ಕರ್ನಾಟಕ ವಾಲ್ಮೀಕಿ ಪ್ರಜಾ ಸೇನೆಯ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರನ್ನಾಗಿ ರವಿಚಂದ್ರರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಯಿತು. ವೆಂಕಟೇಶ್ ವಿ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ರಾಜ್ಯಾಧ್ಯಕ್ಷರು ವೇಣುಗೋಪಾಲ್ ರವರು ಮಾತನಾಡಿ ರವಿಚಂದ್ರ ರವರು ವಾಲ್ಮೀಕಿ ಸಮಾಜದ ಬಗ್ಗೆ ಅವರಿಗೆ ಅಪಾರ ಗೌರವವಿದೆ ಸಮಾಜದ ಬಗ್ಗೆ ಆಸಕ್ತಿ ಹೊಂದಿರುವಂತಹ ವ್ಯಕ್ತಿ. ಅದರಿಂದ ಇವರ ಸೇವಾ ಮನೋಭಾವನೆಯನ್ನು ಗುರುತಿಸಿ ನಾನು ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷನಾಗಿ ನೇಮಕ ಮಾಡಿರುತ್ತೇನೆ. ಜಿಲ್ಲಾಧ್ಯಕ್ಷರಾದ ರವಿಚಂದ್ರ ಅವರು ಮಾತನಾಡಿ ನಾನು ವಾಲ್ಮೀಕಿ ಸಮಾಜಕ್ಕೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ. ವಾಲ್ಮೀಕಿ ಸಮಾಜಕ್ಕೆ ಯಾವುದೇ ಅಡೆತಡೆಗಳು ಬಂದಾಗ ಅದನ್ನು ಸರಿಪಡಿಸಲು ನಾವು ಸದಾ ಸಿದ್ಧರಿರುತ್ತೇವೆ. ನಮ್ಮ ವಾಲ್ಮೀಕಿ ಸಮಾಜದ ಜನರು ಕ್ಷೇತ್ರದಲ್ಲಿ ತುಂಬಾ ಹಿಂದುಳಿದಿದ್ದಾರೆ ಒಳ್ಳೆಯ ಶಿಕ್ಷಣವನ್ನು ಪಡೆಯಬೇಕು ಜಿಲ್ಲೆಯಲ್ಲಿ ಉತ್ತಮ ಸಮಾಜ ಮತ್ತು ಕೆಲಸಗಳನ್ನು ಮಾಡಲು ನಾನು ಸಿದ್ಧನಿರುತ್ತೇನೆ ಎಂದು ನೋಡಿದರು…
ವರದಿ. ಎಂ. ಕೆ. ಮೂರ್ತಿ, ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030