ಮಾನ್ಯ ಜಿಲ್ಲಾಧಿಕಾರಿಗಳು
ವಿಜಯನಗರ ಜಿಲ್ಲೆ
ವಿಷಯ : ವಕ್ಫ್ ಬೋರ್ಡ ಹೆಸರಿನಲ್ಲಿ ನಾಡಿನ ಅನ್ನದಾತನ ಜಮೀನು ಕಬಳಿಸುತ್ತಿರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮುಚ್ಚುವಂತೆ ಕರ್ನಾಟಕ ನವನಿರ್ಮಾಣ ಸೇನೆ ಆಗ್ರಹ.
ಮಾನ್ಯರೆ,
ನಾಡಿನ ಅನ್ನದಾತರ ಜಮೀನು, ಶಾಲೆ,ಆಧ್ಯಾತ್ಮ ಕೇಂದ್ರಗಳು,ಮಠಗಳು,ದೇವಸ್ಥಾನ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೋಟಿಸ್ ನಿಡಿ ಸಾವಿರಾರು ಎಕರೆ ಜಾಗವನ್ನು ಕಬಳಿಸಿರುವ ಕ್ರಮವನ್ನು ಕರ್ನಾಟಕ ನವನಿರ್ಮಾಣ ಸೇನೆ ಘಟಕ ಬಲವಾಗಿ ಖಂಡಿಸುತ್ತದೆ.
ತಲೆ ತಲಾಂತರುಗಳಿಂದ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಉಳುವೆ ಮಾಡುತ್ತಿರುವ ಅನ್ನದಾತನ ಜಮೀನಿನ ಪಹಣಿಯಲ್ಲಿ ಏಕಾಏಕಿ ವಕ್ಫ್ ಬೋರ್ಡ ಮಾಲಿಕತ್ವ ಎಂದು ದಾಖಲಾಗುತ್ತಿರುವುದು ಆಶ್ಚರ್ಯ.ಸಾವಿರಾರು ವರ್ಷಗಳಿಂದ ಸಮಾತೆಯ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿರುವ ಮಠಗಳ ಆಸ್ತಿಗಳು ಈ ವಕ್ಫ್ ಮಾಲಿಕತ್ವದ ಹೆಸರಿನಲ್ಲಿ ಗುರಿತಿಸುವಂತಹ ಕೆಟ್ಟ ಪರಿಸ್ಥಿತಿ ರಾಜ್ಯದಲ್ಲಿ ನಡೆಯುತ್ತಿದೆ.
ರಾಜ್ಯ ಸರಕಾರದ ಆದೇಶದ ಮೇರೆಗೆ ಅಧಿಕಾರಿಗಳು ಈ ಕೆಲಸ ಮಾಡುತ್ತಿರುವುದು ನಾಚಿಕೆಗೇಡು.ಮತ ಬ್ಯಾಂಕ್ ರಾಜಕಾರಣಕ್ಕೆ ನಾಡಿನ ಉಳುವಾ ಯೋಗಿ,ಅನ್ನದಾನ,ಜ್ಞಾನ ದಾನ,ವಿದ್ಯಾ ದಾನ ಮಾಡಿರುವ ಮಠಗಳ ಮೇಲೆ ವಕ್ಫ್ ಸವಾರಿ ಮಾಡಿಸಲು ಮುಂದಾಗಿರುವ ರಾಜಕಾರಣಿಗಳ ನೀಚ ಮನಸ್ಥಿ ನಮ್ಮ ಧಿಕ್ಕಾರವಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇಂದ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಈ ಹಗಲು ದರೋಡೆ ನಡೆಯುತ್ತಿದೆ.ಲಗಾಮು ಇಲ್ಲದ ಕುದುರೆ ಎಂತೆ ಓಡುತ್ತಿರುವ ಈ ಕುದುರೆಗೆ ಕಟ್ಟಿ ಹಾಕಿ ನುಂಗಿರುವ ಜಮೀನು ಮರಳಿ ಪಡೆಯುವ ಕೆಲಸ ಸರಕಾರ ಮಾಡ ಬೇಕು.ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಶಾಶ್ವತವಾಗಿ ಕರ್ನಾಟಕದಲ್ಲಿ ಮುಚ್ಚಿ ಈ ನಾಡಿಗಾಗುತ್ತಿರುವ ಅನ್ಯಾಯವನ್ನು ತಡೆಯುವಂತೆ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸುತ್ತದೆ.ಸರಕಾರ ಒಂದು ವೇಳೆ ವಕ್ಫ್ ಬೋರ್ಡ ಮುಚ್ಚದಿದ್ದರೆ ಕರ್ನಾಟಕ ನವನಿರ್ಮಾಣ ಸೇನೆ ವಕ್ಫ್ ಬೋರ್ಡಗೆ ಮುತ್ತಿಗೆ ಹಾಕಿ ಬೀಗ ಹಾಕಿ ಮುಚ್ಚಲಿದೆ ಎನ್ನುವ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ಸರಕಾರಕ್ಕೆ ನೀಡುತ್ತದೆ.
ಇಂತಿ ತಮ್ಮ ವಿಶ್ವಾಸಿಪಾಟೀಲ್ ಕಲ್ಲೇಶ್ ಕನ್ನಡಿಗ…
ವರದಿ.ಎಂ ಮಲ್ಲಿಕಾರ್ಜುನ್ ಕೊಟ್ಟೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030