ಬುಡಕಟ್ಟು ಜನಾಂಗದವರಿಗೆ ಕಾನೂನು ಕಾರ್ಯಗಾರ..!!!

ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ

*ಬುಡಕಟ್ಟು ಜನಾಂಗದವರಿಗೆ ಕಾನೂನು ಕಾರ್ಯಗಾರ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ತಾಲೂಕು ಕಾನೂನು ಸೇವೆಗಳ ಸಮಿತಿ,ತಾಲೂಕು ವಕೀಲರ ಸಂಘ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕೂಡ್ಲಿಗಿ.ಇವರವ ಸಹಯೋಗದಲ್ಲಿ ಸಂಡೂರು ರಸ್ಥೆಯಲ್ಲಿರುವ ಬುಡಕಟ್ಟು ಜನಾಂಗದವರ ಗುಡಾರಗಳ ಹತ್ತಿರ,ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು.ವಕೀಲರಾದ ಜಿ.ಎಮ್.ಮಲ್ಲಿಕಾರ್ಜುನಯ್ಯ “ಬುಡಕಟ್ಟು ಜನಾಂಗದವರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳ ಕುರಿತು” ಮಾತನಾಡಿದರು.ಇಲಾಖೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು,ಕಾನೂನು ಅರಿವು ಪ್ರತಿಯೊಬ್ಬರು ಹೊಂದಬೇಕು ಜನನ ಮರಣ ನೊಂದಣಿ ಮಾಡಿಸಬೇಕು. ಶೈಕ್ಷಣಿಕವಾಗಿ ಎಲ್ಲರೂ ಅಭಿವೃದ್ಧಿ ಹೊಂದಬೇಕು ಮತ್ತು ಸರ್ವತೋಮುಖ ಅಭಿವೃದ್ಧಿ ಹೊಂದಬೇಕೆಂದರು.ಅಗತ್ಯ ಅನುಗುಣವಾಗಿ ಕಾನೂನು ಸೇವೆಗಳ ಸಮಿತಿ ನೆರವನ್ನ ಪಡೆಯಬಹುದು, ಕಾನೂನು ತಿಳುವಳಿಕೆ ಯನ್ನ ಪ್ರತಿಯೊಬ್ಬರು ಹೊಂದಬೇಕೆಂದರು.ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ ಮಾತನಾಡಿ,ಕಾನೂನು ಸೇವೆಗಳ ಪ್ರಾಧಿಕಾರ ಕಾನುನು ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕೆಂದರು.ಹಿರಿಯ ಮಹಿಳಾ ನ್ಯಾಯವಾದಿ ಶ್ರೀಮತಿ ಕೆ.ಹೆಚ್.ಎಮ್.ಶೈಲಜಾ ಮಾತನಾಡಿದರು,ಸರ್ಕಾರದ ಮೂಲಭೂತ ಸೌಕರ್ಯಗಳನ್ನ ಹಿಂದಿ ಸ್ವಾವಲಂಭಿ ಜೀವನ ನಡೆಸಬಹುದಾಗಿದೆ.ಇಲ‍ಾಖೆಯ ಸೌಕರ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು,ಅಗತ್ಯ ವಿದ್ದಲ್ಲಿ ನ್ಯಾಯಾಲಯದ ಕಾನೂನು ಸೇವಾ ಸಮಿತಿ ಸದುಪಯೋಗ ಪಡಿಸಿಕೊಂಡು ಸದೃಢವಾಗಬೇಕೆಂದರು.ಸಹಾಯಕ ಸರ್ಕಾರಿ ಅಭಿಯೋಜಕರಾದ ಹೊಸವಡ್ರು ಅಣ್ಣೇಶ,ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ್ ಭಾಷಾ ಹಾಗೂ ಸಮಾಜ ಕಲ್ಯಾಣಾಧಿಕಾರಿ ಜಗದೀಶ ರವರು, ತಮ್ಮ ಇಲಾಖೆಗಳಿಂದ ದೊರಕುವ ಶೈಕ್ಷಣಿಕ ಮತ್ತು ಇತರೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ತಾಲೂಕು ಕಾನೂನು ಸೇವಾ ಸಮಿತಿಯ ಶಿವರುದ್ರಯ್ಯ ವೇದಿಕೆಯಲ್ಲಿದ್ದರು.ವಕೀಲ ಹಾಗೂ ಕಾರ್ಮಿಕ ಮುಖಂಡ ಸಿ.ವಿರುಪಾಕ್ಷಪ್ಪ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ನೂರಾರು ಬುಡ ಕಟ್ಟು ಜನಾಂಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *