ಗ್ರಾಮ ಪಂಚಾಯತಿಯ ಗಣಕಯಂತ್ರ ನಿರ್ವಾಹಕರ ಕಾರ್ಯ ಶ್ಲಾಘನೀಯ: ಪ್ರಕಾಶ್ ವಿ…!!!

Listen to this article

ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ದಿನಾಚರಣೆ

ಗ್ರಾಮ ಪಂಚಾಯತಿಯ ಗಣಕಯಂತ್ರ ನಿರ್ವಾಹಕರ ಕಾರ್ಯ ಶ್ಲಾಘನೀಯ: ಪ್ರಕಾಶ್ ವಿ

ಕೊಪ್ಪಳ : ಪ್ರಸಕ್ತದಲ್ಲಿ ಎಲ್ಲಾ ಸೇವೆಗಳು ಗಣಕಿಕೃತವಾಗಿರುವದರಿಂದ ಗ್ರಾಮ ಪಂಚಾಯತಿ ಹಂತದಲ್ಲಿ ಗ್ರಾಮ ಪಂಚಾಯತಿಯ ಆಪರೇಟರ್ ಪಾತ್ರ ಶ್ಲಾಘನೀಯವಾಗಿದೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಪ್ರಕಾಶ್ ವಿ ಹೇಳಿದರು.
ಅವರು ಗುರುವಾರ ಕೊಪ್ಪಳ ತಾಲೂಕ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಂಪ್ಯೂಟರ್ ಪಿತಾಮಹರೆಂದೆ ಖ್ಯಾತರಾದ ಚಾರ್ಲ್ಸ್ ಬ್ಯಾಬೇಜ್ ಕಂಪ್ಯೂಟರ್ ಕಂಡು ಹಿಡಿದ ಪರಿಣಾಮವಾಗಿ ಎಲ್ಲಾ ಇಲಾಖೆಗಳಲ್ಲಿ ಮಾಹಿತಿಯು ಗಣಕೀಕರಣವಾಗಿರುವರಿಂದ ಇಲಾಖೆಯ ಸೇವೆಗಳ ಮಾಹಿತಿ, ಜಗತ್ತಿನ ಬಗ್ಗೆ ಮಾಹಿತಿಯನ್ನು ನಾವು ಒಂದು ಕ್ಷಣದಲ್ಲಿ ಪಡೆಯಬಹುದಾಗಿದೆ. ಗ್ರಾಮ ಪಂಚಾಯತಿಯಲ್ಲಿ ಎಲ್ಲಾ ಸೇವೆಗಳು ಆನ್‌ಲೈನ್ ಇರುವದರಿಂದ ಗ್ರಾಮ ಪಂಚಾಯತಿಯಿಂದ ಸಾರ್ವಜನಿಕರಿಗೆ ಹಲವಾರು ಸೇವೆಗಳು ಸಕಾಲದಲ್ಲಿ ದೊರೆಯುತ್ತಿವೆ. ಈ ಮುಂಚೆ ಗ್ರಾಮ ಪಂಚಾಯತಿಯಲ್ಲಿ ಕೈ ಬರವಣಿಗೆಯ ರೂಪದಲ್ಲಿ ದಾಖಲಾತಿಗಳು ಲಭ್ಯವಿದ್ದವು. ಮಹಾತ್ಮಾ ಗಾಂಧಿ ನರೇಗಾ ಯೋಜನೆ ಜಾರಿಯಾದಾಗಿನಿಂದ ಪ್ರತಿ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಹುದ್ದೆ ಅವಶ್ಯವಿದ್ದ ಪ್ರಯುಕ್ತ ಈ ಹುದ್ದೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಸದಾಗಿ ಸೃಜಿಸಿತು. ಇದರ ಪರಿಣಾಮವಾಗಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಗಣಕಯಂತ್ರ ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲಾಯಿತು. ಗ್ರಾಮ ಪಂಚಾಯತಿಯಿಂದ ದೊರೆಯುವ ಎಲ್ಲಾ ಸೇವೆಗಳು ಸಕಾಲದಲ್ಲಿ ಎಲ್ಲರಿಗೂ ದೊರೆಯುವಂತಾಗಬೇಕಾದರೆ ನೀವುಗಳು ಸದಾ ಸಿದ್ದರಾಗಿರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ, ಚಾರ್ಲ್ಸ್ ಬ್ಯಾಬೇಜ್ ಅವರ ಪಾತ್ರ ಗಣನೀಯವಾಗಿರುತ್ತದೆ. ಗಣಕಯಂತ್ರ ನಿರ್ವಾಹಕರು ಪ್ರಸಕ್ತ ಕೆಲಸದಲ್ಲಿ ಹೆಚ್ಚು ಆಸಕ್ತಿವಹಿಸಿ ನಿರ್ವಹಿಸುತ್ತಿರುವರಿಂದ ಎಲ್ಲಾ ಯೋಜನೆಗಳು ತಾಲೂಕಿನಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ. ಇದೇ ರೀತಿಯಾಗಿ ನೀವು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಎಲ್ಲಾ ಯೋಜನೆಗಳಲ್ಲಿ ಕೊಪ್ಪಳ ತಾಲೂಕು ಹೆಚ್ಚು ಪ್ರಗತಿ ಸಾಧಿಸಲು ಕಾರ್ಯನಿರತರಾಗಬೇಕೆಂದು ಕರೆ ನೀಡಿದರು.
ಚಾರ್ಲ್ಸ್ ಬ್ಯಾಬೇಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ಮರಿಸಲಾಯಿತು. ನಂತರ ಕೇಕ್ ಕತ್ತರಿಸುವ ಮೂಲಕ ಕಂಪ್ಯೂಟರ್ ಆಪರೇಟರ್ ದಿನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ ಸಹಾಯಕ ನಿರ್ದೇಶಕ ಯಂಕಪ್ಪ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಸೇರಿದಂತೆ ಮತ್ತಿತರರಿದ್ದರು.
ಬಿಸರಳ್ಳಿ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ನಿಸಾರ ಅಹಮದ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ವಂದನಾರ್ಪಣೆಯನ್ನು ಗೊಂಡಬಾಳ ಗ್ರಾಮ ಪಂಚಾಯತಿಯ ಡಿಇಒ ಮಾರುತಿ ಹಣವಾಳ ನಿರ್ವಹಿಸಿದರು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಕಂಪ್ಯೂಟರ್ ಆಪರೇಟರ್ಗಳು, ಭಾಗವಹಿಸಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend