ದಲಿತರನ್ನ ಶೋಷಿಸುತ್ತಿರುವ, ಅಕ್ರಮ ಮದ್ಯ ಮಾರಾಟ ನಿಲ್ಲಿಸಿ- ಕಾವಲ್ಲಿ ಶಿವಪ್ಪ ಒತ್ತಾಯ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಲಿತರನ್ನ ಶೋಷಿಸುತ್ತಿರುವ, ಅಕ್ರಮ ಮದ್ಯ ಮಾರಾಟ ನಿಲ್ಲಿಸಿ- ಕಾವಲ್ಲಿ ಶಿವಪ್ಪ ಒತ್ತಾಯ*
-ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಲಿತರ ಸಭೆಯಲ್ಲಿ ದಲಿತ ಮುಖಂಡರು ಮಾತನಾಡಿದರು,ಅಕ್ರಮ ಮದ್ಯ ಮಾರಾಟ ತಡೆಹಿಡಿಯಬೇಕು ಇದರಿಂದಾಗಿ ದಲಿತರೇ ಹೆಚ್ಚಾಗಿ ಆರ್ಥಿಕ ಹಿನ್ನಡೆಯಾಗುತ್ತಿದ್ದಾರೆಂದು ಪಪ ಸದಸ್ಯ ಹಾಗೂ ವಾಲ್ಮೀಕಿ ಮಖಂಡ ಕಾವಲ್ಲಿ ಶಿವಪ್ಪನಾಯಕ ದೂರಿದರು.ಅಕ್ರಮ ಮದ್ಯ ಮಾರಾಟದಿಂದ ಬಂಡವಾಳ ಶಾಹಿಗಳು ಬಲಿಷ್ಠರಾಗುತಿದ್ದಾರೆ ಆದರೆ ಅದರಿಂದಾಗಿ ದಲಿತ ವರ್ಗ ಆರ್ಥಿಕ ಶೋಷಣೆಗೆ ಗುರಿಯಾಗಿ ಅದಕ್ಕೆ ಬಲಿಯಾಗುತ್ತಿದೆ.ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಮಿತಿಮೀರಿದೆ,ಶೀಘ್ರವೇ ಅಕ್ರಮ ಮದ್ಯ ಮಾರಾಟಕ್ಕೆ ಸೂಕ್ತ ಕಡಿವಾಣ ಹಾಕಬೇಕಿದೆ ಎಂದರು.ವಾಲ್ಮೀಕಿ ಯುವ ಮುಖಂಡ ಕೆ.ಬಿ.ಸುರೇಶ್ ಮಾತನಾಡಿ,ಸಂಡೂರು ರಸ್ಥೆಯಲ್ಲಿರುವ ಅಶ್ವಮೇಧ ರೆಸ್ಟೋರೇಂಟ್ ನಲ್ಲಿ ಮದ್ಯ ಮಾರಾಟ ತುಂಬಾ ಅವ್ಯವಸ್ಥೆಯಿಂದ ಕೂಡಿದ್ದು,ಗಲಭೆಗಳು ಸೃಷ್ಟಿಯಾಗುತ್ತಿವೆ ಅಗತ್ಯ ನಿಯಮಗಳನ್ನ ಪಾಲಿಸುತಿಲ್ಲ.ಕಾರಣ ಅಗತ್ಯ ಶಿಸ್ಥು ಕ್ರಮ ಜರುಗಿಸಬೇಕಿದೆ ಮತ್ತು ಕಾನೂನಿನ ನಿಯಮಗಳನ್ನು ಪಾಲಿಸಿ ಸುವ್ಯವಸ್ಥೆ ಕಾಪಾಡುವಂತೆ ಕ್ರಮ ಜರುಗಿಸಬೇಕೆಂದರು.ಶಾಲಾ ಕಾಲೇಜ್ ಗಳಿಂದ ವಿದ್ಯಾರ್ಥಿಗಳು ಬರುವಾಗ,ಕೆಲ ವಿದ್ಯಾರ್ಥಿಗಳು ಹಾಗೂ ಕೆಲ ಕಿಡಿಗೇಡಿಗಳು ರಸ್ಥೆಯಲ್ಲಿಯೇ ಪುಂಡಾಟಿಕೆ ಮೆರೆಯುತ್ತಿದ್ದಾರೆಂದರು.

ಹಿರಿಯ ಪತ್ರಕರ್ತ ಎ.ಎಮ್. ಸೋಮಶೇಖರಯ್ಯ ಮಾತನಾಡಿ ಕಾಲೇಜು ವಿದ್ಯಾರ್ಥಿಗಳು ರಸ್ಥೆಯಲ್ಲಿ ಅಸ್ಥವ್ಯಸ್ಥವಾಗಿ ಸಂಚರಿಸುವ ಮೂಲಕ, ಪಾದಾಚಾರಿಗಳಿಗೆ ಹಾಗೂ ವಾಹನಗಳಿಗೆ ತೀವ್ರ ಅಡೆ ತಡೆಯುಂಟು ಮಾಡುತಿದ್ದು, ಕಾಲೇಜುಗಳ ವಿದ್ಯಾರ್ಥಿಗಳಿಗೆ ರಸ್ಥೆ ಸುರಕ್ಷತೆ ಬಗ್ಗೆ ಅಗತ್ಯ ಜಾಗ್ರತೆ ಮೂಡಿಸಬೇಕಿದೆ ಎಂದರು.ಕೊಟ್ರೇಶ ಮಾತನಾಡಿ ಪಟ್ಟಣ ಸೇರಿದಂತೆ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮೀಣ ಭಾಗದ,ಶಾಲಾ ಕಾಲೇಜುಗಳು ಹಾಗೂ ಹಾಳು ಬಿದ್ದ ಸರ್ಕಾರಿ ಕಟ್ಟಡಗಳು ಅನೈತಿಕ ತಾಣಗಳಾಗುತ್ತಿವೆ,ಸಂಬಂಧಿಸಿದಂತೆ ಅಗತ್ಯ ಶಿಸ್ತು ಕ್ರಮಗಳನ್ನ ಕೈಗೊಳ್ಳಬೇಕೆಂದರು.ಮಾಜಿ ಸೈನಿಕ ರಮೇಶ ಹಾಗೂ ಪಪಂ ಸದಸ್ಯ ಕಾಲ್ಚಟ್ಟಿ ಈಶಪ್ಪ ಮಾತನಾಡಿ,ರಾಜೀವ ಗಾಂಧಿ ನಗರದಲ್ಲಿ ಪುಂಡ ಪುಡಾರಿ ರೋಡ್ ರೋಮಿಯೋಗಳ ಉಪಟಳವಿದ್ದು,ಇತ್ತೀಚೆಗೆ ಅಪರಿಚಿತ ವ್ಯಕ್ತಿಗಳು ಎತೇಚ್ಚವಾಗಿ ಕಾಣಸಿಗುತ್ತಿದ್ದು ಕಾರಣ ಮುಂಜಾಗ್ರತಾ ಕ್ರಮವಾಗಿ, ಮುಚ್ಚಿರುವ ಉಪಠಾಣೆಯನ್ನ ಶೀಘ್ರವೇ ಪ್ರಾರಂಭಿಸಬೇಕು ಹಾಗೂ ತುರ್ತಾಗಿ ಪೊಲಿಸ್ ಪೇದೆಯನ್ನ ನಿತ್ಯ ಕರ್ಥವ್ಯಕ್ಕೆ ನಿಯೋಜಿಸಬೇಕೆಂದರು.ಹಿರಿಯ ದಲಿತ ಮುಖಂಡರು ಹಾಗೂ ನಿವೃತ್ತ ಶಿಕ್ಷಕರಾದ ಕರಿಬಸಪ್ಪ ಮಾತನಾಡಿ, ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಸಾಕಷ್ಟು ಗೌರವವಿದ್ದು,ಇಲಾಖೆಯ ಅಧಿಕಾರಿಗಳಲ್ಲಿ ಅದನ್ನ ಉಳಿಸಿಕೊಳ್ಳುವ ಜವಾಬ್ದಾರಿ ಇದೆ.ಮುಖಂಡರು ನಾಗರೀಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ಮತ್ತು ಸೌಹಾರ್ಧತೆಯೊಂದಿಗೆ,ವಿಶ್ವಾಸ ವಿಟ್ಟು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದೋಣ.ಈ ಮೂಲಕ ಇಲಾಖಾಧಿಕಾರಿಗಳಿಗೆ ಕರ್ಥವ್ಯಕ್ಕೆ ಸಹಕರಿಸೋಣ,ಎಲ್ಲರೂ ಕಾನುನು ದೃಷ್ಟಿಯಿಂದ ಅವರೊಂದಿಗೆ ಸ್ಪಂಧಿಸೋಣ ಎಂದು ಸಭೆಗೆ ಸೂಚಿದರು.ಸಭೆಯಲ್ಲಿದ್ದ ಸಿಪಿಐ ವಸಂತ ಅಸೋದೆ ಮಾತನಾಡಿ ಸಭೆಯಲ್ಲಿ ಚರ್ಚಿಸಿದ ಕೆಲವೊಂದು ಸಮಸ್ಯೆಗಳಿಗೆ ತುರ್ತಾಗಿ ಸ್ಪಂಧಿಸಲಾಗುವುದು,ಕೆಲವು ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಂಡು ಕೊಳ್ಳಬೇಕಿದೆ. ಸಭೆಯಲ್ಲಿ ಚರ್ಚಿಸಿದ ದಲಿತರ ಹಾಗೂ ನಾಗರೀಕರ ಎಲ್ಲಾ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂಧಿಸಲಾಗುವುದೆಂದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *