ಕೆಳಗೋಟೆ ಚನ್ನಕೇಶವ ದೇಗುಲ ಆವರಣದಲ್ಲಿ ಸ್ವಚ್ಛತಾ ಕಾರ್ಯ
ಚಿತ್ರದುರ್ಗ:ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ಚಿತ್ರ ದುರ್ಗ ನಗರದ ಕೆಳಗೋಟೆಯ ಚನ್ನಕೇಶವ ದೇವಸ್ಥಾನದ ಆವರಣದಲ್ಲಿ ಗುರುವಾರ ಸ್ವಚ್ಛತಾ ಕಾರ್ಯ ನೆರವೇರಿಸಿದರು.ಜಿಲ್ಲಾ ಆಯುಷ್ ಇಲಾಖೆ, ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಸ್ವಚ್ಛತೆ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾoತ ಎಸ್ ನಾಗಸಮುದ್ರ, ಶರೀರ ಸ್ಚಚ್ಛವಾದರೆ ದೈಹಿಕ ಆರೋಗ್ಯ, ಮನಸ್ಸು ಸ್ವಚ್ಛವಾಗಿದ್ದರೆ ಮಾನಸಿಕ ಆರೋಗ್ಯ ಹಾಗೂ ಪರಿಸರ ಸ್ಚಚ್ಛವಾದರೆ ಸಮಾಜದ ಆರೋಗ್ಯ. ಆದ ಕಾರಣ ಈ ಅಭಿಯಾನದ ಅಡಿಯಲ್ಲಿ ಧಾರ್ಮಿಕ ಸ್ಥಳವಾದ ಶ್ರೀ ಚನ್ನಕೇಶವ ದೇವಸ್ಥಾನದ ಆವರಣ ಸ್ಚಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಕಚೇರಿ, ಜಿಲ್ಲಾಸ್ಪತ್ರೆ ಆಯುಷ್ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆಯುಷ್ ವೈದ್ಯಾಧಿಕಾರಿಗಳು, ಯೋಗ ಸಂಸ್ಥೆಗಳ ಪದಾಧಿಕಾರಿಗಳಾದ ರವಿ ಅಂಬೇಕರ್, ಮುರಳಿ, ಸುನಿತಾ, ಮಂಜುಳ, ವಸಂತ ಲಕ್ಮಿ , ಮಂಜುನಾಥ್ ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ನಗರಸಭಾ ಸದಸ್ಯರಾದ ಮಂಜುನಾಥ್ ಹಾಗೂ ಮುಖಂಡರಾದ ಪ್ರಕಾಶ್ ಅವರು ಕಾರ್ಯಕ್ರಮಕ್ಕೆ ಸರ್ವ ಸಹಕಾರ ನೀಡಿದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030