ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಕಣ್ಣು ಆರೋಗ್ಯದ ಕನ್ನಡಿ-ಡಿವೈಎಸ್ಪಿ ಹರೀಶ್*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪೊಲೀಸ್ ವಸತಿ ಗೃಹ ಹಾಗೂ ತಾಪಂ ಆವರಣ ಮತ್ತು ಪಟ್ಟಣದ ವಿವಿದೆಡೆಗಳಲ್ಲಿ,ಕಠಾರೆ ಆಪ್ಟಿಕಲ್ಸ್ ಕಂಪನಿ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಾಗೂ ಕನ್ನಡಕ ಮಾರಾಟ ಮೇಳ ಜರುಗಿತು.ಡಿವೈಎಸ್ಪಿ ಹರೀಶ್ ಮಾತನಾಡಿದರು,ವ್ಯಕ್ತಿಯ ಕಣ್ಣುಗಳು ಆತನ ಆರೋಗ್ಯ ಸ್ಥಿತಿ ಗತಿಯನ್ನು ಬಿಂಬಿಸುವ ಕನ್ನಡಿ
ಎನ್ನಲಾಗುತ್ತದೆ.ಕಣ್ಣುಗಳು ದೇಹದ ಬಹು ಮುಖ್ಯ ಅಂಗಗಳಾಗಿದ್ದು ಅವುಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು,ಕಣ್ಣುಗಳು ಆರೋಗ್ಯಕರ ಸ್ಥಿತಿಯಲ್ಲಿ ಇರಬೇಕೆಂದರೆ ಅವುಗಳಿಗೆ ರಕ್ಷಣೆ ಕೊಡುವ ಪೌಷ್ಟಿಕಾಂಶದ ಆಹಾರ ಸೇವಿಸಿದರೆ ಮಾತ್ರ ಸಾಧ್ಯ ಎಂದರು.ಕಣ್ಣು ದಾನ ಅತ್ಯಂತ ಶ್ರೇಷ್ಠ ದಾನವಾಗಿದೆ ಅವು ಅಂದರ ಬಾಳನ್ನು ಬೆಳಕಾಗಿಸುತ್ತವೆ, ನಾಡಿನ ಗಣ್ಯಮಾನ್ಯರು ಕಣ್ಣುದಾನ ಮಾಡಿ ಆದರ್ಶ ಮೆರೆದಿದ್ದಾರೆ ಅದು ಎಲ್ಲರಿಗೂ ಅನುಕರಣೀಯ ಎಂದರು.
ವೇದಿಕೆಯಲ್ಲಿ ಸಿಪಿಐ ವಸಂತ ಅಸೊದೆ,ಪಿಎಸ್ಐ ಹಾಗೂ ಕಠಾರೆ ಆಪ್ಟಿಕಲ್ಸ್ ಕಂಪನಿ ವ್ಯವಸ್ಥಾಪಕ ಸಿ.ಎ.ಮೋಹನ್
ವೇದಿಕೆಯಲ್ಲಿದ್ದರು.ಸಿಬ್ಬಂದಿ ವಿಶ್ವನಾಥ,ಗಾಳಿರಜ್,ಕೆ.ಎಸ್.ಕೊಟ್ರೇಶ ಸೇರಿದಂತೆ ಇತರರು ತಪಾಸಣೆ ಕಾರ್ಯಗಾರದಲ್ಲಿ ಕಾರ್ಯ ನಿರ್ವಹಿಸಿದರು.ತಾಪಂ ಆವರಣದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ತಳಾಸ ವೆಂಕಟೇಶಪ್ಪ,ಚಂದ್ರಶೇಖರ,ಕೆ.ಹೆಚ್.ಎಂ.ಸಚ್ಚಿನ್ ಕುಮಾರ್, ಬಾಸುನಾಯ್ಕ,ಸಿರಿಬಿ ಮಂಜುನಾಥ,ದಲಿತ ಮುಖಂಡ ಎಸ್.ದುರುಗೇಶ,ಎ.ಡಿ.ಗುಡ್ಡ ಅಜ್ಜಪ್ಪಗೌಡ,ಪಪಂ ಪೌರ ನೌಕರರು ಜನಪ್ರತಿನಿಧಿಗಳು,ಪತ್ರಕರ್ತರಾದ ವಿ.ಜಿ.ವೃಷಭೇಂದ್ರ,ಎಲೆ.ನಾಗರಾಜ,ಗ್ರಾಪಂ ಕಾರ್ಯದರ್ಶಿ ಬಣವಿಕಲ್ಲು ವಿಶ್ವನಾಥ ಹಾಗೂ ತಾಪಂ ಸಿಬ್ಬಂದಿಯವರು,ಕಣ್ಣು ತಪಾಸಣೆಯಲ್ಲಿ ಭಾಗವಹಿಸಿದ್ದರು. ಕಠಾರೆ ಕಂಪನಿಯಿಂದ ಉಚಿತ ಕಣ್ಣು ತಪಾಸಣೆ ಯೊಂದಿಗೆ ಕನ್ನಡಕಗಳ ಮಾರಾಟ ಮೇಳದಲ್ಲಿ,ಪಟ್ಟಣದ ಹಿರಿಯ ನಾಗರೀಕರು ಹಾಗೂ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜನಪ್ರತಿನಿಧಿಗಳು ಅಧಿಕಾರಿಗಳು ಭಾಗಿಯಾಗಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
