಸುತ್ತಿವೆ. ದಕ್ಷಿಣ ಕನ್ನಡದ ಮಂದಿ ತಮ್ಮ ಹೊಲಗದ್ದೆಗಳಲ್ಲಿ, ಊರಿನ ಹೊರಗೆಅಡ್ಡ ಕಟ್ಟೆಗಳನ್ನು ನಿರ್ಮಿಸಿ, ನೀರು ಇಂಗಿಸಿ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಹೊಲಗಳಲ್ಲಿನ ಹಳೆಯ ಹುತ್ತಗಳಿಗೆ ನೀರುಣಿಸಿ ತನ್ಮೂಲಕ ನೆಲದಾಳಕ್ಕೆ ನೀರು ಹರಿಸಿ ಅಂತರ್ಜಲವನ್ನು ಹೆಚ್ಚಿಸುವ ಹೊಸ ಪ್ರಯತ್ನಗಳೂ ಜರುಗಿವೆ. ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಪ್ರಯತ್ನದಿಂದಾಗಿ ಬರದ ನಾಡಿನಲ್ಲಿ ಕೂಡಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ಹಸಿರು ನಳನಳಿಸುವಂತೆ ಮಾಡಲಾಗುತ್ತಿದೆ. ಹೊಸದಾಗಿ ಮನೆ ಕಟ್ಟುವವರಿಗೆ ಪರವಾನಗಿ ನೀಡುವ ಮೊದಲು ಆ ಮನೆಗೆ ಮಳೆ ನೀರಿನ ಸಂಗ್ರಹಣೆಗೆಅಗತ್ಯವಾದ ವ್ಯವಸ್ಥೆ ರೂಪಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗುತ್ತಿದೆ. ಇಲ್ಲದಿದ್ದಲ್ಲಿ ಮನೆಕಟ್ಟಲು ಲೈಸನ್ಸ್ ನೀಡುವುದಿಲ್ಲವೆಂಬುದಾಗಿ ಚೆನ್ನೆöÊನ ಮಹಾನಗರ ಪಾಲಿಕೆ ಠರಾವು ಮಾಡಿದ್ದರಿಂದಅಲ್ಲಿನ ಸುಮಾರು ೪ ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಈ ಮಳೆಕೊಯ್ಲು ತಂತ್ರಜ್ಞಾನ ಅಳವಡಿಕೆ ಆಗಿದೆ.ಬೆಂಗಳೂರಿನಲ್ಲಿ ಸ್ವಯಂ ಪ್ರೇರಣೆಯಿಂದ ಹತ್ತಾರು ಮಂದಿ ಈ ಪ್ರಯತ್ನ ಮಾಡುತ್ತಿದ್ದು, ರಾಜಕೀಯ ಇಚ್ಛಾಶಕ್ತಿ ಪ್ರಬಲವಾದಲ್ಲಿ ಮಾತ್ರ ಪ್ರತಿ ಮನೆಗೂ ಈ ವ್ಯವಸ್ಥೆಯ ಅಳವಡಿಕೆ ಯಶಸ್ವಿಯಾಗಿ ಆಗುತ್ತದೆ.
ರಾಷ್ಟçನಾಯಕ ಶ್ರೀಮಾನ್ ನಿಜಲಿಂಗಪ್ಪನವರ ಊರಾದ ಚಿತ್ರದುರ್ಗ ತಾಲ್ಲೂಕು ದೊಡ್ಡಸಿದ್ದವ್ವನ ಹಳ್ಳಿಯ, ರೈತಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು ಚಿಕ್ಕಂದಿನಿAದ ಹೊಲಗದ್ದೆಗಳಲ್ಲಿ ನೀರಿನ ಬಳಕೆಯನ್ನು ಕಂಡವನು.ವರ್ಷ-ವರ್ಷತಮ್ಮ ಬಾವಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿರುವುದನ್ನು ಗಮನಿಸಿ, ಬರದ ಶಾಪವನ್ನು ಅನುಭವಿಸಿ. ಮುಂದೆ ಮೈಸೂರು ವಿಶ್ವವಿದ್ಯಾಲಯದಿಂದ ಭೂಗರ್ಭ ಶಾಸ್ತçದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ೬ನೇ ರ್ಯಾಂಕ್ ಪಡೆದು ಬಂದ ನಂತರ ದುರ್ಗದಲ್ಲಿಯೇ ಅಂತರ್ಜಲ ತಜ್ಞನಾಗಿ ಖಾಸಗಿ ಸೇವೆ ಆರಂಭಿಸಿ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗಂಗಾ ಕಲ್ಯಾಣಯೋಜನೆಯ ಯಶಸ್ವೀ ಅನುಷ್ಠಾನಕ್ಕೆ ಶ್ರಮಿಸಿರುತ್ತೇನೆ. ೯೦ ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಪಾಯಿಂಟ್ ತೋರಿಸಿರುತ್ತೇನೆ. ಒಂದುರೀತಿಯಲ್ಲಿ ಭೂಮಿ ಬರಿದಾಗಲು ನಾನೆ ಕಾರಣಕರ್ತಎನ್ನುವ ಪ್ರಾಯಶ್ಚಿತ್ತದೊಂದಿಗೆ ಜಲ ಮರುಪೂರಣಕ್ಕೆ ಮುಂದಾಗಿದ್ದೇನೆ.
ರಾಜ್ಯದ ಒಟ್ಟು ಅಂತರ್ಜಲದ ಪ್ರಮಾಣವನ್ನು ಕುರಿತು ಹೆಚ್ಚಿನ ಅಧ್ಯಯನಕೈಗೊಂಡ ನಾನು ಈ ಕೊಳವೆ ಬಾವಿಗಳ ನೀರಿನ ಮಟ್ಟ ಇಳಿಮುಖವಾಗುತ್ತಿರುವುದು ಮತ್ತು ನೀರಿನ ಬಳಕೆಯ ಪ್ರಮಾಣ ಹೆಚ್ಚಿದಂತೆಲ್ಲಾ ಬಾವಿಗಳು ಹೆಚ್ಚು ಹೆಚ್ಚು ಆಳವಾಗಿ ಕೊರೆಯಲ್ಪಟ್ಟಾಗ ಅವುಗಳಲ್ಲಿ ಖನಿಜಗಳ ಪ್ರಮಾಣ ಇವೆಲ್ಲವನ್ನು ಅಧ್ಯಯನ ಮಾಡಿ ಪರಿಸ್ಥಿತಿ ಕೈ ಮೀರುವ ಮುನ್ನವೇ ಪರಿಹಾರಕಾರ್ಯ ಕೈಗೆತ್ತಿಕೊಳ್ಳಲು ಆಲೋಚಿಸಿ ನನ್ನದೇಆದಜಿಯೋರೈನ್ ವಾಟರ್ ಬೋರ್ಡ್ಎನ್ನುವ ಸ್ವಯಂ ಸೇವಾ ಸಂಸ್ಥೆಯನ್ನುಕಟ್ಟಿ ಮಳೆ ನೀರು ಸಂಗ್ರಹಣಾ ಅಭಿಯಾನವನ್ನು ಆರಂಭಿಸಿರುತ್ತೇನೆ.
ಸತತ ಪ್ರಯತ್ನದಿಂದ ನನ್ನ ಸ್ನೇಹಿತರು, ಹಿತೈಷಿಗಳೆಲ್ಲರ ಮನೆಗಳಿಗೆ ಮಳೆನೀರು ಸಂಗ್ರಹಣಾತAತ್ರಜ್ಞಾನವನ್ನು ಅಳವಡಿಸಿದ್ದೇ ಅಲ್ಲದೇ, ಹೊಲ ಗದ್ದೆಗಳಲ್ಲಿ ಇಂಗು ಗುಂಡಿಗಳನ್ನು, ಅಡ್ಡ ಕಟ್ಟೆಗಳನ್ನು ನಿರ್ಮಿಸಿ ಬಿದ್ದ ಮಳೆಯು ನೀರುಅಲ್ಲಿಯೇ ಇಂಗಿಸಿ ಅಂತರ್ಜಲ ಪ್ರಮಾಣಗಣನೀಯವಾಗಿ ಹೆಚ್ಚುವಂತೆ ಮಾಡಿರುತ್ತೇನೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಹಲವು ಲೇಖನಗಳು ಬಂದಿವೆ. ಆಕಾಶವಾಣಿ ಹಾಗೂ ಟಿ.ವಿ.ಯ ಹಲವು ಚಾನಲ್ಗಳಲ್ಲಿ ಈ ಬಗ್ಗೆ ವಿವರಗಳನ್ನು, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟಿರುತ್ತೇನೆ. ಈ ಎಲ್ಲಾ ಚಟುವಟಿಕೆಗಳ ಪರಿಣಾಮವಾಗಿದುರ್ಗದಜನರಿಗೆ ಮಳೆ ನೀರಿನ ಸಂಗ್ರಹಣಾ ಸತ್ಯಅರಿವಾಗುತ್ತಿದೆ. ಹೆಚ್ಚು ಹೆಚ್ಚು ಜನಇತ್ತಆಕರ್ಷಿತರಾಗುತ್ತಿದ್ದಾರೆ. ಶಾಲೆಗಳು, ಸರ್ಕಾರಿ ಕಛೇರಿಗಳೂ ಕೂಡತಮ್ಮ ಬೋರ್ವೆಲ್ಗಳಿಗೆ ಈ ಮರುಪೂರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವತ್ತಾ ಒಲವು ತೋರುತ್ತಿವೆ. ಹತ್ತಾರು ಕಡೆಗಳಲ್ಲಿ ಇವುಗಳನ್ನು ಯಶಸ್ವಿಯಾಗಿ ಅಳವಡಿಸಿಕೊಡಲಾಗಿದೆ.
ಮಳೆ ನೀರಿನ ಸಂಗ್ರಹಣೆ :
ಸುಮಾರು ೮ ರಿಂದ ೧೦ ಚದರದ ಮನೆಯ ಮೇಲ್ಛಾವಣೆಯ ಮೇಲೆ ಒಂದು ಮಳೆಗಾಲದಲ್ಲಿ (ಸರಿ ಸುಮಾರು ೬೦೦ ಮಿ.ಲಿ.ನಂತೆ) ಬೀಳುವ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿದರೆ, ೪೦ ರಿಂದ ೬೦ ಸಾವಿರ ಲೀಟರ್ಗಳಷ್ಟು ನೀರನ್ನು ಸಂಗ್ರಹಿಸಬಹುದು. ಮನೆಗಳಗಲ್ಲಿ ನಿರ್ಮಿಸುವ ಸಂಪಿನಲ್ಲಿಇಷ್ಟೊAದು ನೀರು ಸಂಗ್ರಹಿಸಲು ಸಾಧ್ಯವಾಗದು.ಇದಕ್ಕಾಗಿ ಪ್ರತ್ಯೇಕತೊಟ್ಟಿ ನಿರ್ಮಿಸಿದರೆ ಅನುಕೂಲ.ಇಲ್ಲದಿದ್ದರೆಇರುವಷ್ಟುಜಾಗದಲ್ಲಿಯೇ ನೀರನ್ನು ಸಂಗ್ರಹಿಸಿ ಬಳಸಬಹುದು.ಇತ್ತೀಚೆಗೆ ಮನೆಗಳನ್ನು ಕಟ್ಟುವಾಗಯಾವುದಾದರೂಒಂದುರೂಮಿನ ಭಾಗದಲ್ಲಿ, ನೆಲದಲ್ಲಿಟ್ಯಾಂಕ್ ಕಟ್ಟಿಸಿ ಅದರ ಮೇಲೆ ರೂಮನ್ನು ವಿನ್ಯಾಸಗೊಳಿಸಲಾಗುತ್ತಿದೆ.
ಬೋರ್ವೆಲ್ ಸುತ್ತ ಇಂಗು ಗುಂಡಿ ನಿರ್ಮಿಸುವುದು.
ಬೋರವೆಲ್ಗೆ ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಮಟ್ಟವನ್ನು ಮೇಲೆ ತರುವುದಕ್ಕೆ ಮೊದಲು ಬೋರ್ವೆಲ್ಕೊರೆಯುವ ಸಂದರ್ಭದಲ್ಲಿ ಬಂದಿರುವಕಲ್ಲಿನ ಪದರಗಳ ವಿವರ, (ಗ್ಯಾಪ್ಸ್) ರಚನೆ ಮತ್ತುಬಂದಿರುವ ನೀರಿನ ಇಳುವರಿ ಅವಲಂಬಿಸಿ ಕೊಳವೆ ಬಾವಿಕೊರೆಸುವ ಸಂದರ್ಭದಲ್ಲಿ ೩೦೦೦ ಗ್ಯಾಲನ್ ನೀರಿನ ಇಳುವರಿ ಬಂದಿದೆಎನ್ನುವುದಾದರೆಇAತಹ ಕೊಳವೆ ಬಾವಿಯನ್ನು ಮರಪೂರಣ ವಿಧಾನದಿಂದಇನ್ನೂ ಹೆಚ್ಚಿನ ಇಳುವರಿ ಪಡೆಯಬಹುದು.
ಇಂಗು ಗುಂಡಿ:-
ಬೋರ್ ವೆಲ್ ಸುತ್ತ ಇಂಗು ಗುಂಡಿ ನಿರ್ಮಸುವುದಕ್ಕೆಯಾವುದೇ ನಿರ್ದಿಷ್ಟವಾದ ಅಳತೆ ಇರುವುದಿಲ್ಲ. ಆದರೂಕಡಿಮೆಅಂದರೆ ೧೦ ಅಡಿ ಅಗಲ ಭೂಮಿಯಲ್ಲಿ ಇಂಗು ಗುಂಡಿ ನಿರ್ಮಿಸಬೇಕು.ಈ ಅಗೆತ ಕೆಲಸ ಮುಗಿದತಕ್ಷಣ ಭೂಮಿಯರಚನೆ ವೀಕ್ಷಿಸಬೇಕು.ಬರೀ ಮಣ್ಣಿನಿಂದಕೂಡಿರುವ ಸ್ಥಳವೊ?ಕಲ್ಲಿನ ಪದರಗಳು ಹೆಚ್ಚು ಇವೆಯೋ ಏಕ ಶಿಲೆಯಿಂದ ಕೂಡಿರುವ ಸ್ಥಳವೋ ಪರಿಶೀಲಿಸಿದ ನಂತರ ಭೂಮಿಯು ಬರೀ ಮಣ್ಣು ಮತ್ತು ಏಕ ಶಿಲೆ ಉಳ್ಳ ಸ್ಥಳವಾದರೆ ಕೇಸಿಂಗ್ ಪೈಪಿಗೆ ರಂಧ್ರಗಳನ್ನು ನಿರ್ಮಿಸುವಾಗತುಂಬಾಜಾಗ್ರತೆಯಿoದರoಧ್ರ ಮಾಡಬೇಕು.ಕೊನೆ ಪಕ್ಷ ೧೨೦ ರಂಧ್ರಗಳನ್ನಾದರೂ ನಿರ್ಮಿಸಬೇಕು.ಇದಾದ ನಂತರ ಕೇಸಿಂಗ್ ಪೈಪ್ ಸುತ್ತಲೂ ಸುತ್ತಬೇಕು.
ಇಂಗು ಗುಂಡಿಗೆ ಕಲ್ಲುಗಳನ್ನು ತುಂಬುವಾಗ ಜಮೀನುಗಳಲ್ಲಿ ದೊರೆಯುವಂತಹ (ಕಾಡುಗಲ್ಲುಗಳು) ದಪ್ಪಗಾತ್ರ ಉಳ್ಳುವುಗಳನ್ನು ಸುಮರು ೭ ಅಡಿ ಎತ್ತರದವರೆಗೂತುಂಬಬೇಕು.ಇದರ ಮೇಲೆ ೯೦ ಎಂ.ಎo.ಜಲ್ಲಿ ಸುಮಾರು ೧ ಅಡಿ ಎತ್ತರ ನಂತರ ೪೦+೨೦ ಎಂ.ಎo. ಜಲ್ಲಿ, ೧ ಅಡಿ ಎತ್ತರ ಹರಡಿಇದರ ಮೇಲ್ಭಾಗದಲ್ಲಿದಪ್ಪ ಮರಳು ಹರಡಬೇಕು. ಇಷ್ಟು ಮುಗಿದ ಮೇಲೆ ಇಂಗು ಗುಂಡಿಕಾರ್ಯ ಮುಕ್ತಾಯವಾದಂತೆ.ರಚನೆಆಗಿರುವ ಇಂಗು ಗುಂಡಿ ಹತ್ತಿರ ಮಳೆ ಬಿದ್ದತಕ್ಷಣ ನೀರು ಹರಿದು ಬರುವಂತೆ ವಿನ್ಯಾಸಗೊಳಿಸಬೇಕು. ಮಳೆ ನೀರು ಹರಿದು ಬರುವಾಗ ಮಣ್ಣು ಮತ್ತುಇತರೆ ಕಸ ಕಡ್ಡಿಗಳನ್ನು ತರದೆಇರುವಂತೆದಾರಿಯ ಮಧ್ಯದಲ್ಲಿ ಸ್ವಚ್ಛಗೊಳಿಸಬೇಕು.ಸಣ್ಣ ತಗ್ಗುಗಳನ್ನು ನಿರ್ಮಿಸಬೇಕು.ಮಳೆ ಬಂದ ಸಂದರ್ಭದಲ್ಲಿ ಜಮೀನಿನಲ್ಲಿ ಒಮ್ಮೆ ನೀರು ಹೇಗೆ ಬರುತ್ತದೆ ನೋಡಿ ಇಂಗು ಗುಂಡಿ ಸುತ್ತಲು ಸ್ವಲ್ಪ ಸಮಯ ನೀರು ನಿಲ್ಲುವಂತೆ ವಿನ್ಯಾಸಗೊಳಿಸಬೇಕು.
ನೀರಿನಗುಣಮಟ್ಟಉತ್ತಮವಾಗಿರುತ್ತದೆ. ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ವೃದ್ದಿಯಾಗುವುದರಜೊತೆಗೆ ನೀರಿನಗುಣಉತ್ತಮವಾಗಿರುತ್ತದೆ. ಕೊಳವೆ ಬಾವಿಯಲ್ಲಿಇರುವ ನೀರಿನಗಡಸುತನ ಹೆಚ್ಚಿರುವ ಬೋರ್ವೆಲ್ಗಳನ್ನು ಇಂಗು ಗುಂಡಿ ನಿರ್ಮಿಸುವುದರಿಂದ ಮೆದುನೀರನ್ನು ಪಡೆಯಬಹುದು.ನೀರಿನಲ್ಲಿಇರುವ ಫ್ಲೋರೈಡ್ ನೈಟ್ರೈಟ್ ಸಲ್ಪೇಟ್ಇತ್ಯಾದಿ ಹಾನಿಕಾರಕ ಲವಣಾಂಶಗಳ ಪ್ರಮಾಣವನ್ನುಕ್ರಮೇಣ ಸರಿಪಡಿಸಬಹುದಾಗಿರುತ್ತದೆ.
ಅಂತರ್ಜಲ ಮಟ್ಟ ಮೇಲೆ ಬರುವುದರಿಂದ ನಾವು ನೂರಾರು ಅಡಿ ಅಳದ ನೀರನ್ನುತೆಗೆಯಲು ಬೃಹದಾಕಾರದ ಮೋಟಾರ್ ಪಂಪುಗಳನ್ನು ಬಳಸುವ ಅಗತ್ಯವಿರುವುದಿಲ್ಲ. ಕಡಿಮೆ ಆಳದ ನೀರು ಹೆಚ್ಚು ಶುದ್ಧವಾಗಿರುತ್ತದೆ.ಮತ್ತು ನೀರನ್ನು ಮೇಲೆ ಎತ್ತಲು ಹೆಚ್ಚಿನ ವಿದ್ಯುತ್ಅವಶ್ಯಕತೆಇರುವುದಿಲ್ಲ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮೇಲೆ ಎತ್ತುವುದರಜೊತೆಗೆ ವಿದ್ಯುತ್ ಶಕ್ತಿಯ ಉಳಿತಾಯ ನಮ್ಮೆಲ್ಲರಜವಾಬ್ದಾರಿಎನ್ನುವುದನ್ನು ಮರೆಯಬಾರದು.ಮುಂದಿನ ದಿನಗಳಲ್ಲಿ ಅಂತರ್ಜಲ ವೃದ್ಧಿಸಿ, ನೀರಾವರಿಗೆ ಮೊದಲು ಬಾವಿಯಲ್ಲಿದೊರೆಯುವ ನೀರನ್ನು ಬಳಸಿ ನಂತರ ಬೇಸಿಗೆ ದಿನಗಳಲ್ಲಿ ಕೊಳವೆ ಬಾವಿ ನೀರು ಬಳಸುವಂತಹ ಕೆಲಸ ಎಲ್ಲರೂ ಸಾಮೂಹಿಕವಾಗಿ ಮಾಡಿದರೆಅಂತರ್ಜಲ ವೃದ್ಧಿಸುವುದರಲ್ಲಿಎರಡು ಮಾತಿಲ್ಲ.
ಎಲ್ಲಾ ನೀರಿಗೂ ಮಳೆಯೇ ಆಧಾರ : ಭೂಮಿಯ ಮೇಲೆ ನೀರು ಹಿಮಗಡ್ಡೆಗಳಾಗಿ, ಮಂಜಾಗಿ, ಹರಿಯುವ ನದಿಯಲ್ಲಿ ನೀರಾಗಿ, ನೆಲದಲ್ಲಿಇಂಗಿದಜಿನುಗು ನೀರಾಗಿ ಕಾಣಿಸಿಕೊಳ್ಳುತ್ತದೆ. ಈ ಎಲ್ಲಾ ನೀಇಗೂ ಮಳೆಯೇ ಆಧಾರಎಂಬುದನ್ನು ನಾವು ತಿಳಿಯಬೇಕು.ಸಾಮಾನ್ಯವಾಗಿ ಮಳೆ ಕೊಯ್ಲಿನ ವಿಷಯ ಪ್ರಸ್ತಾಪವಾದಾಗ ಹಿರಿಯರು ಹೇಳುವ ಮಾತೊಂದಿದೆ. “ನೀರಿನಕೊರತೆ ಸಮಾಜದಲ್ಲಿಒಡಕು ಮೂಡಿಸುವುದು ಹೌದಾದರೇ ಮಳೆಕೊಯ್ಲಿಗೆ ಒಡೆದ ಸಮಾಜವನ್ನುಒಗ್ಗೂಡಿಸುವ ಶಕ್ತಿಯಿದೆ” ಎಂದುಆದುದರಿoದ ಈ ಎಲ್ಲಾ ವಿಷಯವಾಗಿ ಹೆಚ್ಚಿನಜ್ಞಾನವನ್ನು ಪಡೆದುಕೊಂಡು, ಅಂತರ್ಜಲದ ಬಗ್ಗೆ ಜನರನ್ನು ಜಾಗೃತಗೊಳಿಸಿ, ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನುಇಂಗುವoತೆ ಮಾಡಿ, ಅಂತರ್ಜಲದ ಸಂರಕ್ಷಣೆ ಹಾಗೂ ಸದ್ಬಳಕೆ ಬಗ್ಗೆ ಅರಿವು ಮೂಡಿಸುವುದುನಮ್ಮೇಲ್ಲಕರ್ತವ್ಯ.
ಎನ್.ಜೆ ದೇವರಾಜರೆಡ್ಡಿ,
ಅಂತರ್ಜಲ ಹಾಗೂ ಮಳೆನೀರು ತಜ್ಞರು,,ಚಿತ್ರದುರ್ಗ…
ವರದಿ,
ವಿನಾಯಕ ಆರ್.ಜಿ
ಚಿತ್ರದುರ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030