ಕರ ವಸೂಲಾತಿ ಮಾಸಾಚರಣೆ ಅಭಿಯಾನ
ಕೊಟ್ಟೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಯ ಹಳ್ಳಿಗಳಲ್ಲಿ ಶುಕ್ರವಾರದಿಂದ ಕರ ವಿಸೂಲಿ ಮಾಸಾಚರಣೆ ಯನ್ನು ಹಮ್ಮಿಕೊಳ್ಳಲಾಗಿದೆ.
ಕರ ವಸೂಲಿಗೆ ಸಂಬಂಧಿಸಿದಂತೆ ತಾಲೂಕಿನ ನೋಡಲ್ ಅಧಿಕಾರಿಗಳಾದ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳು ಮಾನ್ಯ ಶ್ರೀ ಮೌನೇಶ್ ಸರ್ ಅವರು ಹ್ಯಾಳ್ಳ್ಯಾ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಕರ ವಸೂಲಿ ಪರಿಶೀಲನೆ ನಡೆಸಿದರು. ಬಳಿಕ ಬಸ್ ನಿಲ್ದಾಣ ದಲ್ಲಿ ನಿರ್ಮಿಸಿರುವ ಪುಸ್ತಕ ಗೂಡನ್ನು ವೀಕ್ಷಿಸಿ ಪ್ರಶಂಷೆ ವ್ಯಕ್ತ ಪಡಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಶ್ರೀ ಬಿ. ಆನಂದಕುಮಾರ್ ಅವರು ತೂಲಹಳ್ಳಿ, ಉಜ್ಜಿನಿ, ಕಾಳಾಪುರ ಗ್ರಾಮಪಂಚಾಯತ್ ಗೆ ಭೇಟಿ ನೀಡಿ ತೆರಿಗೆ ಸಂಗ್ರಹದ ಮೇಲ್ವಿಚಾರಣೆ ನೆಡೆಸಿದರು. ಗ್ರಾಮದಲ್ಲಿ ತೆರಿಗೆ ವಸೂಲಾತಿ ಮಾಡುವ ಅಭಿಯಾನದಲ್ಲಿ ಭಾಗಿಯಾಗಿ ಮನೆ ಮನೆಗೆ ತೆರಳಿ ಕರ ವಸೂಲಾತಿ ಮಾಡುವುದನ್ನು ಪರಿಶೀಲನೆ ಮಾಡಿ ಪ್ರತಿ ಶುಕ್ರವಾರ ಮತ್ತು ಶನಿವಾರ ಸದರಿ ಅಭಿಯಾನ ಮಾಡುವ ಮೂಲಕ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಸಂಪೂರ್ಣ ಕರ ವಸೂಲಿ ಮಾಡುವುದು ಕಡ್ಡಾಯ ವಾಗಿದೆ ಎಂದು ಗ್ರಾಮ ಪಂಚಾಯತಿ ಸಿಬ್ಬಂದಿಗೆ ಸೂಚಿಸಿದರು.
ಸಹಾಯಕ ನಿರ್ದೇಶಕರು (ಗ್ರಾ. ಉ) ಶ್ರೀ ಹೆಚ್. ವಿಜಯಕುಮಾರ್ ಅವರು ಅಲಬೂರು, ಅಂಬಳಿ, ಕೋಗಳಿ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ವ್ಯವಸ್ಥಾಪಕರಾದ ಶ್ರೀಮತಿ ಪುಷ್ಪಲತಾ,ಇದ್ದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾ. ಪ0.ಸಿಬ್ಬಂದಿಗಳು ಹಾಜರಿದ್ದರು.
ತಾಲೂಕಿನಾದ್ಯಂತ ಶುಕ್ರವಾರ 5.91 ಲಕ್ಷ ರೂ. ಸಂಗ್ರಹವಾಗಿದೆ. ಶನಿವಾರ 6.31 ಲಕ್ಷ ರೂ. ತೆರಿಗೆ ಸಂಗ್ರಹಣೆಯಾಗಿದೆ…
ವರದಿ. ಮಲ್ಲಿಕಾರ್ಜುನಯ್ಯ ಕೊಟ್ಟೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030