ಕೊಪ್ಪಳ ಗವಿಶ್ರೀ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ- ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ…!!!

Listen to this article

ಕೊಪ್ಪಳ ಗವಿಶ್ರೀ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ- ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ

ಕೊಪ್ಪಳ : ಜನವರಿಯಲ್ಲಿ ನಡೆಯಲಿರುವ ಗವಿಶ್ರೀ ಜಾತ್ರೆಯ ನಿಮಿತ್ಯ ಕೊಪ್ಪಳ ನಗರದಲ್ಲಿ ಗವಿಶ್ರೀ ಕ್ರೀಡಾ ಉತ್ಸವ-2025 ನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಅವರು ಮಂಗಳವಾರ ಗವಿಶ್ರೀ ಕ್ರೀಡಾ ಉತ್ಸವ-2025 ಕುರಿತು ಮಾಹಿತಿ ನೀಡಲು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಐತಿಹಾಸಿಕವಾಗಿ ಧಾರ್ಮಿಕವಾಗಿ ಹಾಗೂ ಭಕ್ತಿಯಿಂದ ಜಿಲ್ಲೆ, ರಾಜ್ಯ, ವಿದೇಶಗಳಿಂದಲೂ ಕೂಡ ಭಕ್ತರು ಆಗಮಿಸಿ ನೇರವೆರಿಸುವ ಅಂದಾಜ 25 ಲಕ್ಷ ಅಧಿಕ ಭಕ್ತಾದಿಗಳು, ಜನರು ಸೇರುವಂತಹ ಗವಿಶ್ರೀ ಜಾತ್ರ ಮಹೋತ್ಸವ ಅಂಗವಾಗಿ ರಾಜ್ಯದ ಮಹಾಜನರು, ಯುವಜನರು, ಮಹಿಳೆಯರು, ರೈತರು, ಮಕ್ಕಳು, ಎಲ್ಲಾ ವರ್ಗದವರು ಕೂಡ ಸೇರಿಕೊಂಡು ಜಾನಪದ ಶೈಲಿಯ ಹಾಗೂ ಪ್ರಸ್ತುತ ಪ್ರಚಲಿತವಿರುವ ಆಟಗಳನ್ನು ಸೇರಿಸಿ ಜಾತ್ರಾ ನಿಮಿತ್ಯ ಗವಿಶ್ರೀ ಕ್ರೀಡಾ ಉತ್ಸವ-2025ನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕ್ರೀಡಾಕೂಟವನ್ನು ಕೊಪ್ಪಳ ಗವಿಮಠ, ಕೊಪ್ಪಳ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಕೈಗಾರಿಕೆಗಳು ಹಾಗೂ ವಾಣಿಜ್ಯೋದ್ಯಮಿಗಳ ಸಹಕಾರದಿಂದ ಹಾಗೂ ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಶನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಕುಸ್ತಿ ಸಂಘ, ಬ್ಯಾಡ್ಮಿಂಟನ್ ಅಸೋಶಿಯೇಶನ್, ಕಬಡ್ಡಿ ಹಾಗೂ ವಾಲಿಬಾಲ್ ಅಸೋಶಿಯೇಶನ್ ಮತ್ತು ಹಲವಾರು ಸಂಘ ಸಂಸ್ಥೆಗಳನ್ನ ಒಳಗೊಂಡು ಎಲ್ಲಾ ವರ್ಗದವರು ಮುಕ್ತವಾಗಿ ಭಾಗವಹಿಸುವ ಹಾಗೇ ಗವಿಶ್ರೀ ಕ್ರೀಡಾಕೂಟ-2025ನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ 17 ವಿವಿಧ ರೀತಿಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪುರುಷ ಮತ್ತು ಮಹಿಳೆಯರಿಗೆ ಮುಕ್ತ ವಾಲಿಬಾಲ್, ಕಬಡ್ಡಿ, ಮ್ಯಾರಾಥಾನ, ಶೆಟಲ್ ಬ್ಯಾಡ್ಮಿಂಟನ್, ಛದ್ನವೇಷ, ದೇಹದಾರ್ಡ್ಯ, ಪಂದ್ಯಾವಳಿ ಏರ್ಪಡಿಸಲಾಗಿದೆ. ಪುರುಷರ ಆಹ್ವಾನಿತ ಕ್ರೀಡೆಗಳಾಗಿ ಕ್ರಿಕೆಟ್, ಗಾಳಿಪಟ, ಮಲ್ಲಕಂಬ, ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಪುರುಷರಿಗಾಗಿ ಜಿಲ್ಲಾ ಮಟ್ಟದಲ್ಲಿ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ, ಯುವಕರಿಂದ ಎತ್ತಿನ ಬಂಡಿ ಜಗ್ಗುವದು, ಸಂಗ್ರಾಣಿ ಕಲ್ಲು ಎತ್ತುವದು ಮತ್ತು ವಿಕಲಚೇತನರ ವಾಲಿಬಾಲ್ ಪಂದ್ಯಾವಳಿ. ಪುರುಷರ ಹಾಗೂ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ, ಮಹಿಳೆಯರಿಗೆ ಜಿಲ್ಲಾ ಮಟ್ಟದ ರಂಗೋಲಿ ಹಾಗೂ ಥ್ರೋಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಗಾಳಿಪಟ ಉತ್ಸವನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ, ಮಹಾರಾಷ್ಟç, ಕೇರಳ ಮತ್ತು ಹರಿಯಾಣದಿಂದಲೂ ಅನುಭವಿ ನುರಿತ ತಂಡಗಳು ಗವಿಶ್ರೀ ಮೈದಾನದಲ್ಲಿ ಸುಮಾರು 100ಕ್ಕೂ ಅಧಿಕ ಗಾಳಿಪಟಗಳ ಪ್ರದರ್ಶನವನ್ನು 2025ರ ಜನವರಿ 16 ರಂದು ನಡೆಸಲಿದ್ದಾರೆ. ಮಕ್ಕಳು ಯುವಕರಿಗೆ ಸ್ಫೂರ್ತಿ ತುಂಬುವoತೆ ಮಕರ ಸಂಕ್ರಾತಿಯ ವಿಶೇಷವಾಗಿಯೆ ಬೃಹತ್ ಪ್ರಮಾಣದ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಜನವರಿ 14 ರಂದು ಸಂಜೆ 3.30 ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಗವಿಮಠ ಆವರಣದಲ್ಲಿ ಆಯೋಜಿಸಲಾಗಿದೆ. ಗವಿಶ್ರೀ ಕ್ರೀಡಾಕೂಟದಲ್ಲಿ ರೈತರನ್ನು ಗಮನದಲ್ಲಿ ಇಟ್ಟುಕೊಂಡು ರೈತರ ಜೀವನ ಅವಿಭಾಜ್ಯ ಅಂಗವಾದ ಎತ್ತು, ಚಕ್ಕಡಿ, ಇವುಗಳ ಅಲಂಕಾರದ ಸ್ಪರ್ಧೆಯನ್ನು ಜನವರಿ 17 ರಂದು ನಗರದ ತಾಲ್ಲೂಕ ಕ್ರೀಡಾಂಗಣದಿಂದ ಗವಿಮಠದವರೆಗೆ ನಡೆಯಲಿದೆ. ಅದರಂತೆ, ರೈತ ಮಕ್ಕಳು ಮತ್ತು ಯುವಜನರಿಗಾಗಿ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿದೆ ಎಂದರು.
ಸ್ಪರ್ಧೆಗಳ ವಿವರ:ಗವಿಶ್ರೀ ಕ್ರೀಡಾ ಉತ್ಸವ-2025ರ ನಿಮಿತ್ತ ಜನವರಿ 14 ರಂದು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಮ್ಯಾರಥಾನ್ ಸ್ಪರ್ಧೆ ಮತ್ತು ಗವಿಮಠ ಆವರಣದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಜ. 15 ರಂದು ಗವಿಮಠದ ಆವರಣದಲ್ಲಿ ವಿಶೇಷಚೇತನ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ಮತ್ತು ಯುವಕರಿಂದ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆಗಳು ಇರಲಿವೆ. ಜ. 16 ರಂದು ಗವಿಮಠದ ಆವರಣದಲ್ಲಿ ಕುಸ್ತಿ ಸ್ಪರ್ಧೆ ಮತ್ತು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶೆಟಲ್ ಬ್ಯಾಡ್ಮಿಂಟನ್ (ಡಬಲ್ಸ್) ಸ್ಪರ್ಧೆ, ಹಗ್ಗ-ಜಗ್ಗಾಟ, ಗಾಳಿಪಟ ಉತ್ಸವ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿ ಬಾಲಿಬಾಲ್, ವಿಕಲಚೇತನರ ಬಾಲಿಬಾಲ್, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕಬಡ್ಡಿ, ಛದ್ಮವೇಷ ಸ್ಪರ್ಧೆ, ಪುರುಷರಿಗಾಗಿ ದೇಹದಾರ್ಡ್ಯತೆ ಸ್ಪರ್ಧೆ ಹಾಗೂ ಕ್ರಿಕೆಟ್ ಪಂದ್ಯಾವಳಿ ನಡೆಯಲಿವೆ. ಜ. 17 ರಂದು ಗವಿಮಠ ಆವರಣದಲ್ಲಿ ಸಂಗ್ರಾಣೆ ಕಲ್ಲು ಎತ್ತುವ ಸ್ಪರ್ಧೆ, ಎತ್ತಿನ ಬಂಡಿ ಅಥವಾ ಎತ್ತಿನ ಬಂಡಿ ಅಲಂಕಾರ ಸ್ಪರ್ಧೆ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿ ಥ್ರೋಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತಿಯ ಹಾಗೂ ತೃತೀಯ ಸೇರಿದಂತೆ ಇತರೆ ಹಲವಾರು ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಸಂಸದರು ಮಾಹಿತಿ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಶ್ರೀನಿವಾಸ ಗುಪ್ತಾ, ವೀರೇಶ್ ಮಹಾಂತಯ್ಯನಮಠ, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಕೊಪ್ಪಳ ತಾಲ್ಲೂಕು ಕ್ರೀಡಾಧಿಕಾರಿ ಶರಣಪ್ಪ ಬಂಡಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend