ಜಕ್ಕಲಿ ಗ್ರಾಮ ಪಂಚಾಯಿತಿ ಅವಿಶ್ವಾಸದಲ್ಲಿ ಮತ್ತೆ ಗಂಗಮ್ಮನಿಗೆ ಒಲಿದ ಅಧ್ಯಕ್ಷ ಸ್ಥಾನ ಅಧಿಕಾರದ ಚುಕ್ಕಾನೆ ಹಿಡಿದ ಬಿಜೆಪಿ…!!!

Listen to this article

ಜಕ್ಕಲಿ ಗ್ರಾಮ ಪಂಚಾಯಿತಿ ಅವಿಶ್ವಾಸದಲ್ಲಿ ಮತ್ತೆ ಗಂಗಮ್ಮನಿಗೆ ಒಲಿದ ಅಧ್ಯಕ್ಷ ಸ್ಥಾನ ಅಧಿಕಾರದ ಚುಕ್ಕಾನೆ ಹಿಡಿದ ಬಿಜೆಪಿ

ಗದಗ ಜಿಲ್ಲೆ ರೋಣ ತಾಲೂಕು ಜಕ್ಕಲಿ ಗ್ರಾಮ ಪಂಚಾಯಿತಿ ಒಟ್ಟು 13 ಜನ ಸದಸ್ಯರಿದ್ದು ಈ ಹಿಂದೆ ಸುಮಾರು ಒಂದು ವರ್ಷದ ಹಿಂದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಚುನಾವಣೆ ಮಾಡಲಾಯಿತ್ತು ಅವಿರೋಧ ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನ ಗಂಗವ್ವ ಜಂಗಣ್ಣವರ ಬಿಜೆಪಿ ಅಭ್ಯರ್ಥಿ ಬಿಜೆಪಿ ತೆಕ್ಕೆಗೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಯಲ್ಲವ್ವ ನೀಲಪ್ಪ ಮಾದರ ಒಲಿದಿತ್ತು ಅವಿರೋದದಲ್ಲಿ ವಿಪಲವಾದ ಕಾಂಗ್ರೆಸ್ ಮತ್ತೆ ನವಂಬರ್ 29 ಶುಕ್ರವಾರ ಅವಿಶ್ವಾಸ ಗೊತ್ತುವಳಿ ಮಾಡಲು ಮುಂದಾಗಿತ್ತು ಅವಿಶ್ವಾಸದ ಗೊತ್ತುವಳಿಯಲ್ಲಿ ಕಾಂಗ್ರೆಸ್ ಕೊರಮ ಬರ್ತಿಮಾಡಲು ವಿಪಲವಾಗಿದ್ದಕ್ಕೆ ಮತ್ತೆ ಗಂಗವ್ವ ದ್ಯಾಮಪ್ಪ ಜಂಗಣ್ಣವರಿಗೆ ವಲಿದ ಅಧ್ಯಕ್ಷೆ ಪಟ್ಟ ಅಧಿಕಾರದ ಚುಕ್ಕಾನೇ ಹಿಡಿದ ಬಿಜೆಪಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಯಲ್ಲವ್ವ ಮಾದರ ಎಂದು ಘೋಷಣೆ ಮತ್ತೆ

ಅವಿಶ್ವಾಸ ಸಭೆ ಸಮಯದ ಬಳಿಕ ಮಾತನಾಡಿದ ಚುನಾವಣೆ ಅಧಿಕಾರಿ ಗಂಗಪ್ಪ ಎಂ ಮಾತನಾಡಿದ ಅವರು ಒಟ್ಟು 13 ಜನ ಸದಸ್ಯರಿದ್ದು 11 ಗಂಟೆಗೆ ಸಭೆ ಕರೆಯಲಾಗಿತ್ತು ಸಭೆಯಲ್ಲಿ ಕೊರಮ ಭರ್ತಿಯಾಗಿದ್ದರೆ ಅವಿಶ್ವಾಸ ಚುನಾವಣೆ ಮುಂದೆಯುತ್ತಿತ್ತು ಕೊರಮ ಬರ್ತಿಯಾಗದ ಕಾರಣ 11 ರಿಂದ 12.30 ರ ವರೆಗೆ ಅವಿಶ್ವಾಸ ಸಮಯ ನಿಗದಿಪಡಿಸಲಾಗಿತ್ತು 12.30 ಗಂಟೆ ಕಳೆದರು ಕೂಡ ಕೊರಮ ಬರ್ತಿಯಾಗದ ಕಾರಣ ಈ ಹಿಂದೆ ಇರುವ ಅಧ್ಯಕ್ಷೆ ಉಪಾಧ್ಯಕ್ಷೆ ಸ್ಥಾನವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

ಬಳಿಕ ಗ್ರಾಮದ ಬಿಜೆಪಿ ಪಕ್ಷದ ಕಾರ್ಯಕರ್ತರು ಗ್ರಾಮದ ಪಂಚಾಯಿತಿ ಎದುರುಗಡೆ ಪಟಾಕಿ ಸಿಡಿಸಿ ಸಿಹಿ ಹಂಚುವದರ ಜೊತೆಗೆ ಗೆಲುವಿನ ಸಂಭ್ರಮ ಆಚರಿಸಿದರು

ಗೆಲುವಿನ ಸಂಭ್ರಮದಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ ಇವತ್ತಿನ ದಿನ ಗ್ರಾಮ ಪಂಚಾಯಿತಿ ಅವಿಶ್ವಾಸ ಗೊತ್ತುವಳಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಗಂಗವ್ವ ಜಂಗಣ್ಣವರ ಅವಿಶ್ವಾಸ ಗೊತ್ತುವಳಿಯಲ್ಲಿ ಮತ್ತೆ ಗೆಲುವನ್ನು ಸಾಧಿಸಿದ್ದಾರೆ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ನಾಲ್ಕು ಬಾರಿ ಅವಿಶ್ವಾಸ ಗೊತ್ತುವಳಿ ಆಗಿದೆ ಈ ಅವಿಶ್ವಾಸ ಗೊತ್ತುವಳಿಯಿಂದ ಗ್ರಾಮದಲ್ಲಿ ಅಭಿವೃದ್ಧಿ ಕುಂಟಿತ ಆಗುತ್ತೆ ಆಗಾಗಿ ಪದೆ ಪದೆ ಅವಿಶ್ವಾಸ ಮಾಡುವದರಿಂದ ಗ್ರಾಮಕು ಕೂಡ ಕೆಟ್ಟ ಹೆಸರು ಬರುವ ಸಾಧ್ಯತೆ ಆಗಾಗಿ ಮುಂಬರುವ ದಿನಗಳಲ್ಲಾದರೂ ವಿರೋಧ ಪಕ್ಷದವರು ಮತ್ತು ನಮ್ಮ ಪಕ್ಷದವರು ಒಗ್ಗೂಡಿಸಿಕೊಂಡು ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು ವರಿತು ಪದೆ ಪದೆ ಅವಿಶ್ವಾಸ ಗೊತ್ತುವಳಿ ಮಾಡುವದರಿಂದ ನಮ್ಮ ಗ್ರಾಮದ ಅಭಿವೃದ್ಧಿ ಸಾಧ್ಯವಿಲ್ಲ ಇವತ್ತಿನ ದಿನ ಗದಗ ಜಿಲ್ಲಾ ಪಂಚಾಯಿತಿವರೆಗೆ ಜಕ್ಕಲಿ ಗ್ರಾಮ ಪಂಚಾಯಿತಿ ಪದೆ ಪದೆ ಅವಿಶ್ವಾಸ ಗೊತ್ತುವಳಿಯಿಂದ ಕೆಟ್ಟ ಹೆಸರು ಪಡೆದು ಕೊಂಡಿದೆ ಆಗಾಗಿ ಇಂತ ಹೆಸರು ಗ್ರಾಮಕ್ಕೆ ಸೋಬೆ ತರುವಂತದ್ದಲ್ಲ ಬರುವಂತ ದಿನಮಾನಗಳಲ್ಲಿ ಆವಿಶ್ವಾಸವನ್ನು ಮರೆತು ಎರಡು ಪಕ್ಷದವರು ಗ್ರಾಮವನ್ನು ಅಭಿವೃದ್ಧಿ ಪಡೆಸುವ ಕಾರ್ಯನಡೆಯಲ್ಲಿ ಎಂದು ಹೇಳಿದರು

ತದನಂತರ ಮಾತನಾಡಿದ ಭಾರತೀಯ ಜನತಾ ಪಕ್ಷದ ಮುಖಂಡರು ಶಿವನಾಗಪ್ಪ ದೊಡ್ಡಮೇಟಿ ಗದಗ ಜಿಲ್ಲೆಯಲ್ಲಿ ಅವಿಶ್ವಾಸ ಮಂಡನೆ ಮಾಡುವ ಪಂಚಾಯಿತಿ ಯಾವುದಾದ್ರೂ ಇದ್ರೆ ಅದು ನಮ್ಮ ಜಕ್ಕಲಿ ಗ್ರಾಮ ಪಂಚಾಯಿತಿ ಎಂದು ಪಟ್ಟ ಪಡೆದುಕೊಂಡಿದೆ ಆಗಾಗಿ ರಾಜಕೀಯ ಬರೇ ಆಡಳಿತದ ಗದ್ದುಗೆ ಏರುವುದಲ್ಲ ಪಟ್ಟಕ್ಕೆ ಬಡೆದಾಡುವ ಬದಲು ಗ್ರಾಮವನ್ನು ಅಭಿವೃದ್ಧಿ ಪಡೆಸುವ ಕಾರ್ಯ ಸರ್ವ ಸದಸ್ಯರು ಸೇರಿಕೊಂಡು ಗ್ರಾಮವನ್ನು ಅಭಿವೃದ್ಧಿ ಪಡೆಸಿದರೆ ಅದೇ ಒಂದು ದೊಡ್ಡ ಗೆಲವು ಈ ಮೊದಲು ಇರುವ ಮನಸ್ತಾಪಗಳನ್ನು ಮರೆತು ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಮಾತನಾಡಿದರು

ಇದೆ ಸಂದರ್ಭದಲ್ಲಿ ಚನ್ನಬಸಪ್ಪ ಸೂಡಿ. ಶಿವಪ್ಪ ಕೆಳಗೇಡಿ. ಶೇಖಣ್ಣ ಮಾರನಬಸರಿ. ಶಿವನಗೌಡ ಪಾಟೀಲ್.ಮಂಜುನಾಥ್ ಪಲ್ಲೆದ್. ಮಲ್ಲಪ್ಪ ಪಲ್ಲೇದ್ . ನಾಗರಾಜ್ ಕಡಗದ. ಮಾಂತೇಶ್ ಇಟಗಿ. ಮಂಜು ವಾಲಿ. ಶರಣಪ್ಪ ಕೋರಿ. ಬಸವರಾಜ್ ರಂಗಣ್ಣವರ.ಇನ್ನು ಅನೇಕ ಉಪಸ್ಥಿತರಿದ್ದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend