ಚಿತ್ರದುರ್ಗ ದ ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಮಾಡಲಾಯಿತು…!!!

Listen to this article

“ರಾಷ್ಟ್ರೀಯ ಶಿಕ್ಷಣ ದಿನಾಚರಣೆ”

ಭಾರತದ ಸ್ವತಂತ್ರ ಹೋರಾಟಗಾರರೂ, ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾದ ‘ಮೌಲಾನಾ ಅಬುಲ್ ಕಲಾಂ ಆಜಾದ್’ ರವರ ಜನ್ಮ ದಿನವಾದ ನವೆಂಬರ್ ೧೧ ರಂದು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ ಎಂದು ‘ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯದ’ ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ಯವರು ತಿಳಿಸಿದರು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದ ಬಿ.ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ ‘ರಾಷ್ಟ್ರೀಯ ಶಿಕ್ಷಣ ದಿನ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಾತನಾಡುತ್ತ ಮೌಲಾನಾ ಆಜಾದರವರು ಅಬುಲ್ ಕಲಾಂ ಆಜಾದ್ರವರು ಉರ್ದು, ಹಿಂದಿ, ಅರೇಬಿಕ್, ಪರ್ಶಿಯನ್, ಇಂಗ್ಲೀಷ್, ಗಣಿತ, ತತ್ವಶಾಸ್ತ್ರ ,ಇತಿಹಾಸ, ಶರಿಯತ್ ಮತ್ತು ವಿಜ್ಞಾನ ವಿಷಯಗಳನ್ನು ಕರಗತ ಮಾಡಿಕೊಂಡಿದ್ದರು ಎಂದು ತಿಳಿಸಿದರು. ಕಲಾಂರ ತಮ್ಮ ಜ್ಞಾನ ಸಂಪತ್ತಿನಿಂಧ ಅತ್ಯುತ್ತಮ ಬರಹಗಾರರಾಗಿ ಹೊರಹೊಮ್ಮಿದರು. ಕಲಾಂರವರು ತನ್ನ ಲೇಖನಗಳ ಮೂಲಕ ಬ್ರಿಟಿಷರ ಆಡಳಿತದ ವಿರುದ್ಧ ಹಾಗೂ ಭಾರತೀಯರಲ್ಲಿ ಹೋರಾಟ ಸಂಘಟನೆಯ ಮನೋಭಾವನೆಯ ವಿಚಾರಗಳನ್ನು ಬರೆಯುತ್ತಿದ್ದರು. ಭಾರತ ಸ್ವತಂತ್ರ ಹೋರಾಟದಲ್ಲಿ ಮಹಾತ್ಮಗಾಂಧೀಜಿಯವರ ಆತ್ಮೀಯ ಒಡನಾಡಿಯಾಗಿದವರು ‘ಅಬುಲ್ ಕಲಾಂ ಆಜಾದ್ರವರು’. ಸ್ವತಂತ್ರ ಹೋರಾಟದಲ್ಲಿ ಹಲವು ಬಾರಿ ಸೆರೆಮನೆ ವಾಸವನ್ನು ಸಹ ಅನುಭವಿಸಿದರು. ಕಲಾಂರು ಭಾರತೀಯ ಕಾಂಗ್ರೇಸ್ ನ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸಿದರು. ಭಾರತದ ಭಾವೈಕ್ಯತೆಯ ಹಲವು ಅಂಶಗಳನ್ನು ಕುರಿತು ಲೇಖನಗಳನ್ನು ಬರೆಯುವ ಮೂಲಕ ಭಾರತೀಯರಲ್ಲಿ ದೇಶಪ್ರೇಮ ಮತ್ತು ಭಾವ್ಯಕ್ಯತೆಯ ವೃದ್ಧಿಗೆ ಶ್ರಮಿಸಿದ್ದಾರೆ. ಇವರು ತನ್ನ ಜೀವನಪೂರ್ಣ ಹಿಂದೂ-ಮುಸ್ಲಿರ ಐಕ್ಯತೆಗಾಗಿ ಶ್ರಮಿಸಿದ ಅಪ್ಪಟ ಭಾರತೀಯ. ಸ್ವತಂತ್ರದ ಸನ್ನವೇಶದಲ್ಲಿ ಭಾರತದ ವಿಭಜನೆಯನ್ನು ವಿರೋಧಿಸಿ, ಅಖಂಡ ಭಾರತ ರಚನೆಗೆ ಒತ್ತು ನೀಡಿದವರು. ಸದಾ ಜ್ಯಾತ್ಯಾತೀತ ನಿಲುವಿಗೆ ಕಟಿಬದ್ಧತೆ ಹೊಂದಿದವರು. ಸ್ವತಂತ್ರ ಭಾರತದ ಪ್ರಥಮ ಸರ್ಕಾರದ ಸಚಿವ ಸಂಪುಟದಲ್ಲಿ ಇವರು ಪ್ರಥಮ ಶಿಕ್ಷಣ ಸಚಿವರಾಗಿ, ಭಾರತದ ಶಿಕ್ಷಣಕ್ಕೆ ಭದ್ರ ತಳಹದಿಯನ್ನು ರೂಪಿಸಿದ ಶಿಕ್ಷಣದ ರೂವಾರಿಯಾಗಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣದ ರೂಪುರೇಷೆಯ ನಾಯಕತ್ವವಹಿಸಿ ಯಶಸ್ವಿಗೊಳಿಸಿದವರು. ಹಾಗಾಗಿ ಇವರ ಶೈಕ್ಷಣಿಕ ಸೇವೆಯ ಸವಿನೆನಪಿಗಾಗಿ ಇವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ, ‘ಮೌಲಾನಾ ಅಬುಲ್ ಕಲಾಂ ಆಜಾದ್ ರಂತಹ ನಾಯಕರ ಗುಣಗಳು ಇಂದಿನ ಸಚಿವರಿಗೆ, ನಾಯಕರುಗಳಿಗೆ ಹಾಗೂ ಶೈಕ್ಷಣಿಕ ಚಿಂತಕರುಗಳಿಗೆ ಆದರ್ಶವಾಗಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಶಾಲಾ ಕಾಲೇಜುಗಳಲ್ಲಿ ಇಂತಹ ಹಲವು ವ್ಯಕ್ತಿಗಳ ಚಿಂತನೆಗಳನ್ನು ತಿಳಿಸುವಂತಹ ಕಾರ್ಯಗಳಾಗಬೇಕೆಂದು ಡಾ. ಗಿರೀಶ್ ರವರು ಕರೆನೀಡಿದರು.
ಉಪನ್ಯಾಸಕರಾದ ಡಾ. ನೇತ್ರಾವತಿ ಯವರು ಮಾತನಾಡಿ ಅಬುಲ್ ಕಲಾಂ ಆಜಾದ್ರವರ ಶೈಕ್ಷಣಿಕ ಚಿಂತನೆ, ಆಡಳಿತವು ಇಂದು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ನಾಯಕರು ಹಾಗು ಅಧಿಕಾರಿಗಳು ಅನುಸರಿಸುವುದರಿಂದ ಶಿಕ್ಷಣದ ಪ್ರಗತಿ ಸಾಧಿಸಬಹುದಾಗಿದೆ. ಉಪನ್ಯಾಸಕರಾದ ಶ್ರೀ ಮತಿ ರೂಪ ಪ್ರಸಾದ್, ಶ್ರೀ ಅನುದೀಪ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ಸಾಹಿತ್ಯ ನಿರೂಪಿಸಿದರು.
ವಂದನೆಗಳೊಂದಿಗೆ.. .. ..

ಡಾ. ಗಿರೀಶ್ ಟಿ. ಪ್ರಾಂಶುಪಾಲರು, ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯ, ಚಿತ್ರದುರ್ಗ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend