ಚಳ್ಳಕೆರೆ :-ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಚಳ್ಳಕೆರೆ ಅಬಕಾರಿ ನಿರೀಕ್ಷಕ ಸಿ. ನಾಗರಾಜು ಹಾಗೂ ಚಿತ್ರದುರ್ಗ ಅಬಕಾರಿ ನಿರೀಕ್ಷಕಿ ಎ. ವನಿತಾ ಹಾಗೂ ಅಬಕಾರಿ ಸಿಬ್ಬಂದಿಗಳಿಂದ ದಾಳಿ ಮಾಡಲಾಗಿದ್ದು ಒಟ್ಟು 6.ಲಕ್ಷ 80 ಸಾವಿರ ಮೌಲ್ಯದ 13 ಕೆ.ಜಿ 680 ಗ್ರಾ ಗಾಂಜಾ ವಶಕ್ಕೆ ಪಡೆದಿದ್ದಾರೆ.
ನಗರದ ಸೂಜಿಮಲ್ಲೇಶ್ವರ ನಗರದ ಮನೆ ಮೇಲೆ ಅಬಕಾರಿ ಡಿಸಿ ಡಾ..ಬಿ.ಮಾದೇಶ ಇವರ ಮಾರ್ಗದರ್ಶನದಲ್ಲಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ತಳಕಿನ ಮೆಹಬೂಬ್ ಎನ್ನುವ ವ್ಯಕ್ತಿ ಮನೆಯ ಬಾಡಿಗೆ ಪಡೆದು ಗಾಂಜಾ ಶೇಖರಣೆ ಮಾಡಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಇಂದು ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಚಳ್ಳಕೆರೆ ಹಿರಿಯ ನ್ಯಾಯಾಧೀಶರ ಅನುಮತಿ ಮೇರೆಗೆ ಮನೆ ಬೀಗ ಹೊಡೆದು ಶೋಧ ಮಾಡಿ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಗಾಂಜಾ ಸಂಗ್ರಹಿಸಿದ ವ್ಯಕ್ತಿಯ ಶೋಧಕಾರ್ಯ ನಡೆದಿದೆ.
ನಗರ ಸಭೆ ಅಧಿಕಾರಿಗಳಾದ ಲಿಂಗರಾಜು ವಿಶ್ವನಾಥ್ ಇವರ ಸಮಕ್ಷಮದಲ್ಲಿ ದಾಳಿ ಮಾಡಲಾಗಿದೆ. ದಾಳಿಯ ವೇಳೆ ಅಬಕಾರಿ ಪಿಎಸ್ ಐ ವಿ.ವೀರಣ್ಣ, ಮುಖ್ಯಪೇದೆ ರಮೇಶ್ ನಾಯ್ಕ್, ಬಸವರಾಜ್,ಅಬಕಾರಿ ಪೇದೆಗಳಾದ ನಾಗರಾಜು ಸೋಮಶೇಖರ್ ನಾಗರಾಜ್ ತೋಳಮಟ್ಟಿ, ಅಬಕಾರಿ ಸಿಬ್ಬಂದಿಗಳು ಇದ್ದರು ಎಂದು ತಿಳಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030