ಗೋಪನಹಳ್ಳಿ ಗ್ರಾಮದಲ್ಲಿ ಗೌರಿ ಹಬ್ಬಕ್ಕೆ ಸಂಭ್ರಮದ ತೆರೆ ಆರತಿ ಪೂಜೆ ಮುಗಿಸಿ ಕುಣಿದು ಕುಪ್ಪಳಿಸಿದ ಗೌರಿ ಮಕ್ಕಳು…!!!

Listen to this article

ಗೋಪನಹಳ್ಳಿ ಗ್ರಾಮದಲ್ಲಿ ಗೌರಿ ಹಬ್ಬಕ್ಕೆ ಸಂಭ್ರಮದ ತೆರೆ

ಆರತಿ ಪೂಜೆ ಮುಗಿಸಿ ಕುಣಿದು ಕುಪ್ಪಳಿಸಿದ ಗೌರಿ ಮಕ್ಕಳು

ಚಳ್ಳಕೆರೆ : ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗೌರಿ ಹುಣ್ಣಿಮೆಯ ಅಂಗವಾಗಿ ಗೌರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ವಿಸರ್ಜನೆ ಮಾಡಲಾಯಿತು.

ಗ್ರಾಮದಲ್ಲಿ ಗೌರಿ ಹುಣ್ಣಿಮೆಯಂದು ಕೆರೆ ಮಣ್ಣನ್ನು ತಂದು ಆನೆಯ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸಿ, ಅದರ ಮೇಲೆ ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿವಿಧ ಹೂಗಳಿಂದ ಅಲಂಕಾರ ಮಾಡಿ, ಐದು ದಿನಗಳ ಕಾಲ ಗ್ರಾಮದ ಹೆಣ್ಣು ಮಕ್ಕಳು ಸೀರೆಯನ್ನು ಹುಟ್ಟು ಅಲಂಕಾರಗೊಂಡು ಗೌರಮ್ಮನಿಗೆ ಆರತಿ ಹಿಡಿದು ವಿವಿಧ ರೀತಿಯ ಪೂಜೆಗಳನ್ನು ಸಲ್ಲಿಸುತ್ತಾರೆ.

ಗೌರಿಗೆ ಮೊದಲ ದಿನ ಹಳ್ಳಿಯ ಸೊಗಡಿನ ಜನಪದ ಗೀತೆಗಳನ್ನು ಹಾಕಿಕೊಂಡು ಗಂಗಾ ಪೂಜೆ ಮಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಎರಡನೇ ದಿನ ಕೋಲಾಟ ದೊಂದಿಗೆ ನೃತ್ಯವನ್ನು ಸಹ ಮಾಡಲಾಯಿತು, ಮೂರು ಮತ್ತು ನಾಲ್ಕನೇ ದಿನ ವಿವಿಧ ಕಡೆಯ ಭಜನೆ ತಂಡಗಳನ್ನು ಕರೆಸಿ ಭಜನೆ ಕಾರ್ಯಕ್ರಮವನ್ನು ಪ್ರತಿದಿನ ಹಮ್ಮಿಕೊಂಡು ಗೌರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.

56ನೇ ವರ್ಷದ ಗೌರಿ ಹಬ್ಬ: ಗೋಪನಹಳ್ಳಿ ಗ್ರಾಮದಲ್ಲಿ ಗೌರಿ ಹಬ್ಬವನ್ನು 56 ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ, ನಮಗೆ ಸಮೃದ್ಧಿ ಮಳೆ ಆಗಲಿ ಮಳೆ ಆಗದೆ ಇರಲಿ ಯಾವ ವರ್ಷವೂ ಹಬ್ಬವನ್ನು ಕೈ ಬಿಡದೆ ಹಿಂದಿನಿಂದಲೂ ನಮ್ಮ ಗ್ರಾಮದಲ್ಲಿ ಆಚರಿಸಿಕೊಳ್ಳುತ್ತಾ ಬಂದಿದ್ದೇವೆ.ಗೌರಿಯನ್ನು ವಿಸರ್ಜನೆ ಮಾಡುವ ಕೊನೆಯ ದಿನ, ಕೀಲು ಕುದುರೆ, ನಂದಿಕೋಲು, ಡೋಲು ಕುಣಿತ, ವೀರಗಾಸೆ, ನೃತ್ಯ ಪ್ರದರ್ಶನ ಹೀಗೆ ವಿವಿಧ ರೀತಿಯ ಕಲಾತಂಡಗಳನ್ನು ಪ್ರತಿ ವರ್ಷವೂ ಕರೆತಂದು ಗೌರಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ವರ್ಷದಿಂದ ವರ್ಷ ಯಶಸ್ವಿಗೊಳಿಸಿಕೊಂಡು ಬಂದಿದ್ದೇವೆ ಎಂದು ಗ್ರಾಮದ ಶ್ರೀನಿವಾಸ್ ತಿಳಿಸಿದರು.

ಪ್ರತಿ ವರ್ಷ ಗೌರಿ ಹುಣ್ಣಿಮೆಯಲ್ಲಿ ಗಂಗಾ ಪೂಜೆಯೊಂದಿಗೆ ಗ್ರಾಮದ ಮುತ್ತೈದೆ ಹೆಣ್ಣು ಮಕ್ಕಳು, ಗೌರಿ ಮಕ್ಕಳು ಗಂಗಾ ಪೂಜೆಯನ್ನು ನೆರವೇರಿಸಿ ಗಂಗಪೂಜೆ ಮಾಡಿ ಐನಾರ್ ಮನೆಯಿಂದ ಗೌರಿಯನ್ನು ಶೃಂಗರಿಸಿ. ಗೌರಿ ಮಕ್ಕಳು ಗ್ರಾಮಸ್ಥರು ಮಾರಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿ ಐದು ದಿನಗಳ ಕಾಲ ಹಬ್ಬವನ್ನು ಆಚರಿಸಿ ಕೊನೆ ದಿನ ಗಂಗೆಯೊಂದಿಗೆ ಸೇರುವಂತೆ ವಿಸರ್ಜನೆ ಮಾಡಲಾಗುತ್ತದೆ ಎಂದು ಬಸಣ್ಣ ತಿಳಿಸಿದ್ದಾರೆ.

ಆರತಿ ಹಿಡಿದ ಗೌರಿ ಮಕ್ಕಳು: ಗೌರಿಯನ್ನು ವಿಸರ್ಜನೆ ಮಾಡುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೌರಿ ಮಕ್ಕಳು ಮಂಗಳಾರತಿ ಹಿಡಿದು ಗೌರಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವ ತನಕ ದಾರಿ ಉದ್ದಕ್ಕೂ ಹಿಡಿದುಕೊಂಡು ಸಾಗುತ್ತಾರೆ. ಮಂಗಳಾರತಿಯನ್ನು ಹಿಡಿದರೆ ಪ್ರತಿ ಹೆಣ್ಣು ಮಕ್ಕಳಿಗೂ ಗೌರಮ್ಮ ಹಾಗೂ ಮಾರಮ್ಮ ದೇವಿ ಅವರಿಗೆ ಜೀವನದಲ್ಲಿ ಸುಖಕರವಾಗಿರಲು ಆಶೀರ್ವದಿಸುತ್ತಾರೆ ಎಂದು ನಂಬಿಕೆ ಇಟ್ಟಿದ್ದಾರೆ. ಗೌರಿಗೆ ಆರತಿ ಹಿಡಿಯುವುದೇ ಶ್ರೇಷ್ಠ ವಾದ ಪೂಜೆಯನ್ನು ನಡೆಸಿಕೊಂಡು ಪ್ರತಿವರ್ಷವೂ ಆಚರಣೆ ಮಾಡುತ್ತಾರೆ.

ನೃತ್ಯ ಮಾಡಿದ ಗೌರಿಯರು: ಗ್ರಾಮದ ಹೆಣ್ಣು ಮಕ್ಕಳಿಗೆ ಗೌರಿ ಹಬ್ಬ ಶ್ರೇಷ್ಠವಾದ ಹಬ್ಬವಾಗಿದೆ. ಈ ಹಬ್ಬವನ್ನು ಹೆಣ್ಣು ಮಕ್ಕಳಿಗಾಗಿ ಆಚರಣೆ ಮಾಡುವುದರಿಂದ ಸೀರೆಯನ್ನುಟ್ಟು ಬಂದ ಗೌರಿಯರು ನೃತ್ಯವನ್ನು ಮಾಡಿ ಗ್ರಾಮಸ್ಥರ ಗಮನ ಸೆಳೆಯುವಂತೆ ಮಾಡಿದರು.ಈ ಹಬ್ಬಕ್ಕೆ ಗ್ರಾಮದ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗಿದ್ದರು ಸಹ ಈ ಹಬ್ಬಕ್ಕೆ ತವರು ಮನೆಗೆ ಬಂದು ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಧಮ್ಮ ತಿಪ್ಪೇಸ್ವಾಮಿ, ಸದಸ್ಯರಾದ ಹರೀಶ್, ಶಾರದಮ್ಮ, ಭವಾನಿ ಉಮೇಶ್, ಪಿಟಿಎಸ್ ನಾಗರಾಜ್, ಊರಿನ ದಳಪತಿ ತಮ್ಮೇಗೌಡ, ಗ್ರಾಮಸ್ಥರಾದ ಬಸಣ್ಣರ್ ತಿಪ್ಪೇಸ್ವಾಮಿ, ನವೀನ್, ಮಂಜುನಾಥ್, ಸಮಸ್ತ ಗ್ರಾಮಸ್ಥರು ಇದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend