ಜಿಲ್ಲಾಧಿಕಾರಿಗಳ ಪರವಾನಿಗೆ ಪಡೆಯದೇ ಅನಾಧಿಕೃತವಾಗಿ ನೂರಾರು ಎಕರೆ ಸೋಲಾರ್ ಪಾರ್ಕ್ ಕಂಪನಿ ತೆರವು ಗೊಳಿಸುವಂತೆ-ಹಲವು ಸಂಘಟನೆಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ…
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕೊಟ್ಟೂರು ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಕನ್ನ ನಾಯಕನ ಕಟ್ಟಿ ಗ್ರಾಮದ ರೈತರ ಹೊಲಗಳಲ್ಲಿ ಹಾಗೂ ಅಕ್ಕಪಕ್ಕದ ಗ್ರಾಮಕ್ಕೆ ಸಂಬಂದಿಸಿದ ರೈತರ ಜಮೀನುಗಳಲ್ಲಿ 250 ಎಕ್ಕರೆ ಮೇಲ್ಪಟ್ಟು.ಸೈಸೀಲಿಕ್ ಎನರ್ಜಿ ಪವರ್ ಲಿಮಿಟೆಡ್ ಕಂಪನಿ. ಯವರು ಸರ್ಕಾರದ ಅಧಿಕಾರಿಗಳ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿಗಳು ಹಣವನ್ನು ಸರ್ಕಾರಕ್ಕೆ ತುಂಬದೆ ಮೋಸ ಮಾಡುತ್ತಿರುವ ಕಂಪನಿ ಮಾಲೀಕರ ವಿರುದ್ಧ ಸಂಬಂಧ ಪಟ್ಟಂತಹ ಅಧಿಕಾರಿಗಳು ಶೀಘ್ರದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು
ಎಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಸೇನೆ, ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರು, ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನಮ್ಮ ಭೂಮಿಗಳನ್ನು ಉಳಿಸಿ ಕೃಷಿಯನ್ನು ಸಂರಕ್ಷಿಸಿ ಎಂಬ ಉದ್ದೇಶವನ್ನಿಟ್ಟುಕೊಂಡು ಮಾನ್ಯ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಯ ಆದೇಶವನ್ನು ಪಡೆಯದೆ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕ್ ಕಂಪನಿಯ ವಿರುದ್ಧ ಬುಧವಾರರಂದು ಧರಣಿ ಸತ್ಯಾಗ್ರಹವನ್ನು ಸೋಲಾರ್ ಕಂಪನಿ ಅಳವಡಿಸಿರುವ ಜಮೀನುಗಳ ಮುಂದೆ ರೈತರು ಹಾಗೂ ಹೋರಾಟಗಾರರು ಪೆಂಡಲ್ ಶಾಮಿಯಾನ ಹಾಕಿಕೊಂಡು ಮಾನ್ಯ ಜಿಲ್ಲಾಧಿಕಾರಿಗಳಿಗೆ ಕೊಟ್ಟೂರ್ ತಹಶೀಲ್ದಾರದ ಅಮರೇಶ್ ರವರ ಮುಖಾಂತರ ಮನವಿ ನೀಡಿದರು.
ಈ ಸಂದರ್ಭದಲ್ಲಿ ಹೋರಾಟಗಾರರು ತಮ್ಮ ಮನವಿ ಪತ್ರದಲ್ಲಿ ಹೇಳಿರುವ ಹಾಗೆ ಈ ಕಂಪನಿಯವರು ಯೋಜನೆಯ ಅನುಷ್ಠಾನಕ್ಕಾಗಿ ಪ್ರತಿ ಮೆಗಾ ವ್ಯಾಟಿಗೆ 4 ಎಕರೆಗಳಂತೆ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ಮಾನ್ಯ ಜಿಲ್ಲಾಧಿಕಾರಿಗಳಿಂದ ಪರವಾನಿಗೆಯನ್ನು ಪಡೆದುಕೊಳ್ಳ ತಕ್ಕದ್ದು,ಮತ್ತು ಪರವಾನಿಗೆ ಪಡೆದ ನಂತರ ಆಯಾ ಗ್ರಾಮ ಪಂಚಾಯಿತಿ ಕಡೆಯಿಂದ ನಿರಪೇಕ್ಷಣ ಪ್ರಮಾಣ ಪತ್ರವನ್ನು ಪಡೆದ ನಂತರವೇ ಈ ಯೋಜನೆಯನ್ನು ಅನುಷ್ಠಾನಗೊಳಿಸಿ ಕಾಮಗಾರಿಯನ್ನು ನಿರ್ಮಾಣ ಮಾಡಬೇಕಾಗಿರುತ್ತದೆ
ಆದರೆ ಈ ಯೋಜನೆ ಕಂಪನಿಯ ಮಾಲೀಕರು ಸರ್ಕಾರದ ಶರತ್ತುಗಳು ಮತ್ತು ನಿಯಮಗಳ ಪರವಾನಿಗೆಯನ್ನು ಪಡೆಯದೆ ತಮ್ಮ ಹಣಬಲದಿಂದ ಈ ಯೋಜನೆ ಸಂಬಂಧಪಟ್ಟಂತ ಪರವಾನಿಗೆ ನೀಡುವ ವರ್ಗದ ಅಧಿಕಾರಿಗಳ ಬಾಯಿಯನ್ನು ಮುಚ್ಚುತ್ತಾ ತಮ್ಮ ಇಷ್ಟ ಬಂದಂತೆ ಸೋಲಾರ್ ಪಾರ್ಕನ್ನು ನಿರ್ಮಿಸಿದ್ದಾರೆಂದು ಹೋರಾಟಗಾರರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಹೋರಾಟಗಾರರ ಬೇಡಿಕೆಗಳು.: ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು.
* ಹಾಗೂ ಮಾನ್ಯ ಜಿಲ್ಲಾಧಿಕಾರಿಯವರಿಂದ ಭೂ ಪರಿವರ್ತನೆ ಆದೇಶ ಪಡೆದ ನಂತರ ಕಾಮಗಾರಿ ಪ್ರಾರಂಭಿಸಬೇಕು.
ಗ್ರಾಮ ಪಂಚಾಯಿತಿಯಿಂದ ನಿರಪೇಕ್ಷಣ ಪ್ರಮಾಣ ಪತ್ರ ಪಡೆದು ಕಾಮಗಾರಿಯನ್ನು ಪ್ರಾರಂಭಿಸಬೇಕು
ಭೂ ಪರಿವರ್ತನೆಯ ಆದೇಶ ಪಡೆಯದೆ ಕಾಮಗಾರಿಯನ್ನು ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಕಂಪನಿ ಮಾಲೀಕರ ವಿರುದ್ಧ ದಂಡವನ್ನು ವಿಧಿಸಬೇಕು.
ಈಗಾಗಲೇ ಸೋಲಾರ್ ಕಂಪನಿಗಳು ಅನಧಿಕೃತವಾಗಿ ವಿದ್ಯುತ್ ಕಂಪನಿಗಳು ಸರ್ಕಾರಿ ಭೂಮಿಗಳಲ್ಲಿ ನಿರ್ಮಾಣ ಮಾಡಿದ್ದು ಕೂಡಲೇ ಅವುಗಳನ್ನು ತೆರೆವುಗೊಳಿಸಿ ಸದರಿ ಜಮಿನಗಳಲ್ಲಿ ಉಳುಮೆಯನ್ನು ಮಾಡುತ್ತಿದ್ದ ರೈತರಿಗೆ ಫಾರಂ ನಂಬರ್ 57 ಸಾಗುವಳಿ ಚೀಟಿ ಮತ್ತು ಹಕ್ಕು ಪತ್ರಗಳನ್ನು ನೀಡಬೇಕು.
ಕೊಟ್ಟೂರು ತಾಲೂಕಿನ ರೈತರ ಕೃಷಿ ಯೋಗ್ಯವಾದ ಭೂಮಿಯನ್ನು ಇಲ್ಲಿನ ರೈತರಿಗೆ ದುಡ್ಡಿನ ಆಮಿಷ ತೋರಿಸಿ ಕಬಳಿಸಿದ ಯೋಗ್ಯವಾದ ಕೃಷಿ ಭೂಮಿಯನ್ನು ಬಿಟ್ಟು ಕೃಷಿಗೆ ಯೋಗ್ಯವಲ್ಲದ ಭೂಮಿಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲು ಕಂಪನಿಗಳಿಗೆ ಆದೇಶ ಮಾಡಬೇಕು.
ಸೋಲಾರ್ ಕಂಪನಿಗಳ ಭಾರಿ ವಾಹನಗಳು ಸಾರ್ವಜನಿಕರ ರಸ್ತೆಗಳಲ್ಲಿ ಸಂಚರಿಸಿದ ಕಾರಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಸದರಿ ಹಾಳಾಗಿರುವ ರಸ್ತೆಯನ್ನು ಕಂಪನಿಯವರು ಈ ಕೂಡಲೇ ಡಾಂಬರೀಕರಣ ಮಾಡಿ ಸರಿಪಡಿಸುವಂತೆ ಆದೇಶ ಮಾಡಬೇಕು ಹತ್ತಾರು ಹೋರಾಟಗಾರರು ಧರಣಿ ಸತ್ಯಾಗ್ರಹ ಮಾಡುವ ಹೋರಾಟಗಾರರ ಮನವಿ ಮನವಿಯ ಉದ್ದೇಶವಾಗಿರುತ್ತದೆ.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷರಾದ ಪಿ ಸಂತೋಷ್ ಕುಮಾರ್, ದಲಿತ ಮಾನವ ಹಕ್ಕುಗಳು ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಜಿಲ್ಲಾಧ್ಯಕ್ಷರಾದ ಎ.ಕೆ ಮಾರಣ್ಣ, ಗೌರವ ಅಧ್ಯಕ್ಷರು, ಎ ಬಸವರಾಜ್.ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಬರ್ಮಣ್ಣ, ರೈತ ಮುಖಂಡರು ಕರಿಬಸಪ್ಪ, ಕುಮಾರ್ ದಲಿತ ಮುಖಂಡರು, ಬಸವರಾಜ್ ರೈತ, ಹಾಗೆ ಅತ್ತಾರು ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತಾನು ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು…
ವರದಿ :- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030