ಕೊಟ್ಟೂರು ದೊರೆಗೆ ಕಾರ್ತಿಕೋತ್ಸವ ಸಂಭ್ರಮ
ದೀಪ ಬೆಳಗುವ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದ ಪೂಜ್ಯಶ್ರೀ ಶಿವಪ್ರಕಾಶ ಸ್ವಾಮಿಗಳು ಹಾಗೂ ಜಿಲ್ಲಾಧಿಕಾರಿ ಶ್ರೀಯುತ ಎಂ ಎಸ್ ದಿವಾಕರ್
ನಾಡಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ವಿಜಯನಗರ ಜಿಲ್ಲೆಯ ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿಯ ಪುಣ್ಯ ನೆಲೆಯಾಗಿ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿ ಕಂಗೊಳಿಸುತ್ತಿರುವುದು ಸತ್ಯ. ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು ಲಕ್ಷಾಂತರ ಭಕ್ತರ ” ಕೊಟ್ಟೂರು ದೊರೆಯೇ ನಿನಗಾರು ಸರಿಯೇ ಸರಿ ಸರಿ ಎಂದವರ ಹಲ್ಲು ಮುರಿಯೇ ” ಎನ್ನುವ ಜಯಗೋಷದೊಂದಿಗೆ ನಡೆಯಿತು
ಲಕ್ಷದೀಪೋತ್ಸವ ಹಾಗೂ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾಧಿಕಾರಿಗಳು ಶ್ರೀಯುತ ಎಂ ಎಸ್ ದಿವಾಕರ್ ಹಾಗೂ ಕೊಟ್ಟೂರೇಶ್ವರ ಸ್ವಾಮಿಯ ಕ್ರಿಯಾಮೂರ್ತಿಗಳಾದ ಪೂಜ್ಯಶ್ರೀ ಶಿವಪ್ರಕಾಶ ಕೊಟ್ಟೂರು ದೇವರು ಹಾಗೂ ಉತ್ತಂಗಿ ಮಠದ ಪೂಜ್ಯರ ಸಾನಿಧ್ಯದಲ್ಲಿ ಚಾಲನೆಗೊಂಡಿತು ನಾಡಿನ ಅನೇಕ ಭಾಗಗಳಿಂದ ಬಂದ ಭಕ್ತರು ದೀಪ ಹಚ್ಚುವ ಮೂಲಕ ಅಜ್ಞಾನವನ್ನು ತೊಳೆಯಿ ಎನ್ನುವ ಸಂದೇಶವನ್ನು ಸಾರುತ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು..
ವರದಿ. ಎಂ ಮಲ್ಲಿಕಾರ್ಜುನ್ ಕೊಟ್ಟೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030