– ಕೊಟ್ಟೂರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘಟನಾ ವತಿಯಿಂದ 75 ನೇ ವರ್ಷದ ಸಂವಿಧಾನ ಅಂಗೀಕಣ ದಿನಾಚರಣೆ ಪ್ರಯುಕ್ತ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಮುಖಂಡ ಬಿ.ಮರಿಸ್ವಾಮಿ ಯವರು
ಪ್ರಜಾಪ್ರಭುತ್ವ ದಿನದ ಯಶಸ್ವಿಗೆ ಕಾರಣವಾದ ಮಹತ್ವದ ಸಂವಿಧಾನ ನಮ್ಮದಾಗಿದೆ ಇದನ್ನು ದೇಶಕ್ಕೆ ಅರ್ಪಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿಶ್ವದ ಮಹಾನ್ ಜ್ಞಾನಿ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿದೆ ಹಾಗೇ ಇವರು ಗ್ರಂಥಾಲಯ ಪಿತಾಮ ಕೂಡ ಹೌದು ಎಂದು ವಿಶ್ವದ ಮಹಾನ್ ನಾಯಕರು ಅರ್ಥೈಸಿಕೊಂಡಿದ್ದಾರೆ ಇವರು ತನ್ನ ಜ್ಞಾನಧಾರೆಯನ್ನು ಅರೆದು ದೇಶಕ್ಕೆ ಬಹುದೊಡ್ಡ ಸಂವಿಧಾನವನ್ನು ಅರ್ಪಿಸಿದ್ದಾರೆ ಇದರಿಂದ ದೇಶದಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವ ಬರಲು ಕಾರಣವಾಯಿತು ಎಂದು ಹೇಳಿದರು.
ವಕೀಲ.ಅಂಬಳಿ ಮಾರೇಶ್, ಎಲ್ ವಿಷ್ಣು, ಕೆ.ಶಿವರಾಜ್, ಬಿ.ಸುರೇಶ್, ಮುಂತಾದವರು ಇದ್ದರು…
ವರದಿ.ಎ ವಿನಾಯಕ ಕೊಟ್ಟೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030