ನಟರಾಜ್ ಗೌಡಯ್ಯರವರ ಯುವಕರ ಬಳಗದ ವತಿಯಿಂದ ಮೂರನೇ ವರ್ಷದ ಗಣೇಶ ಪ್ರತಿಷ್ಠಾಪನೆಯನ್ನು ಅದ್ದೂರಿಯಾಗಿ ಮಾಡಲಾಗಿತ್ತು ಮತ್ತು ಬೆಳಗಿನ ಜಾವ ರಂಗೋಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಗಣೇಶನಿಗೆ ಹಲವಾರು ಹಣ್ಣು ಹಂಪಲಗಳು ಮತ್ತು ಬಣ್ಣ ಬಣ್ಣದ ರೀತಿಯ ಹೂಗಳಿಂದ ಅಲಂಕಾರಿಸಲಾಗಿತ್ತು.ಸಂಜೆಯ ವೇಳೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಲವಾರು ಯುವಕರು ಮತ್ತು ಯುವತಿಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸರಿ ಸುಮಾರು ಮೂರು ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಗೊಳಿಸಿದ ನಂತರ ಗಣೇಶನನ್ನು ಸರಿ ಸುಮಾರು ಎರಡು ಕಿಲೋಮಿಟರ್ ದೂರದವರೆಗೆ ಮೆರವಣಿಗೆ ಕಾರ್ಯಕ್ರಮ ಸಹ ಹಮ್ಮಿಕೊಂಡಿದ್ದರು. ಗಣೇಶನ ಮುಂದೆ ಹಲವಾರು ಬೈಕುಗಳಿಂದ ಗಣೇಶನಿಗೆ ಜೈಕಾರಗಳನ್ನು ಕೂಗುತ್ತಾ ಹೋಗಿ ಗಣೇಶನ ವಿಸರ್ಜನೆ ಕಾರ್ಯಕ್ರಮವನ್ನು ಮಾಡಲಾಯಿತು. ಕಾರ್ಯಕ್ರಮದ ರೂವಾರಿಯಾಗಿದ್ದ ಹೇಮಂತ್ ಕುಮಾರ್. ಜನಾರ್ದನ್. ಜಯಿಸ್. ಭಾಸ್ಕರ್ ದಾಮೋದರ್ ಸೂರ್ಯ ಕಿರಣ್. ನಾಗೇಶ್. ಮೂರ್ತಿ ಎಮ್ ಕೆ. ಗಿರೀಶ್.ಸುಂದರೇಶ್. ವಿನೋದ್ ಕುಮಾರ್.ಲೋಕೇಶ್. ಭಾಸ್ಕರ್ ಎಂ ಎನ್. ವಿನೋದ್ ಎಸ್.ದರ್ಶನ್. ಜಗದೀಶ್ ಲಕ್ಷ್ಮಣ್. ನಿತಿನ್. ಅಂಬೇತ್ ಇನ್ನು ಹಲವಾರು ಯುವಕರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…
ವರದಿ. ಎಂ.ಕೆ, ಮೂರ್ತಿ, ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030