ರಾಜ್ಯದಲ್ಲಿ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳ ಮುಂದುವರಿದ ಹೋರಾಟ
ಚನ್ನಗಿರಿ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ 11-11-2024 ರಂದು ಸ್ವತಂತ್ರ ಉದ್ಯಾನವನ ಬೆಂಗಳೂರಿನಲ್ಲಿ ಸಂಜೀವಿನಿ ಒಕ್ಕೂಟದ ರಾಜ್ಯ ಎಲ್ಲಾ ಸಿಬ್ಬಂದಿಗಳು ಧರಣಿ ನಡೆಸುತ್ತಿದ್ದರು.ಧರಣಿನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆಯ ಅಪರ ಉಪನಿರ್ದೇಶಕರು ಅರ್ಜುನ್ ಒಡೆಯರ್ ಅವರು ಸ್ಥಳಕ್ಕೆ ಬಂದು ಮನವಿಯನ್ನ ಸ್ವೀಕರಿಸಿ
ದಿನಾಂಕ 25 ರ ನಂತರ ಮಾನ್ಯ ಸಚಿವರ ಜೊತೆ ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಮಯ ನಿಗದಿಪಡಿಸುವುದಾಗಿ ತಿಳಿಸಿದ ನಂತರ ನಮ್ಮ ಹೋರಾಟವನ್ನು ಬೆಂಗಳೂರಿನಲ್ಲಿ ಹಿಂಪಡೆದು ಸ್ಥಳೀಯವಾಗಿ ನಮ್ಮ ಹೋರಾಟವನ್ನು ಮುಂದುವರೆಸಿದ್ದೇವೆ .
ಅವರು ನಿಗದಿ ಪಡಿಸಿದ ದಿನಾಂಕದಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹಾಗೂ ಸಖಿಯರ ಒಕ್ಕೂಟದ ರಾಜ್ಯಾಧ್ಯಕ್ಷರಾದ ರುದ್ರಮ್ಮನವರು 25 ನೇ ತಾರೀಕು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾಮಹದೇವನ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಸಮಯದಲ್ಲಿ ಮಾನ್ಯ ಸಚಿವರು ಪೂರ್ವ ನಿಯೋಜನೆಯಂತೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಅವರ ಪ್ರವಾಸದ ನಂತರ ಸಚಿವ ರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು ಹಾಗೆಯೇ ಮಾನ್ಯ ಸಚಿವರ ಆಪ್ತ ಸಹಾಯಕರು ಸಚಿವರ ಪ್ರವಾಸ ಮುಗಿದ ನಂತರ ಸಮಯ ನಿಗದಿಪಡಿಸಿ ತಿಳಿಸುವುದಾಗಿ ಹೇಳಿದ್ದಾರೆ. ಆದರೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದ್ದು ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಗಮನ ಕೊಡದೇ ನಿರ್ಲಕ್ಷಿಸುತ್ತಿದೆ ಹಾಗಾಗಿ ನಮ್ಮ ಹೋರಾಟವನ್ನು ಸಭೆಯ ದಿನಾಂಕ ನಿಗದಿಪಡಿಸುವ ತನಕ ನಾವು ಮುಂದುವರಿಸುತ್ತೇವೆ.
ಕೂಡಲೇ ಸಮಯ ನಿಗದಿ ಆಗದಿದ್ದಲ್ಲಿ
ಡಿಸೆಂಬರ್ ಮೊದಲ ವಾರದಲ್ಲಿ ಸಭೆ ಕರೆದು ಮುಂದಿನ ಹೋರಾಟವನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ತೀವ್ರವಾದ ಹೋರಾಟದ ರೂಪರೇಷೆಯ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ರುದ್ರಮ್ಮ
ತಿಳಿಸಿದರು…
ವರದಿ : ಚಂದ್ರಕಲಾ ಚನ್ನಗಿರಿ ಹೋಬಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030