ನಗರದ ದೊಡ್ಡಪೇಟೆಯ ಜೈನ್ ದೇವಾಲಯದ ಹಿಂಭಾಗದ ಜವಳೇರ ಬೀದಿಯಲ್ಲಿನ ಬಂಡೆಯಲ್ಲಿ ನೆಲಸಿರುವ ಶ್ರೀ ಚೌಡೇಶ್ವರಿ ಅಮ್ಮನವರ ಕಡೇ ಕಾರ್ತಿಕ, ದೀಪಾರಾಧನೆ ಕಾರ್ಯಕ್ರಮವೂ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಸಲಾಯಿತು.
ರಾಜರ ಕಾಲದಿಂದಲೂ ಇಲ್ಲಿನ ಚೌಡೇಶ್ವರಿ ಅಮ್ಮನವರನ್ನು ಪೂಜೆ ಮಾಡಿಕೊಂಡು ಬರಲಾಗುತ್ತಿದೆ, ತದ ನಂತರ ಜವಳೇರ ಬೀದಿಯಲ್ಲಿನ ಭಕ್ತಾಧಿಗಳು ಸೇರಿಕೊಂಡು ಅಮ್ಮನವರ ಆರಾಧನೆಯನ್ನು ಮಾಡಲಾ ರಂಭಿಸಿದರು. ಇದರಿಂದ ಇಲ್ಲಿನ ಚೌಡೇಶ್ವರಿ ಅಮ್ಮನವರಿಗೆ ಪ್ರತಿ ದಿನ ಪೂಜೆಯನ್ನು ಮಾಡುವುದರ ಮೂಲಕ ಆರಾಧನೆಯನ್ನು ಮಾಡಲಾಗುತ್ತಿದೆ, ಇದರಂತೆ ಪ್ರತಿ ವರ್ಷವೂ ಸಹಾ ಡಿಸೆಂಬರ್ ಮಾಹೆಯಲ್ಲಿ ಚೌಡೇಶ್ವರಿ ಅಮ್ಮನವರಿಗೆ ಕಾರ್ತಿಕ ಮಹೋತ್ವವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅಂದು ಸಂಜೆ ಅಮ್ಮನವರಿಗೆ ಕಡೇ ಕಾರ್ತಿಕ, ದೀಪರಾಧನೆ ಅಂಗವಾಗಿ ಅಮ್ಮನವರಿಗೆ ವಿವಿಧ ರೀತಿಯ ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು, ಇದ್ದಲ್ಲದೆ ದೇವಾಲಯ ಪೂರ್ತಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತು. ಸಂಜೆಯಿಂದಲೇ ಚೌಡೇಶ್ವರಿ ಅಮ್ಮನವರಿಗೆ ಅಲಂಕಾರವನ್ನು ಮಾಡಲಾಗಿದ್ದು, ಸಂಜೆ 8 ಗಂಟೆಗೆ ಮಹಾ ಮಂಗಳರಾತಿಯನ್ನು ನೇರವೇರಿಸಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳು ಪೂಜೆಯನ್ನು ಮಾಡಿಸುವುದರ ಮೂಲಕ ಅಮ್ಮನವರ ಕೃಪೆಗೆ ಪಾತ್ರರಾದರು.
ಶ್ರೀ ಚೌಡೇಶ್ವರಿ ದೇವಸ್ಥಾನಅಭೀವೃದ್ದಿಸೇವಾಸಮಿತಿವತಿಯಿಂದ ಕಾರ್ತಿಕ, ದೀಪಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.
================================================
ನಗರದಲ್ಲಿಂದು ಸರ್ವ ಧರ್ಮೀಯರ ವಧು ವರರ ರಾಜ್ಯ ಮಟ್ಟದ ಸಮಾವೇಶ
ಚಿತ್ರದುರ್ಗ, ಡಿ,28
ನಗರದ ಬಸವೇಶ್ವರ ವಧು-ವರರ ಮಾಹಿತಿ ಕೇಂದ್ರದ ವತಿಯಿಂದಸರ್ವಧರ್ಮೀಯರ ವಧು-ವರರ ರಾಜ್ಯ ಮಟ್ಟದ ಸಮಾವೇಶವನ್ನು ಡಿ29ರ ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಯೋಜಿಸಿಲಾಗಿದೆ ಎಂದು ವ್ಯವಸ್ಥಾಪಕರಾದ ಜೆ.ಎಂ .ಜಂಬಯ್ಯ ನವರು ತಿಳಿಸಿದ್ದಾರೆ.
ಅಂದಿನ ಸಮಾವೇಶದ ಅಧ್ಯಕ್ಷತೆಯನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ. ಸಿ.ಕಳಸದವರು ವಹಿಸಲಿದ್ದು, ಸಾನ್ನಿಧ್ಯವನ್ನು ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ವಹಿಸಲಿದ್ದು, ಆಡಳಿತ ಮಂಡಳಿಯ ಮತ್ತೋರ್ವ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ಆಗಮಿಸಲಿದ್ದಾರೆ.
ಈ ಸಮಾವೇಶದಲ್ಲಿ ರೈತರು,ಪದವಿಧರ ರೈತರು, ಪದವಿಧರ ವ್ಯಾಪಾರಸ್ಥರು, ಇಂಜಿನಿಯರು, ವೈದ್ಯರು, ವಕೀಲರು, ಸ್ನಾತಕೊತ್ತರರು, ಎಂಬಿಎ, ಎಂ ಸಿ ಎ ,ಎಂ ಎ ,ಎಂ ಎಸ್ಸಿ ,ಎಂ ಕಾಂ,ಎಂ ಟೆಕ್ ಪದವೀಧರರು ಮತ್ತು ಖಾಸಗಿ ವೃತ್ತಿಪರರು ಹಾಗೂ ಮರು ವಿವಾಹ ಮತ್ತು ಅಂತರ ಜಾತಿಯ ವಿವಾಹವಾಗಲು ಇಚ್ಛಿಸುವಂತಹ ವಧು-ವರರು ಭಾಗವಹಿಸಬಹುದಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030