ಸಂವಿಧಾನ ಸಮರ್ಪಣಾ ದಿನಾಚರಣೆ…!!!

Listen to this article

ಸಂವಿಧಾನ ಸಮರ್ಪಣಾ ದಿನಾಚರಣೆ
ಸಾವಿರಾರು ವರ್ಷಗಳಿಂದ ಭಾರತವು ಜಾತಿ, ಧರ್ಮ, ಮೇಲು ಕೀಳು ಎನ್ನುವ ದಾರಿದ್ರ್ಯ ಗಳನ್ನು ಹೊಂದಿದ್ದ ವಿಷಮಯ ಪರಿಸ್ಥಿತಿಯಲ್ಲಿ ಜರ್ಜರಿತವಾಗಿತ್ತು. ಈ ಅವಮಾನಿತಾ ಬದುಕಿನಲ್ಲಿ ನೊಂದು ಬೆಂದು ಹೋಗಿದ್ದ ಬಹುಜನರಿಗೆ ಸಂವಿಧಾನದ ಮೂಲಕ ಅತ್ಯಂತ ಗೌರವದ ಬದುಕಿಗೆ ಮುನ್ನುಡಿಯಾಡಿದ ಬೋದಿಸತ್ವ ಪರಮಪೂಜ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ನೆನೆಯುವ ಗೌರವಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಭಾವಿಸಿ ಇಂದು ಮಹಾತ್ಮ ಫುಲೆ ಅಧ್ಯಯನ ಕೇಂದ್ರ ದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಸ್ತಾವಿಕವಾಗಿ ಚಿತ್ರದುರ್ಗದ ಯುವ ವಕೀಲರಾದ ಶ್ರೀ ರಮೇಶ್ ಇವರು ಮಾತನಾಡಿ ಸಂವಿಧಾನವು 1949 ನವೆಂಬರ್ 26ರಂದು ಸಂವಿಧಾನವನ್ನು ರಚಿಸಲು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಸಂವಿಧಾನ ರಚನಾ ಸಮಿತಿಯು ಎರಡು ವರ್ಷ 11 ತಿಂಗಳು 18 ದಿನಗಳ ನಿರಂತರ ಶ್ರಮದ ಫಲವಾಗಿ ಕರಡು ಪ್ರತಿಯನ್ನು ಸಿದ್ಧಮಾಡಲಾಯಿತು. ಈ ದಿನವನ್ನು ಭಾರತದಾದ್ಯಂತ ಕಾನೂನು ದಿನವನ್ನಾಗಿಯೂ ಸಹ ಆಚರಿಸುತ್ತಿದ್ದೇವೆ. ಸಂವಿಧಾನ ರಚನಾ ಸಮಿತಿಯ ಸದಸ್ಯರ ಸಂಖ್ಯೆ 292. ಹಾಗೂ 22 ಕಮಿಟಿಗಳನ್ನು ರಚನೆ ಮಾಡಲಾಯಿತು. ಸಂವಿಧಾನವು ಜಾರಿಯಾಗುವುದಕ್ಕೂ ಮೊದಲು ಸಂಸತ್ತಿನಲ್ಲಿ 7,635 ತಿದ್ದುಪಡಿಗಳನ್ನು ಮಂಡನೆ ಮಾಡಲಾಯಿತು ಇವುಗಳನ್ನು ಸ್ವತಹ ಅಂಬೇಡ್ಕರ್ರವರೇ ತಮ್ಮ ಕೈಬರಹದಲ್ಲಿ ದಾಖಲಿಸಿಕೊಂಡು ಇವುಗಳಲ್ಲಿ 2473 ತಿದ್ದುಪಡಿಗಳನ್ನು ಅಂಗೀಕರಿಸಿ ತಿದ್ದುಪಡಿ ಮಾಡಲಾಯಿತು. ಭಾರತದ ಸಂವಿಧಾನವು ಸಂಪೂರ್ಣವಾಗಿ ಭಗವನ್ ಬುದ್ಧರ ಚಿಂತನೆಗಳನ್ನು ಒಳಗೊಂಡಿದೆ. ಸರ್ವ ಜನರಿಗೂ ಸಮಪಾಲು ಸಮ ಬಾಳು ಎನ್ನುವ ಅದ್ಭುತ ಚಿಂತನೆಯೊಂದಿಗೆ ಸಂವಿಧಾನವನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದರು.
ಶ್ರೀಯುತ ರಾಮಣ್ಣ ನಿಕಟಪೂರ್ವ ಅಧ್ಯಕ್ಷರು ಜಂಬುದ್ವೀಪ ಕರ್ನಾಟಕ
ಶ್ರೀ ದುರ್ಗೇಶಪ್ಪ ಹಿರಿಯ DSS ಹೋರಾಟಗಾರರು
ಶ್ರೀ ಚಿಕ್ಕಣ್ಣ,
ಶ್ರೀಯುತ ಆನಂದ್ ಕುಮಾರ್ ಸಾಹಿತಿಗಳು,
ಶ್ರೀ ರಾಮು ಗೋಸಾಯಿ
ರಾಮು ಟಿ
ಹನುಮಂತಪ್ಪ ಮುಖ್ಯೋಪಾಧ್ಯಾಯರು ಕುನಬೆವು ಸರ್ಕಾರಿ ಪ್ರೌಢಶಾಲೆ.
ವಕೀಲರಾದ ವಿಶ್ವಾನಂದ ವಧಿಕೆರೆ
ಶಿಕ್ಷಕರಾದ ಪ್ರದೀಪ್ ಕುಮಾರ್ ಮತ್ತು ಪ್ರಕಾಶ್ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…

ವರದಿ. ಡಾ “ಗಿರೀಶ್ ಚಿತ್ರದುರ್ಗ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend