ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಎಸ್ ಬಣಕಾರ್ ಹೇಳಿಕೆ
ಸಮತೋಲಿತ ಆಹಾರ ಸೇವನೆಯಿಂದ ರಕ್ತಹೀನತೆ ದೂರ
ಚಿತ್ರದುರ್ಗ :ಮಹಿಳೆಯರು ಹಾಗೂ ಗರ್ಭಿಣಿಯರು ಸಮತೋಲಿತ ಆಹಾರ ಸೇವನೆಯಿಂದ ರಕ್ತಹೀನತೆ ತೊಂದರೆಯಿoದ ಮುಕ್ತರಾಗಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಎಸ್ ಬಣಕಾರ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ, ಶಿಕ್ಷಣ ಇಲಾಖೆ ಹಾಗೂ ಬಿ.ಜಿ.ಕೆರೆ. ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಸೋಮವಾರ ಬಿ.ಜಿ.ಕೆರೆ ಶ್ರೀ ವಾಲ್ಮೀಕಿ ಸಮುದಾಯ ಭವನದಲ್ಲಿ ಆಯೋಜಿಸಲಾದ ಪೋಷಣ್ ಮಾಸಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಪೋಷಣ್ ಅಭಿಯಾನದ ಮುಖ್ಯ ಗುರಿ ರಕ್ತಹೀನತೆ ತಡೆಗಟ್ಟುವುದಾಗಿದೆ. ಮಹಿಳೆಯರಯ ಇಲಾಖೆಯ ಯೋಜನೆಗಳ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ವೈದ್ಯ ಮಹಾಂತೇಶ್ ಮಾತನಾಡಿ ಗರ್ಭಿಣಿ ತಾಯಂದಿರಿಗೆ ವಿಶೇಷವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಮಾಡಲಾಗುತ್ತಿದೆ. ರಕ್ತ ಹೀನತೆ ತಡೆಗಟ್ಟಲು ಕಬ್ಬಿನಾಂಶ ಮಾತ್ರೆ ಸೇವಿಸಬೇಕು. ಇದರ ಪೂರಕ ಪೌಷ್ಟಿಕ ಆಹಾರ ತೆಗದುಕೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಣ್ಣ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತಾಯಂದಿರಿಗೆ ವಿಶೇಷವಾಗಿ ಸರ್ಕಾರದಿಂದ ಸಗುವಂತಹ ಆಹಾರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಕುಮಾರ್ , ಪೂರಕ ಪೌಷ್ಟಿಕ ಆಹಾರ , ಭಾಗ್ಯಲಕ್ಷ್ಮೀ, ಪ್ರಧಾನ ಮಂತ್ರಿ ಮಾತೃ ವಂದನ್ ಯೋಜನೆಯ ಮಾಹಿತಿ ನೀಡಿದರು. ಗರ್ಭಿಣಿಯರಿಗೆ ಸೀಮಂತ, ತಾಯಿಯ ಹೆಸರಿನಲ್ಲಿ ಗಿಡ ನೆಡುವ ಹಾಗೂ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.
ಮೊಳಕಾಲ್ಮುರು ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕ ಪಿರ್ದೋಸ್ ಜಹಾನ್, ಪೋಷಣ್ ಅಭಿಯಾನ್ ಯೋಜನಾ ಸಂಯೋಜಕ ಹನುಮಂತಪ್ಪ, ಸೇರಿದಂತೆ ಗ್ರಾ.ಪಂ.ಸದಸ್ಯರು ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸಾರ್ವಜನಿಕರು, ಗರ್ಭಿಣಿ ತಾಯಂದಿರು, ಮುದ್ದು ಮಕ್ಕಳು ಇದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030