ಚಿತ್ರದುರ್ಗ ನಗರದ ತಮಟಕಲ್ಲು ರಸ್ತೆಯ ಬಿಸಿಎಂ ಹಾಸ್ಟೆಲಿನಲ್ಲಿ ಪರಮಪೂಜ್ಯ ಬಾಬಾ ಸಾಹೇಬರ ಪರಿನಿಬ್ಬಾಣದ ಕಾರ್ಯಕ್ರಮ…!!!

Listen to this article

ಜಂಬೂ ದ್ವೀಪ ಕರ್ನಾಟಕ (ರಿ)
ಮಹಾತ್ಮ ಫುಲೆ ಅಧ್ಯಯನ ಕೇಂದ್ರ ಚಿತ್ರದುರ್ಗ
ಇವರ ವತಿಯಿಂದ ದಿನಾಂಕ 6.12.2024ನೇ ಶುಕ್ರವಾರದಂದು ಚಿತ್ರದುರ್ಗ ನಗರದ ತಮಟಕಲ್ಲು ರಸ್ತೆಯ ಬಿಸಿಎಂ ಹಾಸ್ಟೆಲಿನಲ್ಲಿ ಪರಮಪೂಜ್ಯ ಬಾಬಾ ಸಾಹೇಬರ ಪರಿನಿಬ್ಬಾಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಯುವ ವಕೀಲರಾದ ರಮೇಶ್ ಇವರು ಮಾತನಾಡಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಯಾಗಬೇಕು ಅವರನ್ನು ಜಾತಿ ಸಂಕೋಲೆಯಿಂದ ಹೊರತಂದು ಜ್ಞಾನ,ಸ್ವಾಭಿಮಾನ, ಪ್ರಶ್ನೆ ಮಾಡುವ ಧೈರ್ಯ, ವೈಜ್ಞಾನಿಕ ಮನೋಭಾವದ ದೃಷ್ಟಿಯಲ್ಲಿ ಸ್ವೀಕರಿಸಬೇಕು. ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಿ ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡು ಒತ್ತಡ ಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ರಾಮಣ್ಣ ನಿಕಟಪೂರ್ವ ಅಧ್ಯಕ್ಷರು ಜಂಬೂ ದ್ವೀಪ ಕರ್ನಾಟಕ ಇವರು ಮಾತನಾಡಿ ಜಗತ್ತಿನಲ್ಲಿ ಸೂರ್ಯನಿಲ್ಲದ ದಿನವನ್ನು ನಾವು ಹೇಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೆ ಬಾಬಾ ಸಾಹೇಬರಿಲ್ಲದ ಒಂದು ದಿನವನ್ನು ಸಹ ಭಾರತದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಪ್ರತಿ ಕ್ಷಣದಲ್ಲೂ ಬಾಬಾ ಸಾಹೇಬರ ಸಂವಿಧಾನ ನಮ್ಮ ಜೊತೆಯಲ್ಲಿ ಇದ್ದು ನಮ್ಮನ್ನು ಕಾಪಾಡುತ್ತಿದೆ ನಮ್ಮ ಶಕ್ತಿ ಧೈರ್ಯ ಸ್ವಾಭಿಮಾನ ಎಲ್ಲವೂ ಬಾಬಾ ಸಾಹೇಬರ ಸಂವಿಧಾನ ಎಂದು ಶ್ಲಾಘಿಸಿದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಡಾಕ್ಟರ್ ವೇದಾಂತ ಏಳಂಜಿ ಯವರು ಮಾತನಾಡಿ ನಮ್ಮ ಪೂರ್ವಿಕರು ವಿದ್ಯಾಭ್ಯಾಸ ಪಡೆಯದಿರಲು, ಭೂಮಿಯನ್ನು ಹೊಂದದಿರಲು, ಗೌರವದ ಬದುಕನ್ನು ಕಾಣದಿರಲು ಪಟ್ಟ ಬದ್ಧ ಹಿತಾಸಕ್ತಿಗಳೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಹನುಮಂತಪ್ಪ ಮುಖ್ಯೋಪಾಧ್ಯಾಯರು ಒಬಳಾಪುರ ಸರ್ಕಾರಿ ಪ್ರೌಢಶಾಲೆ ಇವರು ಮಾತನಾಡಿ ಸಮಾನ ಮನಸ್ಕ ನೌಕರರೆಲ್ಲರೂ ಸೇರಿ ಚಿತ್ರದುರ್ಗದಲ್ಲಿ ಮಹಾತ್ಮ ಫುಲೆ ಕೆಎಎಸ್ ಅಧ್ಯಯನ ಕೇಂದ್ರವನ್ನು ಆರಂಭಿಸಿದ್ದೇವೆ ಚಿತ್ರದುರ್ಗ ಜಿಲ್ಲೆಯ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳನ್ನು ನೀಡುತ್ತಿದ್ದೇವೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀರಾಮಶೇಖರ್ ಮುಖ್ಯೋಪಾಧ್ಯಾಯರು ಕಲ್ಲಹಳ್ಳಿ, ಶ್ರೀ ಪ್ರಕಾಶ್ ಆಂಗ್ಲಭಾಷಾ ಶಿಕ್ಷಕರು, ಮುರಾರ್ಜಿ ದೇಸಾಯಿ ವಸತಿಯುತಶಾಲೆ ಕಡ್ಲೆಗುದ್ದು
ಶ್ರೀಸಿದ್ದಪ್ಪ ಮುರಾರ್ಜಿ ದೇಸಾಯಿ ವಸತಿಯುತಶಾಲೆ ಕಡ್ಲೆಗುದ್ದು.
ಶ್ರೀ.ಸಿದ್ದೇಶ್ ಶಿಕ್ಷಕರು ಕಬೀರಾನಂದ ಸ್ವಾಮಿ ಪ್ರೌಢಶಾಲೆ, ಚಿತ್ರದುರ್ಗ
ಪ್ರದೀಪ್ ಶಿಕ್ಷಕರು ಹಾಜರಿದ್ದರು
ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ವಿದ್ಯಾರ್ಥಿ ನಿಲಯದ ನಿಲಯಪಾಲಕರಾದ ಶ್ರೀಯುತ ರುದ್ರಮುನಿ ಸರ್ ಇವರು ಆ ಯೋಜನೆಮಾಡಿ ಪ್ರಸ್ತಾವಿಕ ಭಾಷಣವನ್ನು ಮಾಡುತ್ತಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ವೈಯಕ್ತಿಕ ಬದುಕನ್ನೇ ತ್ಯಾಗ ಮಾಡಿ ನಮ್ಮ ಬಾಳನ್ನು ಹಸನಾಗಿಸಿದ್ದಾರೆ. ಬಾಬಾ ಸಾಹೇಬರೇ ಭಾರತಕ್ಕೆ ಆದರ್ಶ ವ್ಯಕ್ತಿ ಆಗಬೇಕು ಎಂದು ತಮ್ಮ ಮನದಾಳದ ಮಾತುಗಳನ್ನು ಸಭೆಯಲ್ಲಿ ಹಂಚಿಕೊಂಡರು…

ವರದಿ, ಡಾ “ಗಿರೀಶ್ ಚಿತ್ರದುರ್ಗ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend