ವಾಹನ ಸವರಾರು ಸ್ವಲ್ಪ ಎಚ್ಚರ ತಪ್ಪಿದರೆ ಜೀವಕ್ಕೆ ಅಪಾಯ ಖಂಡಿತ…!!!

Listen to this article

ಅಧಿಕಾರಿಗಳ ನಿರ್ಲಕ್ಷ : ಬಕಪಕ್ಷಿಯಂತೆ ತೆರೆದಿವೆ ರಸ್ತೆ ಗುಂಡಿಗಳು

ವಾಹನ ಸವರಾರು ಸ್ವಲ್ಪ ಎಚ್ಚರ ತಪ್ಪಿದರೆ ಜೀವಕ್ಕೆ ಅಪಾಯ ಖಂಡಿತ.

ಕೊಟ್ಟೂರು ತಾಲೂಕಿನ ಹರಪನಹಳ್ಳಿ ರಸ್ತೆಯ ಚಪ್ಪರದಹಳ್ಳಿ ರೈಲ್ವೆ ಬ್ರಿಡ್ಜ್ ಹತ್ತಿರ ಇರುವ ರಸ್ತೆಯು ಸಂಪೂರ್ಣ ಹದಗೆಟ್ಟು ಈ ರಸ್ತೆಯು ಗುಂಡಿಗಳಾಗಿ ಪರಿವರ್ತನೆಗೊಂಡಿದೆ ಇಲ್ಲಿ ಗುಂಡಿಗಳಲ್ಲಿ ವಾಹನವನ್ನು ಸಂಚರಿಸುವ ವ್ಯವಸ್ಥೆ ನಿರ್ಮಾಣವಾಗಿದೆ ಆದಷ್ಟು ಬೇಗನೆ ಈ ರಸ್ತೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಸರಿಪಡಿಸಬೇಕು ಇಲ್ಲವಾದರೆ ಜೀವಕ್ಕೆ ಕುತ್ತು ಬರುವುದರಲ್ಲಿ ಸಂಶಯವಿಲ್ಲ ಎಂದು ಅಪಘಾತಕ್ಕೆ ಒಳಗಾದ ವಾಹನ ಸವಾರ ಆಪಿಜ್ ರವರು ಪತ್ರಿಕೆಗೆ ತಿಳಿಸಿದರು

ಈ ರಸ್ತೆಯು ಹರಪನಹಳ್ಳಿ ಮತ್ತು ದಾವಣಗೆರೆಗೆ ಮುಖ್ಯ ರಸ್ತೆವಾಗಿರುವುದರಿಂದ ಇಲ್ಲಿ ದಿನನಿತ್ಯ ಸಾವಿರಾರು ವಾಹನ ಸವಾರರು ಸಂಚರಿಸುತ್ತಾರೆ ಆದರೆ ವಾಹನ ಸವಾರರು ಮಾತ್ರ ತಮ್ಮ ಜೀವವನ್ನು ಬಿಗಿದಪ್ಪಿ ಹಿಡಿದುಕೊಂಡು ವಾಹನವನ್ನು ಸಂಚಾರ ಮಾಡುವ ವ್ಯವಸ್ಥೆ ನಿರ್ಮಾಣಗೊಂಡಿದೆ ಎಷ್ಟೇ ಜವಾಬ್ದಾರಿತವಾಗಿ ವಾಹನವನ್ನು ಸಂಚಾರ ಮಾಡಿದರು ಕೂಡ ಇಲ್ಲಿ ಅಪಾಯ ಆಗುವುದಂತೂ ಸತ್ಯ ಈ ಭಾಗದಲ್ಲಿ ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ ಆದರೆ ಅಪಘಾತಗಳ ನೆಡೆಯುವ ಘಟನೆಗಳನ್ನು ಅಧಿಕಾರಿಗಳ ಗಮನಕ್ಕೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ಬಂದರು ಸಹ ಯಾವುದೇ ಪ್ರಯೋಜನವಿಲ್ಲ ಇಂತಹ ಜವಾಬ್ದಾರಿತವಿಲ್ಲದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇರುವುದು ನಮ್ಮ ದುರದೃಷ್ಟಕರಆಗಿದೆ ಎಂದು ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದರು

ಅಧಿಕಾರಿಗಳ ನಿರ್ಲಕ್ಷ :
…………………………
ಈ ಭಾಗದಲ್ಲಿ ಎಲ್ಲಿ ನೋಡಿದರೂ ಕೂಡ ತೆಗ್ಗು ಗುಂಡಿಗಳೇ ಗಣನೀಯವಾಗಿದೆ ಈ ಜಾಗದಲ್ಲಿ ಮಹಿಳಾ ರೋಗಿಗಳು ಹೆರಿಗೆಗೆ ಅಂತ ನಡೆದರೆ ಗುಂಡಿಗಳಿಂದ ಹಾಗೇ ತಾನೇ ಜನಿಸುವ ಜೀವಕ್ಕೆ ಕೂಡ ಅಪಾಯ ತಪ್ಪಿದಲ್ಲ ವಾಹನ ಸಾವರರ ಅಪಘಾತಗಳು ಸಂಭವಿಸಿದ ವಿಷಯ ತಿಳಿದರು ಕೂಡ ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿರುವುದು ಅವರ ಕರ್ತವ್ಯ
ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.

ಶಾಸಕರ ಬೇಜವಾಬ್ದಾರಿ ಆಡಳಿತ :
……………………………………..
ಕೊಟ್ಟೂರು ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿಸಲು ಹೆಚ್ಚು ಶ್ರಮ ವಹಿಸುತ್ತೇನೆ ಪಟ್ಟಣ ಅಭಿವೃದ್ಧಿಗೆ ಎಷ್ಟು ಕೋಟಿ ಬೇಕಾದರೂ ಅನುದಾನವನ್ನು ತಂದು ಅಭಿವೃದ್ಧಿಪಡಿಸುತ್ತೇನೆ ಅಭಿವೃದ್ಧಿಯಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ನೇಮಿರಾಜ್ ನಾಯ್ಕ ರವರು ಪಟ್ಟಣಕ್ಕೆ ಬರುವಾಗ ಹೋಗುವಾಗೆಲ್ಲ ಹೇಳುತ್ತಾರೆ ಆದರೆ ಅಭಿವೃದ್ಧಿ ಕೆಲಸಗಳು ಮಾತ್ರ ಕಣ್ಮರೆಯಾಗಿವೆ ನೀಡಿದ ಭರವಸೆಗಳು ಬರೀ ನೆಪಕ್ಕೆ ಸೀಮಿತವಾಗಬಾರದು ಎಂಬುವುದು ಪ್ರಜ್ಞಾವಂತ ನಾಗರಿಕರ ವಿಚಾರವಾಗಿದೆ.

ಕೋಟ್…
ರೈಲ್ವೆ ಬ್ರಿಡ್ಜ್ ಹತ್ತಿರ ಇರುವ ಜಾಗದಲ್ಲಿ ಪ್ರತಿನಿತ್ಯ ಅಪಘಾತಗಳ ನಡೆಯುತ್ತಲೇ ಇವೆ ಈ ರಸ್ತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಹ ಸಂಚರಿಸುತ್ತಾರೆ ರಸ್ತೆಯು ಸಂಪೂರ್ಣ ಹದಗೆಟ್ಟಿರುವ ವಿಷಯ ಅಧಿಕಾರಿಗಳಿಗೆ ತಿಳಿದರು ಸಹ ತಿಳಿಯದಂತೆ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಇದನ್ನು ಸರಿಪಡಿಸದಿದ್ದರೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ.

ಶಫಿ.
ಪಟ್ಟಣ ಪಂಚಾಯಿತಿ ಸದಸ್ಯರು
ಕೊಟ್ಟೂರು…

ವರದಿ. ವಿನಾಯಕ ಕೊಟ್ಟೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend