ಗುಡೇಕೋಟೆಯಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 8.2 .2021. ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಗುಡೆಕೋಟೆ*
*ತಾಲೂಕಿನ ಗುಡೇಕೋಟೆಯ ಯೋಜನೆ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಜ್ಞಾನ ವಿಕಾಸ ಯೋಜನೆ ಅಡಿಯಲ್ಲಿ ಮಹಿಳಾ ವಿಚಾರಗೋಷ್ಠಿ.–*
*ಮಹಿಳೆಯರು ಸ್ವಾವಲಂಬಿಗಳಾಗಲು ಶಿಕ್ಷಣ ಅತಿಮುಖ್ಯವಾಗಿ ಬೇಕು:–* ಪ್ರೌಢ ಶಾಲೆಯ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಲಕ್ಷ್ಮೀದೇವಿ ನಾಗರಾಜ್ ಕರ್ಣಂ *ದಿನಾಂಕ 3.2.2021*
ಗುಡೇಕೋಟೆ ಗ್ರಾಮದ ಯೋಜನೆ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವಿಚಾರಗೋಷ್ಠಿಯ ಉದ್ಘಾಟನಾ ಕಾರ್ಯಕ್ರಮವನ್ನು ಚಂದ್ರಶೇಖರ ಪುರದ ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಲಕ್ಷ್ಮಿ ದೇವಿ ನಾಗರಾಜ್ ಕರ್ಣಂ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು ನಂತರ ಅವರು ಮಾತನಾಡಿ ಸಮಾಜದ ಹಾಗೂ ಕುಟುಂಬದ ಎಲ್ಲಾ ಸಮಸ್ಯೆಯನ್ನು ಪ್ರತಿಯೊಂದು ಜವಾಬ್ದಾರಿಯ ಕೆಲಸವನ್ನು ನಿಭಾಯಿಸಲು ಹೆಣ್ಣಿಗೆ ಶಿಕ್ಷಣ ಅತಿಮುಖ್ಯ. ಕಾರಣ ಮಹಿಳೆಯರಿಗೆ ಶೈಕ್ಷಣಿಕ ಪ್ರಜ್ಞೆ ಅಗತ್ಯವಾಗಿ ಬೇಕಾಗಿದೆ ಸಮಾಜದಲ್ಲಿ ಮಹಿಳೆಯರು ಮೌಢ್ಯದಿಂದ ಹೊರಬರಲು ಶಿಕ್ಷಣದ ಅವಶ್ಯಕತೆ ಬೇಕಾಗಿದೆ ಮೌಲ್ಯದಿಂದ ಬದಲಾವಣೆಗಳಾದಾಗ ಮಾತ್ರ ಮಹಿಳೆಯು ಕುಟುಂಬವನ್ನು ಸುಖಸಂಸಾರದ ದೋಣಿಯಲ್ಲಿ ಸಾಗಿಸುವಳು . ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಗತಿಪರ ರೈತರು ಹಾಗೂ ಜಿಲ್ಲಾ ಕೃಷಿ ಪ್ರಶಸ್ತಿ ವಿಜೇತರು ಆದ ಪೂಜಾರಹಳ್ಳಿ ತಿಪ್ಪೇಸ್ವಾಮಿಯವರು ಮಾತನಾಡಿ ಮಹಿಳೆಯರು ತಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಆರೋಗ್ಯ ಅತ್ಯವಶ್ಯಕ ಎಂದು ಹೇಳಿ ಆರೋಗ್ಯದ ಬಗ್ಗೆ ಕೆಲವು ಸಲಹೆಗಳನ್ನು ಹಾಗೂ ವಿಚಾರಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಗುಡಿಕೋಟೆ ವಲಯದ ಮೇಲ್ವಿಚಾರಕರಾದ ಕೆ ಕರಿಯಪ್ಪ ಗಂಗಮ್ಮ ರಂಗಸ್ವಾಮಿ ನಾಗರ ಹುಣಸಿ ದುರುಗೇಶ್. ಕವಿತಾ ಮಂಜುಳಾ ಮೇಡಂ ಧರ್ಮಸ್ಥಳ ಸಂಸ್ಥೆಯ ಪದಾಧಿಕಾರಿಗಳು ಸಾರ್ವಜನಿಕರು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *