ಧರ್ಮ ಸೂರ್ಯ ಲಿಂಗೈಕ್ಯ ಸಿದ್ದಲಿಂಗ ಭಗವತ್ಪಾದರ ಪುರಾಣ ಮಂಗಲ.
ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ 1008 ಶ್ರೀ ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಆಶೀರ್ವಾಚನ ನೀಡಿದರು.
ಲಿಂ.ಉಜ್ಜಯಿನಿ ಶ್ರೀ ಸಿದ್ದಲಿಂಗ ಜಗದ್ಗುರುಗಳವರನ್ನು ಸ್ಮರಣೆ ಮಾಡಿದ್ರೆ ಕಷ್ಟವೆಲ್ಲ ದೂರವಾಗುತ್ತೆ .
ಉಜ್ಜಯಿನಿ ಲಿಂ.ಶ್ರೀ ಸಿದ್ದಲಿಂಗ ಜಗದ್ಗುರುಗಳವರನ್ನು ಸ್ಮರಣೆ ಮಾಡಿ ಒದಗಿದ ಕಷ್ಟವೆಲ್ಲ ಪರಿಹಾರವಾಗುತ್ತೆ ದೂರವಾಗುತ್ತೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ 1008 ಶ್ರೀ ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಹೇಳಿದರು.
ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಬುಧವಾರ ನಡೆದ ಲಿಂ.ಶ್ರೀ ಸಿದ್ದಲಿಂಗ ಜಗದ್ಗುರುಗಳವರ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಅವರು, ಲಿಂ.ಸಿದ್ದಲಿಂಗ ಜಗದ್ಗುರುಗಳವರು ರಾಜ್ಯ ಹೊರ ರಾಜ್ಯಗಳಲ್ಲಿ ಸಂಚರಿಸಿ ಧರ್ಮ ಅಭಿಮಾನ ಬೆಳೆಸಿದರು. ಅವರ ಜೀವಿತ ಅವಧಿಯಲ್ಲಿ ಅನೇಕ ಪವಾಡಗಳನ್ನು, ಲೀಲೆಗಳನ್ನು ತಪಸ್ಸು ಮಾಡಿ ಪವಾಡ ಪುರುಷ ಮಹಾ ತಪಸ್ವಿ ಎನಿಸಿಕೊಂಡರು. ಅವರು ವ್ಯಕ್ತಿಯಾಗಿರದೆ ಶ್ರೀ ಪೀಠಕ್ಕೆ ದೊಡ್ಡ ಶಕ್ತಿಯಾಗಿದ್ದರು ಎಂದರು.
ತಂದೆ ತಾಯಿಯ ಮನಸ್ಸನ್ನು ನೋಯಿಸಬೇಡಿ. ಸಮಾಜದಲ್ಲಿ ಗುರು ಹಿರಿಯರಿಗೆ ತಂದೆ ತಾಯಿಗಳಿಗೆ ಗೌರವ ಕೊಡುವ ಗುಣ ಬೆಳೆಯಲಿ ಎಂದು ಅಶಿಸಿದರು. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಪ್ರಾರಂಭಕ್ಕೆ ಕಾರಣಿ ಭೂತರಾದ ಲಿಂಗೈಕ ಸಿದ್ದಲಿಂಗ ಜಗದ್ಗುರುಗಳು ವೀರಶೈವ ಮಹಾಸಭಾ ಸ್ಥಾಪನೆಗೂ ಕೂಡ ಹಾನಗಲ್ ಕುಮಾರಸ್ವಾಮಿಗಳ ಸಂಕಲ್ಪಕ್ಕೆ ಪಾತ್ರರಾಗಿ ದೇಣಿಗೆ ಸಹ ನೀಡಿರುವುದನ್ನು ಇಲ್ಲಿ ಮರಿಸಬಹುದು ಎಂದರು. ಈ ಸಂದರ್ಭದಲ್ಲಿ ಕಲ್ಯಾಣ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮಿ. ವರ ಸದ್ಯೋಜಾತ ಶಿವಾಚಾರ್ಯ ಸ್ವಾಮಿ, ದಿಂಡದಲ್ಲಿ ಶ್ರೀಗಳು, ಹೊನ್ನಾಳಿ ಶ್ರೀಗಳು, ನಾಡಿನ ಇತರ ಸ್ವಾಮೀಜಿಗಳು ಪಾಲ್ಗೊಂಡಿದ್ದರು, ಬಳ್ಳಾರಿ-ವಿಜಯನಗರ ಲೋಕಸಭಾ ಸದಸ್ಯರಾದ ತುಕಾರಾಂ, ಸಿದ್ದರಾಮ ಕಲ್ಮಠ ಸಾಹಿತಿಗಳು ನಿಕಟ ಪೂರ್ವ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ, ಪುರಾಣ ಪ್ರವಚನಕಾರ ಪಂಡಿತ್ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಸಿದ್ದರಾಮಯ್ಯ ಸ್ವಾಮಿ ಹಿರೇಮಠ ಸೋಮನಾಳು , ಪೀಠದ ವ್ಯವಸ್ಥಾಪಕ ವೀರೇಶ್, ಹಾಗೂ ಸಿಬ್ಬಂದಿ ವರ್ಗ ಕುರುಗೋಡು ಸಿದ್ದೇಶ್, ಬಂಗಾರಿ ಶಿವಣ್ಣ, ಸದ್ಧರ್ಮ ಹಿರಿಯ ನಾಗರಿಕಾರ ಸಂಘದ ಚನ್ನವೀರಸ್ವಾಮಿ, ಸಂಗೀತ ಕಲಾವಿದರಾದ ವಾಗೀಶಯ್ಯ,ಸಿದ್ದು ಬಾಗೇವಾಡಿ, ಸಿದ್ದಲಿಂಗಯ್ಯ, ಯು.ಎಂ. ವೀರಪ್ಪಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ನಟರಾಜ ನಿವೃತ್ತಿ ಶಿಕ್ಷಕ ಜೋಷಿ ಇದ್ದರು…
ವರದಿ ಎಂ ಮಲ್ಲಿಕಾರ್ಜುನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030