ರೈತರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡುವ ಮೂಲಕ ವಿಷ್ಣುವರ್ಧನ್ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಕೊಟ್ಟೂರು ಕ್ಷೇತ್ರದ ಮಾಜಿ ಶಾಸಕ ಕೆ.ವಿ. ರವೀಂದ್ರಬಾಬು ಹೇಳಿದರು.
ಚಿಕ್ಕಜೋಗಹಳ್ಳಿ ಗ್ರಾಮದಲ್ಲಿ ಶುಕ್ರವಾರ ವಿಷ್ಣು ಸೇನಾ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ. ವಿಷ್ಣುವರ್ಧನ್ ಅವರ ಹುಟ್ಟು ಹಬ್ಬದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಸ ಮಂಜರಿಯಂತಹ ಕಾರ್ಯಕ್ರಮದ ಜೊತೆಗೆ ರೈತರಿಗೆ, ವಿದ್ಯಾರ್ಥಿಗಳಿಗೆ ನೆರವಾಗಬೇಕಿದೆ. ಈ ದಿಶೆಯಲ್ಲಿ ಸಂಘಟಕರು ಚಿಂತಿಸಿ ಮುಂದಿನ ಬಾರಿ ಇನ್ನು ಉತ್ತಮ ಕಾರ್ಯಗಳನ್ನು ಆಯೋಜನೆ ಮಾಡಬೇಕು ಎಂದರು.
ವಿಷ್ಣು ಸೇನಾ ತಾಲ್ಲೂಕು ಅಧ್ಯಕ್ಷ ಜಿ. ಓಬಣ್ಣ, ಮಹಮದ್ ಸಾಧಿಕ್, ರಾಜ ವಿಷ್ಣು ,ಸರಿತ್ ಖಾನ್, ಚಳ್ಳಕೆರೆ ನಗರಸಭಾ ಸದಸ್ಯ ಪ್ರಸನ್ನ ಕುಮಾರ್ ಸೇರಿದಂತೆ ವಿಷ್ಣುವರ್ಧನ್ ಅಭಿಮಾನಿಗಳು ಭಾಗಿಯಾಗಿದ್ದರು…
ವರದಿ. ಎಂ. ಮಲ್ಲಿಕಾರ್ಜುನ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030