ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯಲ್ಲಿ ಭೌತಶಾಸ್ತ್ರದ ಪಿತಾಮಹರಾದ ಸರ್ ಸಿ ವಿ ರಾಮನ್ ರವರ ಜನ್ಮದಿನಚರಣೆ ಅಂಗವಾಗಿ ಭೌತಶಾಸ್ತ್ರ ವಿಭಾಗ ಹಾಗೂ IQAC ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ ರವಿಕುಮಾರ್ ರವರು ಸಿವಿ ರಾಮನ್ ಅವರ ನವಂಬರ್ 7.1888 ರಲ್ಲಿ ತಮಿಳುನಾಡಿನ ತಿರುಚನಪಲ್ಲಿಯಲ್ಲಿ ಜನಿಸಿದರು. ಭಾರತೀಯ ಮೊದಲ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ. 1930 ರಲ್ಲಿ ರಾಮನ್ ಎಫೆಕ್ಟ್ ಅಂಡ್ ಕ್ಯಾಟ್ರಿಂಗ್ ಆಫ್ ಲೈಫ್ ಕಂಡುಹಿಡಿದರು ಇದರ ಪ್ರಯುಕ್ತ ಫೆಬ್ರವರಿ 28ನ್ನು ವಿಜ್ಞಾನ ದಿನ ವನ್ನಾಗಿ ಆಚರಿಸಲಾಗುತ್ತದೆ. 1926ರಲ್ಲಿ ಇಂಡಿಯನ್ ಜರ್ನಲ ಫಿಸಿಕ್ಸ್ ಸ್ಥಾಪಿಸಿದರು. ಐಐಎಸ್‌ಸಿ ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1948 ರಿಂದ ರಾಮನ್ ಇನ್ಸ್ಟಿಟ್ಯೂಟ್ ಬೆಂಗಳೂರು ಇಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ರಾಮನ್ ರವರ ಕೊಡುಗೆ ಭೌತಶಾಸ್ತ್ರಕ್ಕೆ ಅವಿಸ್ಮರಣೀಯ ತಾವುಗಳು ಕೂಡ ಇದೇ ತರಹ ಕ್ರಿಯಾಶೀಲತೆಯನ್ನು ರೂಢಿಸಿಕೊಂಡು ಮುಂದಿನ ವಿಜ್ಞಾನಿಗಳ ಆಗಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಚೇತನ್ ಚೌಹಾನ್ ಪ್ರಸ್ತಾವಿಕ ನುಡಿಯನ್ನು ನುಡಿದರು. ಸಿ ಬಸವರಾಜ್ ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪೋ. ರಾಧಾ ಸ್ವಾಮಿ ಡಾ. ಶಿವಕುಮಾರ್ ವಿಜಯಲಕ್ಷ್ಮಿ ,ಪೂಜಾ, ಬೋಧಕ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…
ವರದಿ. ವಿನಾಯಕ ಕೊಟ್ಟೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030