ತಾರಕಕ್ಕೇರಿದ ಚನ್ನಗಿರಿ ತುಮ್ಕೋಸ್ ಎಲೆಕ್ಷನ್, ಅಪಪ್ರಚಾರ ಬಿಡಿ, ಅಭಿವೃದ್ಧಿ ಹೇಳಿ ಮತಯಾಚಿಸಿ: ಹೆಚ್. ಎಸ್. ಶಿವಕುಮಾರ್ ಬಣ ಸವಾಲ್!!!
ಚನ್ನಗಿರಿ ತುಮ್ಕೋಸ್ ಚುನಾವಣೆ ರಂಗೇರುತ್ತಿದೆ. ಈ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದೆ. ಅಪಪ್ರಚಾರ ನಡೆಸಲಾಗುತ್ತಿದ ಎಂಬ ಆರೋಪವೂ ಕೇಳಿ ಬರುತ್ತಿದೆ. ಬಿಜೆಪಿ ಮುಖಂಡ ಹಾಗೂ ಚನ್ನಗಿರಿ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಶಿವಕುಮಾರ್ ಟೀಂ ಭರ್ಜರಿ ಪ್ರಚಾರ ನಡೆಸುತ್ತಿದೆ. ಮನೆ ಮನೆಗೆ ತೆರಳಿ, ಗ್ರಾಮ ಗ್ರಾಮಕ್ಕೆ ತೆರಳಿ ಮತಯಾಚನೆ ನಡೆಸುತ್ತಿದೆ.
ಏನಿದು ಅಪಪ್ರಚಾರ?
ಆತ್ಮೀಯ ತುಮ್ಕೋಸ್ ಸಹಕಾರ ಬಂಧುಗಳೇ ಕೆಲವು ವಿರೋಧಿಗಳು ಕೈಯಲ್ಲಿ ಏನು ಮಾಡೋಕೆ ಆಗದೆ ಈಗ ಅಪಪ್ರಚಾರ ಪ್ರಾರಂಭ ಮಾಡಿದ್ದಾರೆ. ಕೈಯಲ್ಲಿ ಆಗದವರ ಕೊನೆಯ ಅಸ್ತ್ರವೇ ಅಪಪ್ರಚಾರ. ದಯಮಾಡಿ ಈ ಅಪಪ್ರಚಾರಕ್ಕೆ ತಾವು ಕಿವಿ ಕೊಡಬೇಡಿ. ಈಗ ಎರಡು ಮೂರು ದಿನಗಳಿಂದ ವಾಟ್ಸಾಪ್ ಹಾಗೂ ಫೇಸ್ ಬುಕ್ ಮೂಲಕ ಹಲವಾರು ಅಪಪ್ರಚಾರ ಸಂದೇಶಗಳನ್ನು ಕಳುಹಿಸುತ್ತಿದ್ದು. ಈ ಅಪಪ್ರಚಾರದ ಒಂದು ಭಾಗವಾಗಿ ತುಮ್ಕೋಸ್ ಮಾಜಿ ಅಧ್ಯಕ್ಷ ಹೆಚ್. ಎಸ್. ಶಿವಕುಮಾರ್ ಅವರ ಅಳಿಯ ಪೃಥ್ವಿ ಅವರ ಒಡೆತನದ ಶ್ರೀ ಚನ್ನಗಿರಿ ಬೆಟಲ್ ನೆಟ್ಸ್ ಇವರಿಂದ ತುಮ್ಕೋಸಿಗೆ ಕೋಟಿಗಟ್ಟಲೆ ಹಣ ಬರಬೇಕಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಹಾಲಿ ಅಧ್ಯಕ್ಷ ಆರ್. ಎಂ. ರವಿಕುಮಾರ್ ಅವರ ಬಳಗಕ್ಕೆ ತುಮ್ಕೋಸ್ ಹಾಗೂ ಹೆಚ್. ಎಸ್. ಶಿವಕುಮಾರ್ ಅಭಿಮಾನಿಗಳಿಂದ ಮನವಿ. ಹಾಲಿ ಅಧ್ಯಕ್ಷ ರವಿಕುಮಾರ್ ಅವರೇ, ಈ ಅಪಪ್ರಚಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನಾವು ತುಮ್ಕೋಸ್ ನಿಂದಲೇ ಪಡೆದುಕೊಂಡು ಈ ಮೂಲಕ ನಿಮಗೆ ಸಲ್ಲಿಸುತ್ತಿದ್ದೇವೆ.
ಅಧ್ಯಕ್ಷ ರವಿಕುಮಾರ್ ಅವರೇ ದಯಮಾಡಿ ನಿಮ್ಮ ಬಳಗಕ್ಕೆ ಹೇಳಿ. ನೀವು ಮಾಡಿರುವ ನಿಮ್ಮ ಅಭಿವೃದ್ಧಿ ಕೆಲಸಗಳು ಏನಾದರೂ ಇದ್ದರೆ ಅಂತಹ ಅಭಿವೃದ್ಧಿಗಳ ಇಟ್ಟುಕೊಂಡು ಈ ಚುನಾವಣೆಯನ್ನು ಎದುರಿಸಿ. ಇಂತಹ ಪ್ರಚಾರವನ್ನು ಹಾಗೂ ಸುಳ್ಳು ಸುದ್ದಿಗಳನ್ನು ಚೆನ್ನಗಿರಿ ತಾಲೂಕಿನ ಜನತೆ ಹಾಗೂ ಸಹಕಾರಿ ಬಂಧುಗಳು ಎಂದೂ ಒಪ್ಪಿಕೊಳ್ಳುವುದಿಲ್ಲ. ನೇರವಾಗಿ ಚುನಾವಣೆಯನ್ನು ಎದುರಿಸಲು ಆಗದೆ ನೀವು ಮಾಜಿ ಶಾಸಕರು ಹಾಗೂ ಅವರ ಮಗನ ಬೆಂಬಲದೊಂದಿಗೆ ಚುನಾವಣೆಯನ್ನು ಎದುರಿಸುತ್ತಿರುವುದು ನಿಮ್ಮ ದೌರ್ಭಾಗ್ಯ.
ಅವರು ಆಡಿಸುತ್ತಿರುವ ಕೈ ಗೊಂಬೆ ನೀವು. ನಿಮ್ಮ ಹಾಗೂ ನಿಮ್ಮ ಸಹಚರರ ನಡವಳಿಕೆ ತುಮ್ಕೋಸಿಗೆ ಅವಮಾನ ತರುವಂತೆ ಕಾಣುತ್ತಿದೆ. ನಿಮ್ಮಂತ ಅಸಮರ್ಥ ಅಧ್ಯಕ್ಷರನ್ನು ಕಂಡಂತಹ ನಮ್ಮ ತುಮ್ಕೋಸಿನ ಸಹಕಾರ ಬಂಧುಗಳ ದೌರ್ಭಾಗ್ಯ. ದಯವಿಟ್ಟು ಇಂತಹ ಅಪಪ್ರಚಾರ ಮಾಡುವುದನ್ನು ನಿಮ್ಮ ಸಹಚರರಿಗೆ ಹೇಳಿ ನಿಲ್ಲಿಸಿ. ಇಲ್ಲವಾದರೆ ಚೆನ್ನಗಿರಿಯ ತುಮ್ಕೋಸ್ ಸಹಕಾರ ಬಂಧುಗಳು ಈ ಬರುವ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತುಮ್ಕೋಸ್ ಅಭಿಮಾನಿಗಳು ಹಾಗೂ ಹೆಚ್. ಎಸ್. ಶಿವಕುಮಾರ್ ಬಳಗವು ಎಚ್ಚರಿಕೆ ನೀಡಿದೆ…
ವರದಿ, ತಿಮ್ಮೆಶ್ ಚನ್ನಗಿರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030