ಸನ್ಮಾನ್ಯ ಶ್ರೀ ಸಿ ಸಿ.ಪಾಟೀಲ ಅಭಿಮಾನಿ ಬಳಗದ ವತಿಯಿಂದ ಬಡವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್ನು ವಿತರಣೆ.
ಗದಗ: 24 ನರಗುಂದ ಮತಕ್ಷೇತ್ರದ ಬಳಗಾನೂರ ಗ್ರಾಮದಲ್ಲಿ ಸನ್ಮಾನ್ಯ ಶ್ರೀ ಸಿ ಸಿ.ಪಾಟೀಲ ಅಭಿಮಾನಿ ಬಳಗದ ವತಿಯಿಂದ ಅಭಿವ್ರದ್ದಿಯ ಹರಿಕಾರ.ಬಡವರ ಬಂಧು.ಶಿಕ್ಷಣ ಪ್ರೇಮಿ.ಜಿಲ್ಲೆ ಕಂಡ ಶ್ರೇಷ್ಟ ನಾಯಕರು ನರಗುಂದ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಸನ್ಮಾನ್ಯ ಶ್ರೀ ಸಿ ಸಿ.ಪಾಟೀಲರವರ 66ನೇ ಜನ್ಮ ದಿನದ ಪ್ರಯುಕ್ತ ಸರಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆ ಬಳಗಾನೂರ ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಪೆನ್ನು ವಿತರಣಾ ಸಮಾರಂಭ ನೆರವೇರಿತು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಗ್ರಾಮದ ಬಿಜೆಪಿ ಮುಖಂಡ ಶರಣಪ್ಪ ಚಟ್ರಿ ಮಾತನಾಡಿ ಸನ್ಮಾನ್ಯ ಸಿ ಸಿ.ಪಾಟೀಲ ಅವರು ಬಡವರ ದೀನ ದಲಿತರ ಪರವಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.ಅಷ್ಟೇ ಅಲ್ಲದೇ ಲೋಕೋಪಯೋಗಿ ಇಲಾಕೆ ಸಚಿವರಿದ್ದಾಗ ನರಗುಂದ ಮತಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಗೊಳಿಸುವದರ ಜೊತೆಗೆ ಸಾಕಷ್ಟು ಶಾಲೆ ವಸತಿ ನಿಲಯಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ತಾ.ಪಂ.ಸದಸ್ಯರಾದ ಶ್ರೀ ಶೇಖಣ್ಣ ಎಸ್.ಅಗಸಿಮನಿ ಮಾತನಾಡಿ ಸನ್ಮಾನ್ಯ ಸಿ ಸಿ.ಪಾಟೀಲ ಸಾಹೇಬರು ದೂರದ್ರುಷ್ಟಿಉಳ್ಳ ನಾಯಕರು ಅಧಿಕಾರವಿರಲಿ ಬಿಡಲಿ ಸದಾಕಾಲ ಕ್ಷೇತ್ರದ ಅಭಿವೃದ್ಧಿಗಾಗಿ ಚಿಂತನೆ ನಡೆಸಿರುವ ನಾಯಕರು.ಸಿಕ್ಕಂತ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವದರ ಜೊತೆಗೆ ಇತರೆ ರಾಜ್ಯಕೀಯ ನಾಯಕರಿಗೆ ಮಾದರೀಯಾಗಿದ್ದಾರೆ.ಅವರು ಶಿಕ್ಷಣ ಪ್ರೇಮಿಗಳಾಗಿದ್ದು ತಾವೇ ಲಯನ್ಸ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿರುವದಲ್ಲದೇ ಬಡ ಮಕ್ಕಳ ಬಗ್ಗೆ ಅಪಾರವಾದ ಖಾಳಜಿಯುಳ್ಳ ಸಹ್ರದಯವನ್ನು ಹೊಂದಿರುವವರು.ಅವರ ಹುಟ್ಟು ಹಬ್ಬದ ಶುಭ ದಿನದಂದು ಸನ್ಮಾನ್ಯ ಶ್ರೀ ಸಿ ಸಿ.ಪಾಟೀಲ ಅಭಿಮಾನಿ ಬಳಗ ಹಮ್ಮಿಕೊಂಡ ಬಡವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಪೆನ್ನು ವಿತರಿಸುತ್ತಿರುವದು ಉತ್ತಮವಾದ ಕಾರ್ಯವೆಂದು ಹೇಳಿದರು.
ಬಿಜೆಪಿ ಯುವ ಮುಖಂಡ ಕುಮಾರ ಮಳ್ಳಿಮಠ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವಾಗಿ ಮಾರ್ಪಟ್ಟಿವೆ.ಸರ್ಕಾರ ಸರಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನ ಒದಗಿಸುತ್ತಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಲು ಶಿಕ್ಷಕರು ಪ್ರೋತ್ಸಾಹಿಸಬೇಕೆಂದು ಹೇಳಿದರು.ಅಲ್ಲದೇ ಸನ್ಮಾನ್ಯ ಸಿ ಸಿ.ಪಾಟೀಲ ಅಭಿಮಾನಿಗಳು ಕೊಡುತ್ತಿರುವ ನೋಟ್‌ಬುಕ್ ತಮ್ಮ ಜೀವನ ರೂಪಿಸಿಕೊಳ್ಳುವ ಮೈಲುಗಲ್ಲುಗಳಾಗಿ ಪರಿವರ್ತನೆಯಾಗಲಿ ಎಂದು ಹೇಳಿದರು.
ಸಮಾರಂಭವನ್ನು ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ವಾಯ್.ಚಲವಾದಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ರಷಿ ಪತ್ತಿನ ಸಹಕಸರಿ ಸಂಘದ ಅಧ್ಯಕ್ಷರಾದ ಪ್ರಭುರಾಜ ಗೂಳರಡ್ಡಿ. ಶ್ರೀ ಪ್ರಭುರಾಜ ಗೂಳರಡ್ಡಿ. ಸಮಾರಂಭದ ಅಧ್ಯಕ್ಷತೆಯನ್ನು .ಅಧ್ಯಕ್ಷತೆಯನ್ನು ಶ್ರೀ ಬಸವರಾಜ ಚಲವಾದಿ. ಅಧ್ಯಕ್ಷರು ಎಸ್‌ಡಿಎಂಸಿ ಬಳಗಾನೂರ.ಅತಿಥಿಗಳಾಗಿ ಶ್ರೀ.ಆರ್.ಎನ್.ಪಾಟೀಲ ಸದಸ್ಯರು ಗ್ರಾ.ಪಂ..ಬಳಗಾನೂರ ಶ್ರೀ ಹನಮಪ್ಪ ಕಮಲದಿನ್ನಿ ಬಿಜೆಪಿ ಮುಖಂಡರಾದ ಶ್ರೀ ಶರಣಪ್ಪ ಚಟ್ರಿ.ಬಿಜೆಪಿ ಯುವ ಮುಖಂಡರಾದ ಕುಮಾರ ಮಳ್ಳಿಮಠ.ಹಿರಿಯರಾದ ಹನುಮರಡ್ಡೆಪ್ಪ ಕರಡ್ಡಿ.ಯುವ ಮುಖಂಡರಾದ ಈಶ್ವರಗೌಡ್ರ ಕಾಶೀಗೌಡ್ರ ಶಶಿಧರ ಗೂಳರಡಗ್ಡಿ. ಮಕ್ತುಮಹುಸೇನ ಮುಲ್ಲಾ.ಮಂಜುನಾಥ ಆರಬಳ್ಳಿನ.ಪ್ರದೀಪ ಗಾಣಿಗೇರ. ಬಸವರಾಜ.ಚವಡಿ.ಶರಣಪ್ಪ ಬಿಂಗಿ.ಬಸವರಾಜ ಕರಡ್ಡಿ.ಪ್ರಶಾಂತ ಶಟವಾಜಿ.ತಿಪ್ಪಣ್ಣ ಕರಿಭರಮಣ್ಣವರ.ಮಂಜುನಾಥ ದೊಡ್ಡಮನಿ.ಹನಮಂತ ನಡುವಿನಮನಿ.ಸುನೀಲ ಬೇವಿನಮರದ.ಶಾಲಾ ಮುಖ್ಯೋಪಾಧ್ಯಾಯರು.ಗುರುವ್ರಂದ ಮುದ್ದು ಮಕ್ಕಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030