ಸ. ಕಿ. ಪ್ರಾ ಶಾಲೆ ಅಂಬೇಡ್ಕರ್ ನಗರ ಚಂದ್ರಶೇಖರಪುರ ದಲ್ಲಿ 02//10/2024ರಂದು ಗಾಂಧಿ ಜಯಂತಿ ಎಲ್ಲಾ ಮಕ್ಕಳ ಜೊತೆ ಆಚರಿಸಲಾಯಿತು ಸಮಾರಂಭದ ಅಧ್ಯಕ್ಷೇ ವಹಿಸಿದ SDMC ಅಧ್ಯಕ್ಷರಾದ KA ಶಿವಶಂಕರ ಮತ್ತು ಸರ್ವ ಸದಸ್ಯರು ಹಾಗೂ ಮುಖ್ಯಗುರುಗಳಾದ ಪಿ. ಉಮೇಶ ಮಾತನಾಡಿ
ಗಾಂಧಿ ಜಯಂತಿ – ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ. ಪ್ರತಿವರ್ಷ ಅಕ್ಟೋಬರ್ ೦೨ ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ. ಗಾಂಧೀಜಿಯವರ
ಮುಖ್ಯ ತತ್ವಗಳು ಸತ್ಯ ಮತ್ತು ಅಹಿಂಸೆ. ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅಸ್ತಿತ್ವದಲ್ಲಿರುವ ತತ್ವ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಅನೇಕ ಪುಸ್ತಕಗಳನ್ನೂ ಬರೆದಿದ್ದರು . ಈ ಕಾರ್ಯಕ್ರಮದಲ್ಲಿ ಸಹಶೀಕ್ಷಕರಾದ ಶರಣಪ್ಪ ಬರಮಲಿಂಗಪ್ಪ ಜ್ಯೋತಿ ಶಾಲಾ ವಿದ್ಯಾರ್ಥಿಗಳು ಹಾಗೂ ಅಡಿಗೆ ಸಿಬ್ಬಂದಿ ವರ್ಗದವರು ಊರಿನ ಗಣ್ಯರು ಉಪಸ್ಥಿತರಿದ್ದರು…
ವರದಿ. ಶಿವಕುಮಾರ್, ಸಿ, ಎಸ್, ಪುರ, ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030