ಸಹಪಾಠಿ ಸ್ಪರ್ಧೆ ಬಲಿಷ್ಠವಾಗಿದ್ದರೆ, ಹೋರಾಟ ರೋಚಕವಾಗಿರುತ್ತದೆ…!!!

Listen to this article

ಸಹಪಾಠಿ ಸ್ಪರ್ಧೆ ಬಲಿಷ್ಠವಾಗಿದ್ದರೆ, ಹೋರಾಟ ರೋಚಕವಾಗಿರುತ್ತದೆ

ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಯಾಗಿ, ಶಿಕ್ಷಕರ ಜೊತೆ ಶಿಕ್ಷಕರಾದ ಜಿಲ್ಲಾಧಿಕಾರಿಗಳು

ನಿರಂತರ ನಾಲ್ಕು ಘಂಟೆಗಳ ಕಾಲ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು

ವಿಕೆಂಡ್ ವಿತ್ ಸ್ಟೂಡೆಂಟ್ಸ್ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೇ ಮೊದಲ ಅತಿಥಿ

ಕೊಟ್ಟೂರು :
ಶಿಕ್ಷಕರು ಮೊದಲ ಆಧ್ಯತೆಯಲ್ಲಿ ನಿಮ್ಮ ಆರೋಗ್ಯ, ಹಾಗೆಯೇ ನಿಮ್ಮ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿ ಬೋಧನೆ ಮಾಡಿ. ಸಿದ್ಧಾಂತದಂತೆ ನಿಮ್ಮ ಮಕ್ಕಳಿಗೆ ಉನ್ನತ ಹುದ್ದೆಗಳು ಲಭಿಸಲಿವೆ. ಹೆತ್ತ ಮಕ್ಕಳ ಸಾಧನೆಗಿಂತಲೂ ವಿದ್ಯಾರ್ಥಿಗಳ ಸಾಧನೆ ತಮ್ಮ ಜೀವನದ ಸಾರ್ಥಕದ ಕ್ಷಣ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.
ಪಟ್ಟಣದ ಇಂದು ಕಾಲೇಜ್ ಆವರಣದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮಾದರಿಯಲ್ಲಿ “ವಿಕೆಂಡ್ ವಿತ್ ಸ್ಟೂಡೆಂಟ್ಸ್” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
“ವಿಕೆಂಡ್ ವಿತ್ ಸ್ಟೂಡೆಂಟ್ಸ್” ಕಾರ್ಯಕ್ರಮಕ್ಕೆ ಸರಿಯಾಗಿ ಸಂಜೆ ೬.೩೦ಕ್ಕೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಆಗಮನವಾಗಿ ಬಿಡುವಿಲ್ಲದೇ ಸತತ ೪ ಗಂಟೆಗಳ ಕಾಲ ವಿದ್ಯಾರ್ಥಿಗಳ ಜೊತೆ ಮಗುವಾಗಿ, ಶಿಕ್ಷಕರ ಜೊತೆ ಶಿಕ್ಷಕರಾಗಿ ಮೈ ರೋಮಾಂಚನವಾಗುವಂತೆ ತಮ್ಮ ಬಾಲ್ಯದ ದಿನಗಳಿಂದ ಪ್ರಸ್ತುತ ಜಿಲ್ಲಾಧಿಕಾರಿ ಹುದ್ದೆಗೆ ಬರುವವರೆಗೂ ತಮ್ಮ ಜೀವನದ ಸಿಹಿ – ಕಹಿ ಘಟನೆಗಳನ್ನು ಸ್ವಾರಸ್ಯಕರವಾಗಿ, ಸರಳವಾಗಿ ಎಲ್ಲರಿಗೂ ಮನಮುಟ್ಟುವಂತೆ ಅದ್ಭುತವಾಗಿ ತಿಳಿಸಿದರು. ಇಂದು ಸಂಸ್ಥೆಯ ಆಡಳಿತಾಧಿಕಾರಿ ವೀರಭದ್ರಪ್ಪನವರು ಕೇಳುವ ಪ್ರಶ್ನೆಗಳಿಗೆ ಅತ್ಯುತ್ತಮವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ತಮ್ಮ ವ್ಯಾಸಂಗ ಸಂದರ್ಭದಲ್ಲಿ ಮೊದಲ ಬೆಂಚಿನ ವಿದ್ಯಾರ್ಥಿಯಾಗಿದ್ದು, ವಿದ್ಯಾರ್ಥಿಗಳ ಪರಿಶ್ರಮದಿಂದ ಮಾತ್ರ ತಮ್ಮ ಶಿಕ್ಷಕರನ್ನು ಆಕರ್ಷಿಸಲು ಸಾಧ್ಯವೆಂದು ತಿಳಿಸಿದರು. ಯಶಸ್ಸಿಗೆ ಅಡ್ಡದಾರಿಯಿಲ್ಲ, ಪರಿಶ್ರಮಕ್ಕೆ ಪರ್ಯಾಯವಿಲ್ಲ, ಓದು, ಓದು, ಓದು ಅಷ್ಟೇ ನಿಮ್ಮ ಜೀವನವಾಗಿರಲಿ. ಯಾವುದೇ ಮನೋರಂಜನೆಗಳಿಗೆ ಸಮಯ ವ್ಯರ್ಥ ಮಾಡದಿರಿ, ಏನಾದರೂ ಸಾಧನೆ ಮಾಡಿ ಉನ್ನತ ಹುದ್ದೆ ಪಡೆಯಿರಿ. ಕೊನೆ ಪಕ್ಷ ಉತ್ತಮ ನಾಗರೀಕರಾದರೂ ಅದು ಸಹ ಉತ್ತಮವೇ. ಅಂಕಗಳು ಕಡಿಮೆ ಬಂದಾಗ ಕುಗ್ಗದಿರಿ, ಅತ್ಯುತ್ತಮ ಅಂಕಗಳು ಬಂದಾಗ ಆ ಶ್ರೇಣಿಯನ್ನು ಹಾಗೇ ಮುಂದುವರೆಸುವ ರೂಢಿ ಮಾಡಿಕೊಳ್ಳಿ. ತಮ್ಮ ಸಹಪಾಠಿ ಅಂಕಗಳ ವಿಷಯದಲ್ಲಿ ಬಲಿಷ್ಠವಾಗಿದ್ದರೆ, ನಿಮ್ಮ ಹೋರಾಟವು ರೋಚಕವಾಗಿರುತ್ತದೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕೊಟ್ಟೂರು ತಾಲೂಕು ತಹಶೀಲ್ದಾರರು ಅಮರೇಶ್ ಮಾತನಾಡಿ ಇಂತಹ ಜಿಲ್ಲಾಧಿಕಾರಿಗಳ ಜೊತೆ ಕೆಲಸ ಮಾಡುತ್ತಿರುವುದು ನಮ್ಮ ಸೌಭಾಗ್ಯವೆಂದು ತಿಳಿಸಿದರು. ಕಾರ್ಯಕ್ರಮಕ್ಕೆ ಹೊಸಪೇಟೆ ಅರ್ಬನ್ ಡೆವಲಪ್‌ಮೆಂಟ್ ಕಮಿಷನರ್ ಈರಣ್ಣ ಬಿರಾದರ್, ಹೊಸಪೇಟೆ ನಿರ್ಮಿತಿ ಯೋಜನಾ ನಿರ್ದೇಶಕರಾದ ರವಿಕುಮಾರ್, ಪಿ.ಎಸ್. ನಾಗರಾಜ, ಜಿಲ್ಲಾಧಿಕಾರಿಗಳ ಸಹೋದರ ಬಸವರಾಧ್ಯ ಹಾಗೂ ಜಿಲ್ಲಾಧಿಕಾರಿಗಳ ಧರ್ಮಪತ್ನಿ ಶ್ರೀಮತಿ ರೂಪ, ಮಗ ಜ್ಞಾನಸಾಗರ ಉಪಸ್ಥಿತರಿದ್ದರು. ಮಾನ್ಯ ಜಿಲ್ಲಾಧಿಕಾರಿಗಳಿಗೆ ಇಂದು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು…

ವರದಿ. ವಿನಾಯಕ ಕೊಟ್ಟೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend