ಮೂರನೇ ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಜಯಶಾಲಿಯಾದ ಕೂಡ್ಲಿಗಿ ಪಟ್ಟಣದ ವಿದ್ಯಾರ್ಥಿಗಳು
ವಿಜಯನಗರಜಿಲ್ಲೆ ಹೊಸಪೇಟೆಯ ಬಳ್ಳಾರಿ ರಸ್ತೆಯ ಪುಣ್ಯನಂದಪುರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಮೂರನೇ ರಾಜ್ಯ ಮಟ್ಟದ ಟ್ರೇಡಿಷನಲ್ ಶೋಟೋಕಾನ್ ಕರಾಟೆ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದು ಕೂಡ್ಲಿಗಿ ಪಟ್ಟಣದ 12 ವಿದ್ಯರ್ಥಿಗಳು ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾರೆ ವಿದ್ಯಾರ್ಥಿಗಳಾದ
ದಾತ್ರಿಪ್ರಿಯಾ ,ರುಶಾಂಕ್, ಶ್ರೀನಿವಾಸ , ಅರಾನ್, ಆರಿಜ್, ಚಿರಾಗ್ ,ಲುಕ್ಮನ್ ,ಯಶಸ್, ದಿವ್ಯ, ಮೋಕ್ಷ, ಸುಪಿಯನ್ ಕರಾಟೆ ತರಬೇತಿದಾರರಾದ ಬಿ. ಯಮುನೂರಪ್ಪ ಬ್ಲಾಕ್ ಬೇಲ್ಟ್ ಇವರಿಗೆ ಕೂಡ್ಲಿಗಿ ಪಟ್ಟಣದ ನಿವಾಸಿಗಳು , ಸಂಸ್ಥಾಪಕರು,ಅಧ್ಯಕ್ಷರು,ನಿರ್ದೇಶಕರು,ತರಬೇತುದಾರರು,ಆಯೋಜಕರು,ಸದಸ್ಯರು ಅಭಿನಂದನೆ ಸಲ್ಲಿಸಿದರು.
ವರದಿ:- ಶಿವಕುಮಾರ್ ಗುಡೇಕೋಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030