ಉಜ್ಜಿನಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಕೂಟದ ಪಂದ್ಯಾವಳೆ ಉದ್ಘಾಟನೆ
ಕೊಟ್ಟೂರು ತಾಲೂಕು, ಮಂಗಾಪುರ ಗ್ರಾಮದಲ್ಲಿ ಉಜ್ಜಿನಿ ವಲಯ ಮಟ್ಟದ ಕ್ರೀಡಾಕೂಟಗಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಾಪುರ ಹಾಗೂ ಮಂಗಾಪುರ ಮಹಾದೈವದವರಿಂದ ಆಯೋಜಿಸಲಾಗಿತ್ತು ಪಂದ್ಯಾವಳಿಯ ಉದ್ಘಾಟನೆಯನ್ನು ಎಂ ಗುರುಸಿದ್ದನಗೌಡ ವಕೀಲರು ಹಾಗೂ ಗುಳಿಗೆ ವೀರೇಂದ್ರ ಉದ್ಘಟಿಸಿದರು. ಮಾನ್ಯ ಶಾಸಕರ ಸಹೋದರರಾದ ಎನ್ಟಿ ತಮ್ಮಣ್ಣ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು ಮತ್ತು ಧ್ವಜಹಾರಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ ಮಾಂತೇಶ್ ಅವರು ನೆರವೇರಿಸಿದರು. ಮಂಗಾಪುರದ ಕಾಲೇಜು ವಿದ್ಯಾರ್ಥಿಗಳಿಂದ ಕ್ರೀಡಾ ಜ್ಯೋತಿರ್ಯಾಲಿ ನಡೆಯಿತು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಎಂಪಿ ರಾಜಶೇಖರ್ ಗೌಡ್ರು. ಜಿ ಬಸವರಾಜ್. ನೇತ್ರಾವತಿ ಓಬಳೇಶ್. ಬಣಕಾರ್ ಮಹೇಶಮ್ಮ ಶರಣಪ್ಪ. ಉಮಾ ಎಚ್ ಸಿದ್ದಪ್ಪ ಹಾಗೂ ಊರಿನ ಮುಖಂಡರಾದ ಎಸ್ ದೊಡ್ಡ ವೀರಪ್ಪ ನಿವೃತ್ತ ಶಿಕ್ಷಕರು ಮಂಗಾಪುರ ಗ್ರಾಮದ ಹಳೆ ವಿದ್ಯಾರ್ಥಿಗಳು ಮತ್ತು ಹಾಲಿ ವಿದ್ಯಾರ್ಥಿಗಳು ಮಾಂತೇಶ್ ಅರ್ಚಕರು ಪಿಟಿಒ.ಶಶಿಧರ ವಲಯ ಸಂಚಾಲಕರಾದ ಮಲ್ಲಿಕಾರ್ಜುನ್. ಸಾ ಹಿ ಪ್ರ ಶಾಲಾ ಮಂಗಾಪುರ ಸಿಬ್ಬಂದಿ ವರ್ಗದವರು ಆರಕ್ಷಕ ಠಾಣಾ ಕಾನಹೊಸಹಳ್ಳಿ ಅವರು ಆರೋಗ್ಯ ಸಿಬ್ಬಂದಿಯವರು ವಿದ್ಯುತ್ ಇಲಾಖೆಯವರು ಮತ್ತು ಸಮಸ್ತ ಮಂಗಾಪುರ ನಾಗರಿಕ ಬಾಂಧವರು ಸೇರಿ ಶಾಂತಿ ರೀತಿಯಿಂದ ಕ್ರೀಡೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030