ನಿಂಬಳಗೇರೆಯಲ್ಲಿ ನೂತನ ಎಟಿಎಂ ಆರಂಭ
ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಸಮೀಪದ ನಿಂಬಳಗೆರೆ ಗ್ರಾಮದಲ್ಲಿ ನೂತನ ಎಟಿಎಂನ್ನು ಆರಂಭಿಸಲಾಯಿತು. ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿ ಮಾತನಾಡಿ, ರೈತರಿಗಾಗಿ ಬ್ಯಾಂಕುಗಳಿಂದ ಅನೇಕ ಯೋಜನೆಗಳ ಲಭ್ಯವಾಗುತ್ತವೆ. ಇವುಗಳ ಪ್ರಯೋಜವನ್ನು ಪ್ರತಿ ಗ್ರಹಕರು ಪಡೆಯಬೇಕು. ಇದರಿಂದ ನಿಮ್ಮ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಬ್ಯಾಂಕುಗಳಿಂದ ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿ ಮಾಡಬೇಕು. ಸಣ್ಣ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ವತಿಯಿಂದ ಎಟಿಎಂ ಸ್ಥಾಪನೆ ಮಾಡಿರುವುದು ಸ್ಥಳೀಯರು ಸೇರಿದಂತೆ ಸುತ್ತ ಮುತ್ತ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಇದೇ ರೀತಿ ಸದ್ಧರ್ಮ ಪೀಠ ಹೊಂದಿರುವ ಉಜ್ಜನಿಯಲ್ಲಿ ಬ್ಯಾಂಕ್ ನೊಂದಿಗೆ ಎಟಿಎಂ ಆರಂಭ ಮಾಡಿದರೆ ಭಕ್ತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬಳ್ಳಾರಿ ಮುಖ್ಯ ವ್ಯವಸ್ಥಾಪಕ ಇರ್ಷಾದ್ ಅಲಾಮ್ ಮಾತನಾಡಿ, ನಿಮ್ಮ ಮೊಬೈಲೆಗೆ ಬರುವ ಯಾವುದೇ ಅನುಮಾನಸ್ಪದ ಲಿಂಕ್ ಗಳನ್ನು ತೆರೆಯಬೇಡಿ, ತಿಳಿಯದ ಸ್ಕ್ರೀನ್ ಶೇರಿಂಗ್ ಯಾವುದೇ ಯಾಪ್ ಗಳನ್ನು ಡೌನಲೊಡ್ ಮಾಡಬೇಡಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ಸ್ಥಳೀಯ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕು ಎಂದು ಗ್ರಾಹಕರಿಗೆ ಸಲಹೆ ನೀಡಿದರು.
ರಾಮಕೃಷ್ಣ ,ಧರ್ಮೇಂದ್ರ, ಚಂದ್ರಶೇಖರ, ಶಾಖಾ ವ್ಯವಸ್ಥಾಪಕ ರಾಜಣ್ಣ, ಗ್ರಾಮದ ಮುಖಂಡರಾದ ಹೆಚ್ ಕೆ ಕಲ್ಲೇಶ್, ರಾಜೇಂದ್ರ, ರಾಜೇಂದ್ರ ಗೌಡ ,ರಮೇಶ, ಸಂದೀಪ್ ಗೌಡ, ಜೆ. ವಿಜಯಪ್ಪ, ಉಮೇಶ್. ಮಹಾಂತೇಶ್, ಶಿಲ್ಪಾಚಾರಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಸುತ್ತಮುತ್ತಲಿನ ಗ್ರಾಮದವರು ಭಾಗಿಯಾಗಿದ್ದರು….
ವರದಿ. ಎಸ್, ಎಂ, ಮಲ್ಲಿಕಾರ್ಜುನ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030